ಹೈದರಾಬಾದ್: ಟಾಲಿವುಡ್ ನಟಿ ಕಾಜಲ್ ಅಗರ್ವಾಲ್ ತಾಯಿ ಆಗುತ್ತಿದ್ದಾರೆ. ಈ ವಿಚಾರವನ್ನು ಅವರ ಪತಿ ಗೌತಮ್ ಕಿಚ್ಲು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನಿನ್ನೆಡೆಗೆ ನೋಡುತ್ತಿದ್ದೇನೆ 2022 ಎಂದು ಬರೆದಿರುವ ಗೌತಮ್, ಕಾಜಲ್ ಅವರ ಮುದ್ದಾದ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಕಾಜಲ್ ದಂಪತಿ ಕುಟುಂಬಕ್ಕೆ ಹೊಸ ಅತಿಥಿ ಆಗಮಿಸುವುದನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಇದನ್ನೂ ಓದಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ ಸಂಜನಾ ಗಲ್ರಾನಿ
Advertisement
View this post on Instagram
Advertisement
ಇತ್ತೀಚೆಗಷ್ಟೇ ಮದುವೆಯ ವಾರ್ಷಿಕೋತ್ಸವವನ್ನು ಆಚರಿಸಿದ್ದ ಕಾಜಲ್, ಗೌತಮ್ ಹೊಸ ವರ್ಷದ ಶುಭಾಷಯವನ್ನು ಕೋರಿದ್ದಾರೆ. ಜೊತೆಗೆ ತಾಯಿಯಾಗುತ್ತಿರುವುದನ್ನು ಬಿಂಬಿಸುವ ಹೊಸ ಫೋಟೋವೊಂದನ್ನೂ ಕಾಜಲ್ ಅಗರ್ವಾಲ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Advertisement
View this post on Instagram
Advertisement
ಕಾಜಲ್ ಹಾಗೂ ಗೌತಮ್ 2020ರ ಅಕ್ಟೋಬರ್‌ನಲ್ಲಿ ಮುಂಬೈನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಗೌತಮ್ ಉದ್ಯಮಿಯಾಗಿದ್ದಾರೆ. ಕಾಜಲ್ ಚಿತ್ರರಂಗಕ್ಕೆ ಕಾಲಿಟ್ಟಿದ್ದು 2004ರಲ್ಲಿ. ತಮ್ಮ ಅಭಿನಯದ ಮೂಲಕವಾಗಿ ಟಾಲಿವುಡ್‍ನಲ್ಲಿ ಒಳ್ಳೆಯ ಹೆಸರನ್ನು ಮಾಡಿದ್ದಾರೆ. ಬಹುಬೇಡಿಕೆಯ ನಟಿಯರ ಸಾಲಿನಲ್ಲಿ ಕಾಜಲ್ ಅಗರ್ವಾಲ್ ಇದ್ದಾರೆ.