ಹೈದರಾಬಾದ್: 12 ವರ್ಷದೊಳಗಿನ ಮಕ್ಕಳಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ನೀಡಲಾಗುವುದೆಂದು ತೆಲಂಗಾಣ ಸಾರಿಗೆ ಇಲಾಖೆ ಘೋಷಿಸಿದೆ.
ಟಿಎಸ್‍ಆರ್‌ಟಿಸಿ(Telangana State Road Transport Corporation) ಕೇಂದ್ರ ಕಚೇರಿಯ ಬಸ್ ಭವನದಲ್ಲಿ ನಡೆದ ಹೊಸ ವರ್ಷಾಚರಣೆ ಕಾರ್ಯಕ್ರಮದಲ್ಲಿ ಟಿಎಸ್‍ಆರ್‌ಟಿಸಿ(TSRTC) ಅಧ್ಯಕ್ಷ ಬಾಜಿರೆಡ್ಡಿ ನೂತನ ಸವಲತ್ತನ್ನು ಘೋಷಿಸಿದರು. ತಮ್ಮ ಪೋಷಕರೊಂದಿಗೆ ಪ್ರಯಾಣಿಸುವ ಮಕ್ಕಳಿಗೆ ಈ ಅವಕಾಶವನ್ನು ನೀಡಲಾಗುತ್ತಿದೆ. 12 ವರ್ಷದ ಒಳಗಿನ ಮಕ್ಕಳು ಉಚಿತವಾಗಿ ಬಸ್‍ನಲ್ಲಿ ಪ್ರಯಾಣಿಸಬಹುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ ಸಂಜನಾ ಗಲ್ರಾನಿ
Advertisement
Advertisement
ಹಂತ ಹಂತವಾಗಿ ಟಿಎಸ್‍ಆರ್‌ಟಿಸಿ ಆದಾಯ ಹೆಚ್ಚಿಸಿಕೊಳ್ಳುವತ್ತ ತಾವು ಗಮನಹರಿಸಿಸಲಾಗುತ್ತದೆ. ಸಂಕ್ರಾಂತಿ, ಹಬ್ಬದ ವಿಶೇಷ ಬಸ್‍ಗಳಲ್ಲಿ ಸಾಮಾನ್ಯ ದರವನ್ನು ಮಾತ್ರ ವಿಧಿಸಲು ನಿರ್ಧರಿಸಲಾಗಿದೆ. ಇದರೊಂದಿಗೆ, ನಿರೀಕ್ಷಿತ ಮಟ್ಟದಲ್ಲಿ ಆದಾಯವನ್ನು ಹೆಚ್ಚಿಸಲು ಸಾಧ್ಯವಿದೆ ಎಂದು ಅವರು ಹೇಳಿದರು. ಇದನ್ನೂ ಓದಿ: ಕುಟುಂಬಕ್ಕೆ ಹೊಸ ಅತಿಥಿಯ ಆಗಮನದ ನೀರಿಕ್ಷೆಯಲ್ಲಿದ್ದಾರೆ ಕಾಜಲ್ ಅಗರ್ವಾಲ್