ಬಳ್ಳಾರಿ: ಮುಸ್ಲಿಂ ಸಮುದಾಯದ ಪ್ರಮುಖ ಹಬ್ಬವಾದ ರಂಜಾನ್ ಹಬ್ಬ ಸೋಮವಾರ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಬಳ್ಳಾರಿ ಮಹಾನಗರ ಪಾಲಿಕೆ ವಿಶೇಷ ವ್ಯವಸ್ಥೆಯನ್ನು ಕಲ್ಪಿಸಿದೆ.
ರಂಜಾನ್ ಹಬ್ಬದ ಪ್ರಯುಕ್ತ ಬಳ್ಳಾರಿ ಮಹಾನಗರದಲ್ಲಿ ಮುಸ್ಲಿಂ ಬಾಂಧವರಿಗೆ 15 ಟ್ಯಾಂಕರ್‍ಗಳ ಮೂಲಕ ಎಲ್ಲ ವಾರ್ಡ್‍ಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಹಬ್ಬದ ಸಂದರ್ಭದಲ್ಲಿ ನೀರಿನ ಸಮಸ್ಯೆ ಉದ್ಭವಿಸಬಾರದು ಎಂಬ ದೃಷ್ಠಿಯಿಂದ ಪಾಲಿಕೆ ಈ ನಿರ್ಧಾರ ಕೈಗೊಂಡಿದೆ. ನೀರಿನ ಸಮಸ್ಯೆ ಉದ್ಭವಿಸಿದ್ದಲ್ಲಿ ಪಾಲಿಕೆಯನ್ನು ತಕ್ಷಣ ಸಂಪರ್ಕಿಸಲು ನಗರದ ನಾಗರೀಕರಲ್ಲಿ ಆಯುಕ್ತ ಎಂಕೆ ನಲ್ವಡಿ ಮನವಿ ಮಾಡಿದ್ದಾರೆ.
Advertisement
Advertisement
ಬಳ್ಳಾರಿ ಮಹಾನಗರದಲ್ಲಿ ಹಬ್ಬದಂದು ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೀರು ಸರಬುರಾಜು ಮಾಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ರವಿವಾರ ಮುಂಜಾನೆ ಪಾಲಿಕೆ ಆಯುಕ್ತ ಎಂ ಕೆ ನಲ್ವಡಿ ಹಾಗೂ ಮೇಯರ್ ವೆಂಕಟರಮಣ ನಗರದ ವಾಟರ್ ಬೂಸ್ಟ್‍ನಿಂದ ನೀರಿನ ಟ್ಯಾಂಕರಗಳನ್ನು ಎಲ್ಲ ವಾರ್ಡ್‍ಗಳಿಗೆ ತಲುಪಿಸುವಂತೆ ಟ್ಯಾಂಕರ್ ಸೌಲಭ್ಯದ ವ್ಯವಸ್ಥೆ ಮಾಡಿರುವುದು ವಿಶೇಷವಾಗಿದೆ.
Advertisement
ಹೀಗಾಗಿ ಪಾಲಿಕೆ ಹಬ್ಬಂದಂದು ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಂಡಿರುವುದು ಮುಸ್ಲಿಂ ಬಾಂಧವರಿಗೆವರಲ್ಲಿ ಹರ್ಷ ಮೂಡಿಸಿದೆ.
Advertisement