ಕಲಬುರಗಿ: ಜಿಲ್ಲೆಯ ತಾಲೂಕಿನ ನ ಸಾವಳಗಿ ಗ್ರಾಮದ ಮಲ್ಲಿಕಾರ್ಜುನ ಮತ್ತು ಶಶಿಕಲಾ ಎಂಬ ಬಡದಂಪತಿ ಮಗಳು ಲಕ್ಷ್ಮೀ ಒಂದೇ ಕಾಲಿನ ಆಸರೆಯಲ್ಲಿ ನಡೆಯುತ್ತಿದ್ದಾಳೆ. ಈ ಬಾಲಕಿ 6 ವರ್ಷದವಳಿದ್ದಾಗ ಮನೆಯಲ್ಲಿನ ಚಿಮುಣಿ(ಕ್ಯಾಂಡಲ್) ಕಾಲಿನ ಮೇಲೆ ಬಿದ್ದು ಕಾಲು ಸಂಪೂರ್ಣ ಸುಟ್ಟಿದೆ. ನಂತರ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ಕುಟುಂಬಸ್ಥರು ದಾಖಲಿಸಿದ್ದರು. ಆಗ ಲಕ್ಷ್ಮೀ ಕಾಲಿನ ಆಪರೇಷನ್‍ಗೆ ಒಂದೂವರೆ ಲಕ್ಷ ರೂಪಾಯಿ ಚಿಕಿತ್ಸಾ ವೆಚ್ಚ ಆಗುವದ್ದಾಗಿ ವೈದ್ಯರು ತಿಳಿಸಿದ್ದಾರೆ.
Advertisement
ಆದರೆ ಕೂಲಿ ಮಾಡಿ ಬದುಕುವ ಈ ಕುಟುಂಬಕ್ಕೆ ಯಾರು ಸಹ ನಯಾ ಪೈಸೆ ಸಹಾಯ ಮಾಡಿಲ್ಲ. ಹೀಗಾಗಿ ಈ ಬಾಲಕಿ ಅಂದಿನಿಂದ ಇಂದಿನವರೆಗೆ ಅಂದ್ರೆ 6 ವರ್ಷದಿಂದ ಒಂದೆ ಕಾಲಿನ ಮೇಲೆ ತನ್ನ ಜೀವನ ಕಳೆಯುತ್ತಿದ್ದಾಳೆ. ಇನ್ನು ಲಕ್ಷ್ಮಿಯ ಚಿಕಿತ್ಸೆಯ ಚಿಂತೆ ಮಾಡುತ್ತ ತಂದೆ ಮಲ್ಲಿನಾಥ್ 2 ವರ್ಷದ ಹಿಂದೆ ಅನಾರೋಗ್ಯದಿಂದ ಸಾವನ್ನಪ್ಪಿದ್ದು, ಸದ್ಯ ಲಕ್ಷ್ಮಿಯ ತಾಯಿ ತಮ್ಮ ಮೂರು ಮಕ್ಕಳ ಜೊತೆ ಬಾಡಿಗೆ ಮನೆಯಲ್ಲಿ ಕೂಲಿ ಮಾಡಿ ಸಂಸಾರ ನಡೆಸುತ್ತಿದ್ದಾರೆ.
Advertisement
Advertisement
ಲಕ್ಷ್ಮಿಯ ಕಾಲಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಿದ್ರೆ, ಸ್ವಲ್ಪ ಪ್ರಮಾಣದಲ್ಲಿ ಗುಣವಾಗಬಹುದು ನಂತರದ ದಿನಗಳಲ್ಲಿ ಲಕ್ಷ್ಮಿ ತನ್ನ ಕಾಲಿನ ಮೇಲೆ ನಿಲ್ಲಬಹುದು ಅಂತಾ ಬಸವೇಶ್ವರ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಆದ್ರೆ ಈ ಆಪರೇಷನ್ ಮಾಡಿಸಲು ಕನಿಷ್ಟ ಅಂದ್ರು ಒಂದುವರೆಯಿಂದ-ಎರಡು ಲಕ್ಷ ರೂಪಾಯಿ ಹಣ ಬೇಕಾಗುತ್ತದೆ. ಹೀಗಾಗಿ ಯಾರಾದರೂ ದಾನಿಗಳು ಚಿಕಿತ್ಸಾ ವೆಚ್ಚ ಭರಿಸಿದರೆ ಲಕ್ಷ್ಮಿ ಸಹ ತನ್ನ ಕಾಲಿನ ಮೇಲೆ ತಾನು ಇಲ್ಲಬಹುದು. ಯಾರಾದರೂ ದಾನಿಗಳು ಮುಂದೆ ಬಂದು ಲಕ್ಷ್ಮಿಯ ಚಿಕಿತ್ಸಾ ವೆಚ್ಚ ಭರಿಸಿದ್ರೆ ಈ ಬಾಲಕಿ ಸಹ ಇತರೆ ಮಕ್ಕಳಂತೆ ಜೀವಿಸುತ್ತಾಳೆ.
Advertisement
https://www.youtube.com/watch?v=wvNc5K2BzGc