ಮೈಸೂರು: ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಹೂವಿಡಹಳ್ಳಿ ಗ್ರಾಮದ ನಿವಾಸಿಯಾಗಿರೋ 75 ವರ್ಷದ ವೀರಭದ್ರಪ್ಪ ತನ್ನ ಇಳಿ ವಯಸ್ಸಿನಲ್ಲಿ ಮಕ್ಕಳಿಗೆ ದಾರಿ ದೀಪವಾಗಿದ್ದಾರೆ.
ವೀರಭದ್ರಪ್ಪ ಅವರಿಗೆ ಐದು ಜನ ಮಕ್ಕಳು. ಅದರಲ್ಲಿ ಇಬ್ಬರು ಮಕ್ಕಳಾದ 40 ವರ್ಷದ ಸ್ವಾಮಿ ಹಾಗೂ 45 ವರ್ಷದ ಮಂಜುಳಾ ಹುಟ್ಟು ಅಂಧರು. ಉಳಿದ ಮೂವರು ಮಕ್ಕಳು ಚೆನ್ನಾಗಿದ್ದು, ಅವರು ಕೂಲಿ ಮಾಡುತ್ತಾ ತಮ್ಮ ಪಾಡಿಗೆ ಜೀವನ ಮಾಡ್ತಿದ್ದಾರೆ. ಆದ್ರೆ ಇಳಿ ವಯಸ್ಸಿನಲ್ಲಿ ತನ್ನ ಇಬ್ಬರು ಅಂಧ ಮಕ್ಕಳಿಗೆ ಬೆಳಕಾಗಿದ್ದಾರೆ ತಂದೆ ವೀರಭದ್ರಪ್ಪ.
Advertisement
Advertisement
ವೀರಭದ್ರಪ್ಪಗೆ ಎರಡು ಎಕರೆ ಜಮೀನು ಇತ್ತು. ಅದನ್ನು ಇವರು ಮೂವರು ಮಕ್ಕಳು ಹಂಚಿಕೊಂಡು ಅವರು ಕೂಡ ಕೂಲಿ ಮಾಡುತ್ತಿದ್ದಾರೆ. ಇವರು ಒಂದು ಮನೆಯ ಕೋಣೆಯಲ್ಲಿ ತನ್ನ ಇಬ್ಬರು ಅಂಧ ಮಕ್ಕಳೊಂದಿಗೆ ಜೀವನ ಮಾಡುತ್ತಿದ್ದಾರೆ.
Advertisement
ಸರ್ಕಾರ ಕೊಡುವ ಪಡಿತರ ಅಕ್ಕಿ ಹಾಗೂ ಅಂಧ ಮಕ್ಕಳಿಗೆ ಪ್ರತಿ ತಿಂಗಳು ಸರ್ಕಾರ ನೀಡುವ ತಲಾ 1 ಸಾವಿರ ರೂಪಾಯಿಯಲ್ಲಿ ಬದುಕುತ್ತಿದ್ದಾರೆ. ತನ್ನ ಇಬ್ಬರು ಅಂಧ ಮಕ್ಕಳನ್ನು ಇಲ್ಲಿವರೆಗೂ ಜೋಪಾನವಾಗಿ ನೋಡಿಕೊಳ್ಳುತ್ತಿರುವ ವೃದ್ಧ ವೀರಭದ್ರಪ್ಪನ ಕುಟುಂಬಕ್ಕೆ ಸಹಾಯ ಬೇಕಾಗಿದೆ.
Advertisement
ಇಳಿ ವಯಸ್ಸಿನಲ್ಲಿ ನೆಮ್ಮದಿಯಾಗಿ ಜೀವನ ಮಾಡಲು ತಮಗೆ ಆಶ್ರಯ ಮನೆಯೊಂದನ್ನ ನೀಡಿ, ಅಂಧ ಮಕ್ಕಳ ಕಣ್ಣಿನ ಪರೀಕ್ಷೆ ಮಾಡಿಸಿ ಅಂತಾ ತಂದೆ ಹೇಳಿದ್ರೆ, ಮಗಳು ಮಂಜುಳಾ ತಂದೆಗೆ ಹೊರೆಯಾಗಲು ಇಷ್ಟವಿಲ್ಲ ದಯಮಾಡಿ ಅಂಧರ ಆಶ್ರಮಕ್ಕೆ ಸೇರಿಸಿ, ನೆಮ್ಮದಿಯಾಗಿ ಬದುಕಲು ಸಹಾಯ ಮಾಡಿ ಅಂತಾ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.
https://www.youtube.com/watch?v=LMy7gFQqCA4