ಬೀದರ್: ಅಪಘಾತದಲ್ಲಿ ಒಂದು ಕಾಲನ್ನು ಕಳೆದುಕೊಂಡ್ರು ಸ್ವಾಭಿಮಾನದ ಜೀವನ ನಡೆಸುತ್ತಿದ್ದ ವಿಕಲಚೇತನನಿಗೆ ಸರ್ಕಾರಿ ಅಧಿಕಾರಿಗಳೇ ಶತ್ರುಗಳಾಗಿದ್ದಾರೆ.
ಬೀದರ್ ತಾಲೂಕಿನ ಅಯಾಸಪೂರ್ ಗ್ರಾಮ ನಿವಾಸಿ ನಾಗಪ್ಪ ಎಂಬವರು 20 ವರ್ಷಗಳ ಹಿಂದೆ ನಡೆದ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದರು. ಆದ್ರೆ ಕಾಲು ಕಳೆದುಕೊಂಡರೂ ಕುಗ್ಗದ ನಾಗಪ್ಪ ನಗರದ ನೆಹರು ಕ್ರೀಡಾಂಗಣದ ಸರ್ಕಾರಿ ಮಳಿಗೆಯಲ್ಲಿ ಹೋಟೆಲ್ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಇದೇ ಹಣದಿಂದ ಇಬ್ಬರು ಮಕ್ಕಳು ಸೇರಿದಂತೆ ಕುಟುಂಬದ ಜವಾಬ್ದಾರಿಯನ್ನು ಹೊತ್ತು ಮಕ್ಕಳಿಗೆ ವಿದ್ಯಾಭ್ಯಾಸವನ್ನು ನೀಡುತ್ತಾ ಜೀವನ ಸಾಗಿಸುತ್ತಿದ್ದರು.
ಒಂದು ವರ್ಷದ ಹಿಂದೆ ಸರ್ಕಾರಿ ಅಧಿಕಾರಿಗಳು ಸ್ಟೇಡಿಯಂ ನವೀಕರಣ ಹೆಸರಿನಲ್ಲಿ ಮಳಿಗೆಯನ್ನ ಖಾಲಿ ಮಾಡಿಸಿ ಕುಟುಂಬವನ್ನು ಬೀದಿ ಪಾಲು ಮಾಡಿದ್ದಾರೆ. ಕಾಲು ಕಳೆದುಕೊಂಡಿದ್ದರೂ ಸ್ವಾಭಿಮಾನದಿಂದ ಕಷ್ಟ ಪಟ್ಟು ದುಡಿಯುತ್ತಿದ್ದ ವಿಕಲಚೇತನ ನಾಗಪ್ಪ ಅಕ್ಷರಶಃ ದಿಕ್ಕು ದೋಚದೇ ಕಂಗಲಾಗಿದ್ದಾರೆ. ಪತ್ನಿ ಕೂಲಿ ಕೆಲಸ ಮಾಡಿಕೊಂಡು ಪ್ರತಿದಿನ ಬಿಡಿಗಾಸು ಸಂಪಾದನೆ ಮಾಡಿ ಕುಟುಂಬಕ್ಕೆ ಆಸರೆಯಾಗುತ್ತಿದ್ದಾರೆ. ಆದರೆ ಕೂಲಿ ಕೆಲಸ ಇಲ್ಲದಿದ್ದರೆ ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುವ ಸ್ಥಿತಿಯಲ್ಲಿದ್ದಾರೆ.
ಯಾರಾದ್ರೂ ದಾನಿಗಳು ಒಂದು ಪುಟ್ಟ ಟೀ ಅಂಗಡಿಯನ್ನು ಹಾಕಿಕೊಟ್ಟರೆ ಜೀವನವನ್ನು ನಡೆಸುತ್ತೇನೆ ಅಂತಾ ನಾಗಪ್ಪ ಹೇಳ್ತಾರೆ.
https://youtu.be/19–4_B2QHk