ರಾಮನಗರ: ಗ್ಯಾಂಗ್ರೀನ್ ನಿಂದಾಗಿ ಕಾಲು ಕಳೆದುಕೊಂಡರು ಸ್ವಾಭಿಮಾನಿಂದ ಬದುಕಬೇಕು ಎನ್ನುವ ಛಲವಿದೆ. ಆದರೆ ಈ ಛಲಕ್ಕೆ ಆರ್ಥಿಕ ಸಮಸ್ಯೆ ಕಾಣಿಸಿಕೊಂಡಿದ್ದು ಯಾರಾದರೂ ಸಹಾಯ ಮಾಡಬಹುದಾ ಎನ್ನುವ ಪ್ರಶ್ನೆಯನ್ನು ಇಟ್ಟುಕೊಂಡು ಜಿಲ್ಲೆಯ ವ್ಯಕ್ತಿಯೊಬ್ಬರು ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.
ಕುಂಬಾಪುರ ಕಾಲೋನಿಯ ನಿವಾಸಿ ಶ್ರೀನಿವಾಸ ಅವರು ಕುಂಟುತ್ತ ಸ್ಟಿಕ್ ಹಿಡಿದು ಜೀವನ ಸಾಗಿಸುತ್ತಿದ್ದಾರೆ. ವಯಸ್ಸು ಸುಮಾರು 45 ವರ್ಷ, ಗಾರೆ ಕೆಲಸ ಮಾಡುತ್ತಾ ಸ್ವಾಭಿಮನದಿಂದ ಸಂಸಾರ ನಡೆಸುತ್ತಿದ್ದರು. ಗಾರೆ ಕೆಲಸ ಮಾಡ್ತಿದ್ದ ಶ್ರೀನಿವಾಸ್ ಒಮ್ಮೆ ಕಾಲು ಉರಿ, ನೋವು ಅಂತಾ ಆಸ್ಪತ್ರೆಗೆ ದಾಖಲಾಗಿದ್ರು. ಈ ವೇಳೆ ನರದ ಸಮಸ್ಯೆಯುಂಟಾಗಿದ್ದು ಶಸ್ತ್ರಚಿಕಿತ್ಸೆ ಮಾಡಬೇಕಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆದ್ರೆ ಶಸ್ತ್ರ ಚಿಕಿತ್ಸೆ ವೇಳೆ ಕಾಲು ಗ್ಯಾಂಗ್ರೀನ್‍ಗೆ ಒಳಗಾಗಿದೆ ಎಂದು ವೈದ್ಯರು ಕಾಲನ್ನೇ ತೆಗೆದು ಹಾಕಿದ್ದಾರೆ.
ಸಾಲ ಮಾಡಿ, ಇದ್ದ ಮನೆಯನ್ನು ಮಾರಿ ಚಿಕಿತ್ಸೆ ಪಡೆದು, ಕಾಲು ಕಳೆದುಕೊಂಡಿರುವ ಶ್ರೀನಿವಾಸ್ ಅವರಿಗೆ ಓಡಾಡಲು, ದುಡಿಮೆ ಮಾಡಲು ಆಗದೇ ಪ್ರತಿನಿತ್ಯ ಸಂಕಷ್ಟದಲ್ಲೇ ಜೀವನ ದೂಡುತ್ತಿದ್ದಾರೆ. ಸದ್ಯ ಹೆಂಡ್ತಿ ಶಾಲೆಯಲ್ಲಿ ಆಯಾ ಕೆಲಸ ಮಾಡಿ ಅದರಿಂದ ಬರುವ ಅಲ್ಪ ಆದಾಯದಲ್ಲಿ ಜೀವನ ಮಾಡುತ್ತಿದ್ದಾರೆ.
ಪತ್ನಿ ದುಡಿಮೆಯಲ್ಲಿ ಜೀವನ ಮಾಡುತ್ತಿರುವ ಪತಿ ಶ್ರೀನಿವಾಸ್ ತನ್ನ ಕೈಲಾಗುತ್ತಿಲ್ಲವಲ್ಲ. ಹೆಂಡ್ತಿ ದುಡಿಮೆಯಲ್ಲಿ ಬದುಕುವಂತಾಯಿತಲ್ಲ ಎಂದು ಕೊರಗುತ್ತಿದ್ದು, ತನ್ನ ಕಾಲ ಮೇಲೆ ತಾನು ನಿಲ್ಲಬೇಕು. ಬೇರೆಯವರಿಗೆ ಹೊರೆಯಾಗದಂತೆ ಸ್ವಾಭಿಮಾನದ ಜೀವನ ಸಾಗಿಸಬೇಕು ಎಂದು ಬಯಸುತ್ತಿದ್ದಾರೆ. ಆದ್ರೆ ಓಡಾಡಲು ಕಷ್ಟವಾಗಿದ್ದು ಯಾರಾದ್ರೂ ದಾನಿಗಳು ನಾಲ್ಕು ಚಕ್ರದ ಸ್ಕೂಟರ್ ಕೊಡಿಸಿದ್ರೆ ಸ್ವಾಭಿಮಾನದಿಂದ ಬದುಕುತ್ತೇನೆ ಎಂದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=0DZGds1QU2U