Connect with us

Crime

ಉಡುಪಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ- ಕೊಲೆ ಶಂಕೆ

Published

on

ಉಡುಪಿ: ಜಿಲ್ಲೆಯ ಬೆಳ್ಳಂಪಳ್ಳಿಯಲ್ಲಿ ಅಪರಿಚಿತ ಶವ ಪತ್ತೆಯಾಗಿದೆ. ಶವವು ಕತ್ತು ಹಿಸುಕಿ ಕೊಲೆಗೈದ ಸ್ಥಿತಿಯಲ್ಲಿದ್ದು ತಲೆಯ ಮೇಲೆ ಗಾಯಗಳಿವೆ.

ಕುಕ್ಕೆಹಳ್ಳಿ ಸಮೀಪ ಭಾನುವಾರ ತಡರಾತ್ರಿ ಘಟನೆ ನಡೆದಿರುವ ಸಾಧ್ಯತೆ ಇದೆ. ದುಷ್ಕರ್ಮಿಗಳು ಕೊಲೆಗೈದು ಶವವನ್ನು ಕಾರಿನಲ್ಲಿ ಬಿಟ್ಟು ಪರಾರಿಯಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಇಂದು ಮಧ್ಯಾಹ್ನ ಘಟನೆ ಬೆಳಕಿಗೆ ಬಂದಿದ್ದು, ಸ್ಥಳಕ್ಕೆ ಹಿರಿಯಡ್ಕ ಪೊಲೀಸರು ಧಾವಿಸಿ ತನಿಖೆ ಆರಂಭಿಸಿದ್ದಾರೆ.

ಮೃತ ವ್ಯಕ್ತಿಯ ಗುರುತು ಪತ್ತೆಗಾಗಿ ಪೊಲೀಸರು ಪ್ರಯತ್ನ ನಡೆಸುತ್ತಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲ ಆಸ್ಪತ್ರೆಗೆ ರವಾನಿಸಿದ್ದಾರೆ. ನಿರ್ಜನ ಪ್ರದೇಶದಲ್ಲಿ ಕಾರು ನಿಂತಿದ್ದನ್ನು ಕಂಡ ಸ್ಥಳೀಯರು ಪರೀಕ್ಷಿಸಿದ ಸಂದರ್ಭದಲ್ಲಿ ಕೃತ್ಯ ಬೆಳಕಿಗೆ ಬಂದಿದೆ.

Click to comment

Leave a Reply

Your email address will not be published. Required fields are marked *

www.publictv.in