– ಶಾಸಕ ಅನಿಲ್ ಕುಮಾರ್‌ಗೆ ಪ್ರಶ್ನೆ ಕೇಳುವ ಬಗ್ಗೆ ತಿಳಿಸಿಕೊಟ್ಟ ಸ್ಪೀಕರ್ ರಮೇಶ್ ಕುಮಾರ್
ಬೆಳಗಾವಿ: ಎರಡನೇ ದಿನದ ಚಳಿಗಾಲ ಅಧಿವೇಶನ ಆರಂಭವಾಗಿದ್ದು, ಆಡಳಿತ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಶಾಸಕರಿಗಿಂತ ವಿಪಕ್ಷ ಶಾಸಕರೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ.
ಬಿಜೆಪಿಯ 80 ಜನ ಶಾಸಕರು ಹಾಗೂ ಮೈತ್ರಿ ಸರ್ಕಾರದ 70 ಜನ ಶಾಸಕರು ಅಧಿವೇಶನಕ್ಕೆ ಹಾಜರಾಗಿದ್ದಾರೆ. ಇತ್ತ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬೆಂಬಲಿಗ ಶಾಸಕರಾದ ನಾಗೇಂದ್ರ, ಕಂಪ್ಲಿಯ ಗಣೇಶ್, ಆನಂದ್ ಸಿಂಗ್, ತುಕಾರಾಂ, ಡಾ. ಸುಧಾಕರ್, ಬಿ.ಕೆ.ಸಂಗಮೇಶ್ ಹಾಗೂ ಬಿ.ನಾರಾಯಣ್ ಕೂಡ ಅಧಿವೇಶನಕ್ಕೆ ಗೈರು ಹಾಜರಿ ಆಗಿದ್ದಾರೆ. ಈ ಮೂಲಕ ಮತ್ತೆ ಸಚಿವ ಸ್ಥಾನ ಆಕಾಂಕ್ಷಿಗಳು ಕಾಂಗ್ರೆಸ್‍ಗೆ ಶಾಕ್ ನೀಡಿದ್ದಾರೆ.
Advertisement
Advertisement
ಅಸಮಾಧಾನ ಶಾಸಕರ ನಡೆ ಭಾರೀ ಚರ್ಚೆಗೆ ಕಾರಣವಾಗಿದೆ. ಇತ್ತ ಅಧಿವೇಶನಲ್ಲಿ ಇಂದು ಶಿಕ್ಷಕರು, ಉಪನ್ಯಾಸಕರ ನೇಮಕಾತಿ, ಶೈಕ್ಷಣಿಕ ಯೋಜನೆ, ಮೂಲಸೌಕರ್ಯ ಅಭಿವೃದ್ಧಿಯ ಕುರಿತು ಭಾರೀ ಚರ್ಚೆ ಆರಂಭವಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ ಗ್ರಾಮೀಣ ಪ್ರದೇಶದಲ್ಲಿನ ಉಪನ್ಯಾಸಕರ ಕೊರತೆ ನೀಗಿಸವ ಕಡ್ಡಾಯ ವರ್ಗಾವಣೆ ನೀತಿ ಜಾರಿಗೊಳಿಸಲಾಗಿದೆ. ಸಿ ವಲಯದಲ್ಲಿ 596 ಉಪನ್ಯಾಸಕರ ಕಡ್ಡಾಯ ವರ್ಗಾವಣೆ ಮಾಡಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ 1500ಕ್ಕೂ ಹೆಚ್ಚು ಉಪನ್ಯಾಸಕರ ನೇಮಕ ಮಾಡಲಾಗುತ್ತದೆ ಎಂದು ಬಿಜೆಪಿ ಶಾಸಕ ಹೆಚ್.ಹಾಲಪ್ಪ ಪ್ರಶ್ನೆಗೆ ಉತ್ತರ ನೀಡಿದರು.
Advertisement
Advertisement
ಶಾಸಕರಿಗೆ ಸ್ವೀಕರ್ ಪಾಠ:
ಎಚ್.ಡಿ.ಕೋಡೆ ಶಾಸಕ ಅನಿಲ್ ಕುಮಾರ್ ಅವರಿಗೆ ಪ್ರಶ್ನೆ ಕೇಳುವಂತೆ ಸ್ಪೀಕರ್ ರಮೇಶ್ ಕುಮಾರ್ ಸೂಚಿಸಿದರು. ಈ ವೇಳೆ ಸ್ವಲ್ಪ ಭಯಕ್ಕೆ ಒಳಗಾಗಿದ್ದ ಅನಿಲ್ ಕುಮಾರ್ ಅವರಿಗೆ ಧೈರ್ಯ ಹೇಳಿದ ರಮೇಶ್ ಕುಮಾರ್ ಅವರು, ಮೊದಲ ಬಾರಿಗೆ ಹೀಗೆ ಆಗುತ್ತದೆ ಎಂದು ಹೇಳಿ, ಪ್ರಶ್ನೆಯನ್ನು ಹೇಗೆ ಕೇಳಬೇಕು ಎಂದು ತಿಳಿಸಿದರು. ಪ್ರಶ್ನೆ ಕೇಳಿದ ರಮೇಶ್ ಕುಮಾರ್ ಅವರು ಬಳಿಕ ಗುಡ್ ಎಂದು ಹೇಳಿ ಅನಿಲ್ ಕುಮಾರ್ ಅವರನ್ನು ಪ್ರೋತ್ಸಾಹಿಸಿದರು.
ಅಧಿವೇಶನದ ಮೊದಲ ದಿನ ಮಾಜಿ ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಗೈರಿ ಆಗಿದ್ದರು. ಹೀಗಾಗಿ ಎಚ್.ಡಿ.ಕುಮಾರಸ್ವಾಮಿ ಅವರು ಏಕಾಂಗಿಯಾಗಿ ಅಧಿವೇಶನವನ್ನು ಎದುರಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv