-ಪ್ರತಿನಿತ್ಯ 4 ಕಿ.ಮೀ. ಶಾಲೆಗೆ ನಡೆದುಕೊಂಡ ಹೋಗುವ ಮಕ್ಕಳು
ದಾವಣಗೆರೆ: ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ನಾಗತಿಕಟ್ಟೆ ಗ್ರಾಮಕ್ಕೆ ಸರಿಯಾದ ರಸ್ತೆಗಳಿಲ್ಲ. ಗ್ರಾಮದಲ್ಲಿ 200ಕ್ಕೂ ಹೆಚ್ಚು ಮನೆಗಳಿದ್ದು, ಇಲ್ಲಿನ ಜನರು ರಸ್ತೆಗೆ ಟಾರ್ ನೋಡೇ ಇಲ್ಲವಂತೆ. ಗ್ರಾಮದಿಂದ ಬೇರೆಡೆಗೆ ಹೋಗಬೇಕು ಎಂದರೆ ಸಾಕು ಗ್ರಾಮಸ್ಥರು ಸರ್ಕಸ್ ಮಾಡಲೇಬೇಕು. ಯಾಕಂದ್ರೆ ಈ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಸಂಪೂರ್ಣ ಗುಂಡಿಮಯವಾಗಿವೆ.
ಗ್ರಾಮಸ್ಥರಿಗೆ ತುರ್ತು ಚಿಕಿತ್ಸೆಗೆ ಬೇಕು ಅಂದ್ರೂ ಅಂಬುಲೆನ್ಸ್ ಕೂಡ ಈ ರಸ್ತೆಯಲ್ಲಿ ಬರೋಕಾಗಲ್ಲ. ಅಂಬುಲೆನ್ಸ್ ಬಂದರೂ ಗ್ರಾಮದಿಂದ ಮೂರು ಕಿಲೋ ಮೀಟರ್ ದೂರದಲ್ಲಿ ನಿಲ್ಲುತ್ತದೆ. ರೋಗಿಗಳನ್ನು ಅಲ್ಲಿಗೆ ಕರೆದೊಯ್ದು ನಂತರ ಅಂಬುಲೆನ್ಸ್ ನಲ್ಲಿ ಕಳಿಸಬೇಕಾದ ಪರಿಸ್ಥಿತಿ. ಶಾಲಾ ಮಕ್ಕಳ ಕಷ್ಟ ದೇವರೇ ಬಲ್ಲ. ಗ್ರಾಮದಲ್ಲಿ ನಾಲ್ಕನೇ ತರಗತಿಯವೆರೆಗೆ ಮಾತ್ರ ಶಾಲೆ ಇದ್ದು, ನಂತರದ ವಿದ್ಯಾಭ್ಯಾಸಕ್ಕೆ ನಾಲ್ಕು ಕಿಲೋಮೀಟರ್ ದೂರ ಸಾಗಬೇಕು.
ಕೆಲ ಪೋಷಕರು ಮಕ್ಕಳ ಪರಿಸ್ಥಿತಿಯನ್ನು ನೋಡಲಾಗದೆ, ಇತ್ತ ವಾಹನಗಳಲ್ಲಿ ಶಾಲೆಗೆ ಬಿಡಲು ಆರ್ಥಿಕ ಶಕ್ತಿ ಇಲ್ಲದೆ ಶಾಲೆಯನ್ನು ಬಿಡಿಸಿದ್ದಾರೆ. ಅಲ್ಲದೇ ಗುಂಡಿಮಯವಾಗಿರುವ ರಸ್ತೆಗಳನ್ನು ನೋಡಿ ಕೆ.ಎಸ್.ಆರ್.ಟಿ.ಸಿ ಬಸ್ ಓಡಿಸುತ್ತಿಲ್ಲ. ಜನಪ್ರತಿನಿಧಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ನೊಂದ ಗ್ರಾಮಸ್ಥರು ದಾರಿ ಕಾಣದೆ ರಸ್ತೆ ಹಾಗು ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಿ ಎಂದು ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=t2aj8411S3E