ಉಡುಪಿ: ಎಸ್‍ಎಸ್‍ಎಲ್‍ಸಿಯಲ್ಲಿ ಶಾಲೆಗೆ ಟಾಪರ್, ಪಿಯುಸಿಯಲ್ಲಿ 77 ಶೇಕಡಾ ಅಂಕ ಆದರೆ ಮುಂದಿನ ವಿದ್ಯಾಭ್ಯಾಸ ಮಾಡಲು ಹಣವಿಲ್ಲ. ಮೂರು ವರ್ಷದ ನರ್ಸಿಂಗ್ ಕೋರ್ಸ್ ಮಾಡಬೇಕೆಂಬ ಹೆಬ್ಬಯಕೆ ಇರುವ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೇಳೂರು ಗ್ರಾಮದ ಪೂರ್ಣಿಮಾ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.
ಸರೋಜಾ ಮತ್ತು ನಟರಾಜ್ ದಂಪತಿಗೆ ಇಬ್ಬರು ಮಕ್ಕಳಲ್ಲಿ ಪೂರ್ಣಿಮಾ ಒಬ್ಬರು. ಕುಸಿದು ಬೀಳುವ ಪರಿಸ್ಥಿತಿಯಲ್ಲಿರುವ ಮನೆಯಲ್ಲಿ ಈ ಕುಟುಂಬ ವಾಸವಾಗಿದೆ. ಮನೆಗೆ ವಿದ್ಯುತ್ ಇಲ್ಲ, ಶೌಚಾಲಯ ಇಲ್ಲವದ ಬಡತನದ ಪರಿಸ್ಥಿತಿಲ್ಲಿ ಪೂರ್ಣಿಮಾ ವಾಸವಾಗಿದ್ದಾರೆ. ಮನೆಯಲ್ಲಿ ತಂದೆ ಮಾತ್ರ ದುಡಿಯೋದು ಹಾಗಾಗಿ ಮಗಳ ವಿದ್ಯಾಭ್ಯಾಸಕ್ಕೆ ಆರ್ಥಿಕ ಪರಿಸ್ಥಿತಿ ಅಡ್ಡಿ ಮಾಡುತ್ತಿದೆ.
ಮೂರು ವರ್ಷದ ನರ್ಸಿಂಗ್ ಕೋರ್ಸ್ ಮಾಡಬೇಕೆಂಬ ಕನಸು ಕಾಣುತ್ತಿರುವ ಪೂರ್ಣಿಮಾಗೆ ಮಾತ್ರ ಆರ್ಥಿಕ ನೆರೆವು ಸಿಗುತ್ತಿಲ್ಲ. ವರ್ಷಕ್ಕೆ ಸುಮಾರು 60 ಸಾವಿರ ರೂಪಾಯಿಯ ಅವಶ್ಯಕತೆಯಿದೆ. ಕೋಟದ ಆಶ್ರೀತಾ ಕಾಲೇಜು 30 ಸಾವಿರ ರೂಪಾಯಿ ಹೊಂದಿಸಲು ಹೇಳಿ ಸೀಟು ಕಾಯ್ದಿರಿಸಿದ್ದಾರೆ. ಪೂರ್ಣಿಮಾ ಪಬ್ಲಿಕ್ ಟಿವಿಯ ಮೂಲಕ ಜೀವನದ ಬೆಳಕಿಗಾಗಿ ಮನವಿ ಮಾಡಿದ್ದಾರೆ.