ದಾವಣಗೆರೆ: ಎಸ್‍ಎಸ್‍ಎಲ್‍ಸಿಯಲ್ಲಿ 94% ಅಂಕ ಪಡೆದಿರುವ ಚನ್ನಗಿರಿ ತಾಲೂಕಿನ ದೇವನಹಳ್ಳಿ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿ ಓದುವ ಕನಸು ಕಾಣುತ್ತಿದ್ದರೂ ಬಡತನ ಅಡ್ಡಿಯಾಗಿದೆ.
ದೇವನಹಳ್ಳಿ ಗ್ರಾಮದ ಹನುಮಂತಯ್ಯ ಹಾಗೂ ಮಂಜುಳಾಬಾಯಿಯರ ಪುತ್ರನಾಗಿರುವ ಚೇತನ್ ಬಡತನ ಎನ್ನುವ ಬೆಂಕಿಯಲ್ಲಿ ಅರಳಿದ ಪ್ರತಿಭೆಯಾಗಿದ್ದಾನೆ. ಇಡೀ ಶಾಲೆಗೆ ಓದಿನಲ್ಲಿ ಪ್ರಥಮನಾಗಿರುವ ಕುಟುಂಬಕ್ಕೆ ತಾಯಿಯೇ ಆಸರೆಯಾಗಿದ್ದಾರೆ. ಅವರು ದುಡಿದರೇ ಮಾತ್ರ ಕುಟುಂಬಕ್ಕೆ ಒಂದು ತುತ್ತು ಅನ್ನ ಇಲ್ಲವಾದರೆ ಹೊಟ್ಟೆಯ ಮೇಲೆ ತಣ್ಣಿರು ಬಟ್ಟೆ. ಆದರೆ ಓದಿ ಓಳ್ಳೆಯ ಕೆಲಸ ಪಡೆದು ತಾಯಿಯನ್ನು ಸುಖವಾಗಿ ನೋಡಿಕೊಳ್ಳುವ ಆಸೆ ಈ ಹುಡುಗನದ್ದು. ಆದರೆ ಮನೆಯಲ್ಲಿ ಕಿತ್ತು ತಿನ್ನುವ ಬಡತನ ಈ ಪ್ರತಿಭಾವಂತನ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗಿದೆ.
Advertisement
Advertisement
Advertisement
ತಂದೆ ವೃತ್ತಿಯಲ್ಲಿ ಬಸ್ ಕಂಡಕ್ಟರ್, ತಾಯಿ ಮಂಜುಳಾಬಾಯಿ ಗ್ರಾಮದ ನವೋದಯ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಇಬ್ಬರು ಮಕ್ಕಳು. ತಂದೆಗೆ ಕೆಲವು ವರ್ಷಗಳ ಹಿಂದೆ ಅಪಘಾತವಾಗಿ ಸೊಂಟ ಮುರಿದು ಹೋಗಿದೆ. ಅಂದಿನಿಂದ ತಾಯಿಯೇ ನವೋದಯ ಶಾಲೆಯಲ್ಲಿ ಕೆಲಸ ಮಾಡಿ ಬಂದ 6 ಸಾವಿರ ರೂಪಾಯಿ ಸಂಬಳದಿಂದ ಹೊಟ್ಟೆ ಬಟ್ಟೆ ಕಟ್ಟಿ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸುತ್ತಿದ್ದಾರೆ. ಇದರ ಫಲವಾಗಿ ಮಗ ಚೇತನ್ ಛಲದಿಂದ ಓದಿ ಎಸ್‍ಎಸ್‍ಎಲ್‍ಸಿಯಲ್ಲಿ ಶೇಕಡಾ 94% ಅಂಕ ಪಡೆದು ಜಿಲ್ಲೆಗೆ 3ನೇ ರ‍್ಯಾಂಕ್ ತಂದು ಕೊಟ್ಟಿದ್ದಾನೆ.
Advertisement
ಬಡತನದ ನಡೆಯುವೆಯೂ ಚೇತನ್ ಓದಿ ಉತ್ತಮ ಅಂಕ ಪಡೆದಿದ್ದನ್ನು ನೋಡಿ ವ್ಯಕ್ತಿಯೊಬ್ಬರು ವಿದ್ಯಾಭ್ಯಾಸದ ಖರ್ಚು ನೋಡಿಕೊಳ್ಳುವುದಾಗಿ ಹೇಳಿ ಶೃಂಗೇರಿ ಬಿಜಿಎಸ್ ಸೈನ್ಸ್ ಪಿಯು ಕಾಲೇಜಿಗೆ ಪ್ರಥಮ ಪಿಯುಸಿ ಪಿಸಿಎಂಬಿಗೆ ಅಡ್ಮಿಷನ್ ಮಾಡಿಸಿದ್ದರು. ಆದರೆ ಶುಲ್ಕ ಪಾವತಿ ಮಾಡದೇ ಕೈಕೊಟ್ಟಿದ್ದಾರೆ. ಆದಾಗಿ ತಾಯಿ ತನ್ನ ಮಾಂಗಲ್ಯ ಮಾರಿ ಶುಲ್ಕ ಪಾವತಿ ಮಾಡಿ ಓದಿಸಿದ್ದಾರೆ. ಮಗ ಚೇತನ್ ಪ್ರಥಮ ಪಿಯುಸಿ ಪಿಸಿಎಂಬಿಯಲ್ಲಿ ಶೇಕಡಾ 94% ಅಂಕ ಗಳಿಸಿದ್ದಾನೆ. ಆದರೆ ಈಗ ದ್ವಿತೀಯ ಪಿಯುಸಿಗೆ ಪ್ರವೇಶ ಶುಲ್ಕ ಭರಿಸಲಾಗದೇ ತಾಯಿ ಕಷ್ಟಕ್ಕೆ ಸಿಲುಕಿದ್ದಾರೆ.
ಚೆನ್ನಾಗಿ ಓದಿ ಕೆಲಸಕ್ಕೆ ಸೇರಿಕೊಂಡು ಪೋಷಕರನ್ನು ನೋಡಿಕೊಳ್ಳಬೇಕು, ತಂಗಿಯನ್ನು ಚೆನ್ನಾಗಿ ಓದಿಸಬೇಕೆಂಬ ಕನಸು ಕಂಡಿರುವ ಚೇತನ್‍ಗೆ ಬಡತನ ಅಡ್ಡಿಯಾಗಿದೆ. ಮಗಳು ಎಸ್‍ಎಸ್‍ಎಲ್‍ಸಿ ಓದುತ್ತಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕೆ ದಾನಿಗಳು ಸಹಾಯ ಮಾಡಿ ಎಂದು ತಾಯಿ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.
https://www.youtube.com/watch?v=yFZYGNtdb1o