ಧಾರವಾಡ: ಮತದಾರ ಪಟ್ಟಿಯಲ್ಲಿ (Voter Id Scam) ಬಳ್ಳಾರಿ ಮಹಾನಗರ ಪಾಲಿಕೆಯ ನಿವೃತ್ತ ಆಯುಕ್ತರ ಹೆಸರನ್ನೇ ಕೈಬಿಟ್ಟಿರುವ ಅಚ್ಚರಿದಾಯಕ ಘಟನೆ ಧಾರವಾಡದಲ್ಲಿ (Dharwad) ನಡೆದಿದೆ. ಅಷ್ಟೇ ಅಲ್ಲ ಅವರನ್ನು ಸತ್ತಿದ್ದಾರೆಂದು ದಾಖಲಿಸಲಾಗಿದೆ.
ಡಾ.ಚೆನ್ನಬಸವರಾಜ ಶಿರಗುಪ್ಪಿ (Chennabasavaraja Shiraguppi) ಎಂಬವರ ಹೆಸರೇ ಇದೀಗ ಮತದಾರ ಪಟ್ಟಿಯಿಂದ ಡಿಲೀಟ್ ಆಗಿದೆ. ಶಿರಗುಪ್ಪಿ ಅವರು ಬಳ್ಳಾರಿಯ ಮಹಾನಗರ ಪಾಲಿಕೆ ಆಯುಕ್ತರಾಗಿ ಕೆಲಸ ಮಾಡಿ ನಿವೃತ್ತಿ ಹೊಂದಿದವರು. ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಸಂದರ್ಭದಲ್ಲಿ ಮತದಾನ ಮಾಡಲು ಹೋದ ಶಿರಗುಪ್ಪಿ ಅವರಿಗೆ, ಮಹಾನಗರ ಪಾಲಿಕೆ ಸಿಬ್ಬಂದಿ ಮತದಾರ ಪಟ್ಟಿಯಲ್ಲಿ ನಿಮ್ಮ ಹೆಸರೇ ಇಲ್ಲ ಎಂದು ಹೇಳಿದ್ದಾರಂತೆ. ಸರ್ವೆ ಮಾಡಲು ಬಂದಾಗ ಶಿರಗುಪ್ಪಿ ಅವರು ಇಲ್ಲ ಎಂದು ಹೇಳಿದ ಒಂದೇ ಒಂದು ಕಾರಣಕ್ಕೆ ಅವರ ಹೆಸರನ್ನೇ ಮತದಾರ ಪಟ್ಟಿಯಿಂದ ಡಿಲೀಟ್ ಮಾಡಿದ್ದಾರೆ. ಇದನ್ನೂ ಓದಿ: PFI ಸೇರಿ ಪೋಸ್ಟರ್ – ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ: ಬೊಮ್ಮಾಯಿ
Advertisement
Advertisement
ಹುಬ್ಬಳ್ಳಿ, ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ಸದ್ಯ 15 ಸಾವಿರ ಮತದಾರರ ಹೆಸರನ್ನು ಡಿಲೀಟ್ ಮಾಡಲಾಗಿದೆ. ಇದರಲ್ಲಿ ಶಾಸಕ ಅರವಿಂದ ಬೆಲ್ಲದ ಅವರೂ ಶಾಮೀಲಾಗಿದ್ದಾರೆ. ಶಾಸಕ ಅರವಿಂದ ಬೆಲ್ಲದ ಅವರಿಗೆ ಸರ್ವೇ ಮಾಡಿಸಲು ಅಧಿಕಾರ ಕೊಟ್ಟವರಾದರೂ ಯಾರು? ಕಾಂಗ್ರೆಸ್ ಕಾರ್ಪೊರೇಟರ್ ಇರುವ ಏರಿಯಾದಲ್ಲೇ ಮತದಾರರ ಹೆಸರು ಡಿಲೀಟ್ ಆಗುತ್ತಿವೆ ಎಂಬ ಆರೋಪವನ್ನು ಕಾಂಗ್ರೆಸ್ ಮುಖಂಡ ದೀಪಕ್ ಚಿಂಚೋರೆ ಮಾಡಿದ್ದಾರೆ.
Advertisement
Advertisement
ಮತದಾರ ಪಟ್ಟಿಯಲ್ಲಿ ಇತ್ತೀಚೆಗೆ ಸಾಕಷ್ಟು ಗೋಲ್‌ಮಾಲ್ ನಡೆಯುತ್ತಿದೆ ಎಂಬ ಆರೋಪವನ್ನು ಕಾಂಗ್ರೆಸ್ (Congress) ಮಾಡುತ್ತಲೇ ಬಂದಿದೆ. ಅಷ್ಟೇ ಏಕೆ ಆಡಳಿತಾರೂಢ ಬಿಜೆಪಿ (BJP) ಪಕ್ಷದ ಶಾಸಕರೇ ಆದ ಅರವಿಂದ ಬೆಲ್ಲದ (Arvind Bellad) ಅವರೇ ಮತದಾರ ಪಟ್ಟಿಯಲ್ಲಿ ಹೆಸರುಗಳು ಡಿಲೀಟ್ ಆಗಿವೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಡಿಲೀಟ್ ಆಗುವುದು ಒತ್ತೊಟ್ಟಿಗಿರಲಿ. ಆದರೆ ಜೀವಂತವಾಗಿರುವವರನ್ನೇ ಅವರು ಜೀವಂತವಾಗಿಲ್ಲ ಎಂದು ಮತದಾರರ ಪಟ್ಟಿಯಿಂದ ಹೆಸರನ್ನೇ ತೆಗೆದು ಹಾಕಿರುವ ಪ್ರಕರಣ ಧಾರವಾಡದಲ್ಲಿ ಈಗ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ವಿವಾದ- ಮುನಿಯಪ್ಪ, ರಮೇಶ್ ಕುಮಾರ್ ವಿರುದ್ಧ ಆಕ್ರೋಶ