ರಾಮನಗರ: ಬ್ರೈನ್ ಟ್ಯೂಮರ್ ನಿಂದ ಕಣ್ಣು ಕಳೆದುಕೊಂಡಿರುವ ಯುವತಿಯ ಜೀವನಾಧರಕ್ಕೆ ಸಹಾಯ ಕೋರಿ ಆಕೆಯ ಕುಟುಂಬಸ್ಥರು ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.
ರಾಮನಗರ ಜಿಲ್ಲೆಯ ಚನ್ನಪಟ್ಟಣದ ಕೋಟೆ ನಿವಾಸಿ ಪ್ರೇಮಾ ಅವರ ಮಗಳು ಚಂದ್ರಿಕಾ 13 ವಯಸ್ಸಿನಲ್ಲಿರುವಾಗಲೇ ಬ್ರೈನ್ ಟ್ಯೂಮರ್ ಕಾಣಿಸಿಕೊಂಡಿತ್ತು. ನಂತರ ಶಸ್ತ್ರಚಿಕಿತ್ಸೆ ಮಾಡಿದ ವೇಳೆ ಚಂದ್ರಿಕಾ ದೃಷ್ಟಿ ಕಳೆದುಕೊಂಡಿದ್ದಾರೆ. ತಾನು ಸಾಧಿಸಬೇಕೆಂಬ ಛಲದಿಂದ ರಾಮನಗರದ ಬಿಜಿಎಸ್ ಅಂಧರ ಶಾಲೆಯಲ್ಲಿ ಪಿಯುಸಿ ತನಕ ಚಂದ್ರಿಕಾ ವ್ಯಾಸಂಗ ಮಾಡಿದ್ದಾರೆ. ಬ್ರೈನ್ ಟ್ಯೂಮರ್‍ನಿಂದ ತತ್ತರಿಸಿ ಹೋಗಿರುವ ಚಂದ್ರಿಕಾರಿಗೆ ಆಗಾಗ ಮೂರ್ಚೆರೋಗ ಸಹ ಬರುತ್ತಿದೆ.
Advertisement
Advertisement
ತಾಯಿ ಪ್ರೇಮಾರಿಗೆ ಒಂದೆಡೆ ಮಗಳನ್ನು ಸಾಕುವ ಹೊಣೆಯಿದ್ರೆ, ಹೊಟ್ಟೆ ಹೊರೆಯುವುದಕ್ಕೆ ಮನೆ ಕೆಲಸ ಮಾಡಲೇಬೇಕಿದೆ. ಹಾಗಾಗಿ ತನ್ನ ತಾಯಿ ಜೊತೆಯಲ್ಲಿಯೇ ಇದ್ದು ನೋಡಿಕೊಳ್ಳುವುದರ ಜೊತೆಗೆ ಏನಾದ್ರೂ ಸಣ್ಣ ಸಂಪಾದನೆ ಮಾಡೋಕೆ ಸಣ್ಣದೊಂದು ಅಂಗಡಿ ಹಾಕಿಕೊಟ್ಟರೆ ಕುರುಡು ಹುಡುಗಿಗೆ ಊರುಗೋಲು ನೀಡಿದಂತಾಗುತ್ತದೆ ಅನ್ನೋದು ಚಂದ್ರಿಕಾ ಮನವಿ ಮಾಡಿಕೊಳ್ಳುತ್ತಿದ್ದಾರೆ.
Advertisement
ಒಟ್ಟಾರೆ ಸ್ವಂತದ್ದು ಅಂತಾ ಯಾವುದೇ ಆಸ್ತಿಯನ್ನು ಹೊಂದಿರದ ಪ್ರೇಮಾರಿಗೆ ಮಗಳೇ ಆಸ್ತಿಯಾಗಿದ್ದಾಳೆ. ಮಗಳ ಮದುವೆ ಮಾಡಿ ಮೊಮ್ಮಕ್ಕಳನ್ನು ಕಾಣುವ ಕನಸು ಕಂಡಿದ್ದವರಿಗೆ ಇದೀಗ ಮಗಳನ್ನೇ ಕಣ್ಣಲ್ಲಿ ಕಣ್ಣಿಟ್ಟು ಕಾಯುವಂತಾಗಿದೆ. ಹಾಗಾಗಿ ಯಾರಾದ್ರೂ ದಾನಿಗಳು ಈ ಬಡ ಕುಟುಂಬಕ್ಕೆ ನೆರವಾಗಿ ಜೀವನಾಧಾರಕ್ಕೊಂದು ಊರುಗೋಲಿನಿಂತಾದ್ರೆ, ಕುಟುಂಬವೊಂದಕ್ಕೆ ನೆಮ್ಮದಿ ನೆಲೆ ಕಲ್ಪಿಸಿ ಅನ್ನೋದು ಪಬ್ಲಿಕ್ ಟಿವಿಯ ಆಶಯ.
Advertisement
https://www.youtube.com/watch?v=hfAkaAbDnWU