ಲಕ್ನೋ: 10 ಲಕ್ಷ ಮೌಲ್ಯದ ಗೊಬ್ಬರ ಸಾಗಿಸುತ್ತಿದ್ದ ವ್ಯಾಗನ್ (ರೈಲು ಬೋಗಿ) ನಾಲ್ಕು ವರ್ಷಗಳ ನಂತರ ಸುಮಾರು 1,400 ಕಿಮೀ ವ್ಯಾಪ್ತಿಯಲ್ಲಿ ಉತ್ತರ ಪ್ರದೇಶದ ಬಸ್ತಿಯನ್ನು ತಲುಪಿದೆ.
2014 ರಲ್ಲಿ ಆಂಧ್ರಪ್ರದೇಶದ ವಿಶಾಖಪಟ್ಟಣಂನಿಂದ ಹೊರಟ ಸರಕು ಸಾಗಿಸುವ ರೈಲು, 2018ರಲ್ಲಿ ಉತ್ತರ ಪ್ರದೇಶದ ಬಸ್ತಿಗೆ ಬಂದು ತಲುಪಿದೆ.
Advertisement
ಇಂಡಿಯನ್ ಪೊಟಾಶ್ ಕಂಪೆನಿಯು #107462 ನಂಬರಿನ ಬೋಗಿಯನ್ನು ಬುಕ್ ಮಾಡಿಕೊಂಡಿತ್ತು. ಬೋಗಿಯಲ್ಲಿ 10 ಲಕ್ಷ ರೂ. ಮೌಲ್ಯದ ರಸಗೊಬ್ಬರವನ್ನು ವಿಶಾಖಪಟ್ಟಣಂ ಬಂದರನಿಂದ ಉತ್ತರ ಪ್ರದೇಶದ ಬಸ್ತಿಯಲ್ಲಿರುವ ರಾಮಚಂದ್ರ ಗುಪ್ತ ಎಂಬವರಿಗೆ ಲೋಡ್ ಮಾಡಿ ಸಾಗಿಸಲಾಗಿತ್ತು. ಆದರೆ ಎಷ್ಟೋ ತಿಂಗಳಾದರೂ ವ್ಯಾಗನ್ ತನ್ನ ಗಮ್ಯಸ್ಥಾನವನ್ನು ತಲುಪದ ಕಾರಣ ಗುಪ್ತಾರವರು ರೈಲ್ವೇ ಇಲಾಖೆಯಲ್ಲಿ ದೂರು ನೀಡಿದರು.
Advertisement
ಗುಪ್ತ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಆದ್ರೆ ಬುಧವಾರ ನಾಲ್ಕು ವರ್ಷಗಳ ಹಿಂದೆ ಬುಕ್ ಮಾಡಿದ್ದ ವ್ಯಾಗನ್ ತನ್ನ ಕೊನೆಯ ನಿಲ್ದಾಣವನ್ನು ತಲುಪಿದೆ. ಆದರೆ ವ್ಯಾಗನ್ ನಲ್ಲಿದ್ದ ಸರಕನ್ನು ಗುಪ್ತಾ ಪಡೆಯಲು ಹಿಂದೇಟು ಹಾಕಿದ್ದಾರೆ. ಸರಕುಗಳೆಲ್ಲಾ ಹಾನಿಗೊಳಗಾಗಿದ್ದು, ನನಗೆ ಲಕ್ಷಾಂತರ ರೂ. ನಷ್ಟವಾಗಿದೆ. ಈ ಸಂಬಂಧ ಗುಪ್ತಾರಿಗೆ ಆದ ನಷ್ವವನ್ನು ರೈಲ್ವೆ ಇಲಾಖೆ ಭರಿಸಲಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
Advertisement
ದೂರು ದಾಖಲಿಸಿಕೊಂಡ ರೈಲ್ವೇ ಅಧಿಕಾರಿಗಳು ವ್ಯಾಗನ್ ಅನ್ನು ಹುಡುಕಲು ಪ್ರಯತ್ನಿಸಿದರೂ ಸಿಕ್ಕಿರಲಿಲ್ಲ. ವ್ಯಾಗನ್ ಕೆಲವು ಸರಿ ತಾಂತ್ರಿಕ ಸಮಸ್ಯೆಯಿಂದ ಬೇರ್ಪಡುತ್ತವೆ. ಅದೇ ರೀತಿ ಇದು ಆಗಿರಬಹುದು, ಯಾರು ಇದಕ್ಕೆ ಹೊಣೆಗಾರರಾಗಿದ್ದರೂ ಅವರ ಮೇಲೆ ಕ್ರಮ ಕೈಗೊಳ್ಳುವುದಾಗಿ ಎಂದು ರೈಲ್ವೆ ಅಧಿಕಾರಿ ಸಂಜಯ್ ಯಾದವ್ ತಿಳಿಸಿದ್ದಾರೆ.