ಬಳ್ಳಾರಿ: ಜಿಲ್ಲೆಯಲ್ಲಿ ಸಾವಿರಾರು ಗ್ರಾಮ ಪಂಚಾಯತ್ ಸದಸ್ಯರ ಸದಸ್ಯತ್ವಕ್ಕೆ ಇದೀಗ ಕುತ್ತು ಬಂದಿದೆ. ಕಾರಣ ಇವರ್ಯಾರೂ ಹಗರಣ ಮಾಡಿಲ್ಲ. ಆದ್ರೆ ಟಾಯ್ಲೆಟ್ ಕಟ್ಟಿಕೊಂಡಿಲ್ಲ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಯಲು ಶೌಚ ಮುಕ್ತ ಗ್ರಾಮಕ್ಕೆ ಪಣ ತೊಟ್ಟಿದೆ. ಗ್ರಾಮ ಪಂಚಾಯ್ತಿ ಮಟ್ಟದಲ್ಲೇ ಇದರ ಅರಿವು ಮೂಡಿಸಬೇಕು ಅಂತಾ ಬೊಬ್ಬೆ ಹೊಡೀತಿವೆ. ಆದರೆ ಬಳ್ಳಾರಿ ಜಿಲ್ಲೆಯಲ್ಲಿ ಮಾತ್ರ ಗ್ರಾಮ ಪಂಚಾಯ್ತಿ ಸದಸ್ಯರ ಮನೆಗಳಲ್ಲಿ ಟಾಯ್ಲೆಟ್ ಕಟ್ಟಿಕೊಂಡಿಲ್ಲ. ಬರೋಬ್ಬರಿ 1,618 ಗ್ರಾಮ ಪಂಚಾಯತ್ ಸದಸ್ಯರ ಮನೆಗಳಲ್ಲೇ ಶೌಚಾಲಯಗಳೇ ಇಲ್ಲ.
ಹೀಗಾಗಿ ಶೌಚಾಲಯವಿಲ್ಲದ ಸದಸ್ಯರ ಸದಸ್ಯತ್ವವನ್ನೇ ರದ್ದು ಮಾಡಲು ಬಳ್ಳಾರಿ ಜಿಲ್ಲಾ ಪಂಚಾಯತ್ ಮುಂದಾಗಿದೆ. ಇದಕ್ಕಾಗಿ 1 ತಿಂಗಳ ಗಡುವು ನೀಡಲಾಗಿದೆ. ನೋಟಿಸ್ ಕೂಡಾ ಜಾರಿ ಮಾಡಲಾಗಿದೆ.
ಪಂಚಾಯತ್ ರಾಜ್ಯ ನಿಯಮದ ಪ್ರಕಾರ ಪಂಚಾಯತ್ ಸದಸ್ಯರು ಆಯ್ಕೆಯಾದ ಆರು ತಿಂಗಳಲ್ಲಿ ಕಡ್ಡಾಯವಾಗಿ ಶೌಚಾಲಯ ನಿರ್ಮಾಣ ಮಾಡಿಕೊಳ್ಳಬೇಕು. ಆಮೇಲೆ ಮುಚ್ಚಳಿಕೆ ಬರೆದುಕೊಡಬೇಕು. ಇಲ್ಲದೇ ಹೋದಲ್ಲಿ ಸದಸ್ಯತ್ವ ರದ್ದು ಮಾಡುವ ಅಧಿಕಾರ ಸರ್ಕಾರಕ್ಕಿದೆ ಎಂದು ಜಿಲ್ಲಾ ಪಂಚಾಯತ್ ಸಿಇಓ ರಾಜೇಂದ್ರ ಹೇಳಿದ್ದಾರೆ.