ಹುಬ್ಬಳ್ಳಿ: ಅಂತರಾಷ್ಟ್ರೀಯ ಅಂಗವಿಕಲ ಕ್ರಿಕೆಟ್ ಟೂರ್ನಿಯಲ್ಲಿ ಭಾರತದ ಪರ ಆಟವಾಡಿ, ದೇಶಕ್ಕೆ ಕೀರ್ತಿ ತಂದುಕೊಟ್ಟ ಪಟುವಿಗೆ ಸೂರು ಇಲ್ಲದಂತಾಗಿದೆ. ಧಾರವಾಡ ಜಿಲ್ಲೆಯ ಹುಬ್ಬಳ್ಳಿಯ ಬೂಸಪೇಟೆ ನಿವಾಸಿ ಮಹೇಶ್ ಅಗಲಿ ಇಂತಹ ಪರಿಸ್ಥಿತಿಯಲ್ಲಿ ಬದುಕು ಕಳೆಯುತ್ತಿದ್ದಾರೆ.
ಮಹೇಶ್ ಅಗಲಿ ಅವರು ಕೆಲವು ದಿನಗಳ ಹಿಂದೆ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಆಯೋಜಿಸಿದ್ದ ಅಂಗವಿಕಲ ಅಂತರಾಷ್ಟ್ರೀಯ ಕ್ರಿಕೆಟ್ ಟೂರ್ನಿಯಲ್ಲಿ ಭಾರತದ ಪರ ಆಟವಾಡಿ, ಟೂರ್ನಿ ಗೆದ್ದು ಭಾರತಕ್ಕೆ ಹೆಮ್ಮೆ ತಂದು ಕೊಟ್ಟಿದ್ದಾರೆ. ಮನೆ ತಲುಪಿ ಕಪ್ ಗೆದ್ದ ಸಂಭ್ರಮ ಆಚರಿಸುವ ಆಸೆಯೊಂದಿಗೆ ಮನೆಗೆ ಬರುತ್ತಿದ್ದ ಮಹೇಶ್‍ಗೆ ನಿರಾಸೆ ಕಾದಿತ್ತು.
Advertisement
Advertisement
ಮನೆಗೆ ತಲುಪುವ ಹತ್ತು ನಿಮಿಷಗಳ ಹಿಂದೆ ಮಳೆಯಿಂದಾಗಿ ಮನೆಯ ಅರ್ಧಭಾಗ ಕುಸಿದು ಬಿದ್ದಿತ್ತು. ಇದನ್ನು ನೋಡಿದ ಮಹೇಶ್ ಅವರಿಗೆ ಆಕಾಶವೇ ಕಳಚಿ ಬಿದ್ದಂತಾಗಿತ್ತು. ಚಿಕ್ಕ ವಯಸ್ಸಿನಲ್ಲಿ ಅಪಘಾತದಲ್ಲಿ ತಂದೆ ತಾಯಿಯನ್ನು ಕಳೆದುಕೊಂಡಿರುವ ಮಹೇಶ್, ಚಿಕ್ಕಪ್ಪನ ಆಶ್ರಯದಲ್ಲಿ ಜೀವನ ನಡೆಸುತ್ತಿದ್ದಾರೆ.
Advertisement
ಪರಿಶ್ರಮದಿಂದ ಅಂಗವಿಕಲ ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಸಾಧನೆ ಮಾಡಿದ್ದು, ಭಾರತಕ್ಕೆ ಟ್ರೋಫಿ ತಂದುಕೊಟ್ಟಿದ್ದಾರೆ. ಆದರೆ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಇರುವಷ್ಟು ಪ್ರೋತ್ಸಾಹ ಅಂಗವಿಕಲ ಕ್ರಿಕೆಟ್‍ಗೆ ಇಲ್ಲದಿರುವ ಕಾರಣ ಸರ್ಕಾರವಾಗಲಿ ಸಂಘ ಸಂಸ್ಥೆಗಳಿಂದಾಗಲಿ ಇವರಿಗೆ ಸಹಾಯ ಸಿಕ್ಕಿಲ್ಲವಂತೆ. ಬದುಕಿನ ಸವಾಲುಗಳ ನಡುವೆ ನಾನು ಸಾಧಿಸಿಯೇ ತೀರುತ್ತೇನೆ ಎನ್ನುತ್ತಿರುವ ಈ ಪ್ರತಿಭೆಗೆ ಸೂರು ನಿರ್ಮಿಸಿಕೊಳ್ಳಲು ಸಹಾಯ ಬೇಕಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://youtu.be/EWMcTLstB3Q