Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕಾಲುಗಳ ಸ್ವಾಧೀನ ಕಳೆದುಕೊಂಡಿರುವ ಯುವಕನಿಗೆ ಬೇಕಿದೆ ಸೂಕ್ತ ಚಿಕಿತ್ಸೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | BELAKU | ಕಾಲುಗಳ ಸ್ವಾಧೀನ ಕಳೆದುಕೊಂಡಿರುವ ಯುವಕನಿಗೆ ಬೇಕಿದೆ ಸೂಕ್ತ ಚಿಕಿತ್ಸೆ

BELAKU

ಕಾಲುಗಳ ಸ್ವಾಧೀನ ಕಳೆದುಕೊಂಡಿರುವ ಯುವಕನಿಗೆ ಬೇಕಿದೆ ಸೂಕ್ತ ಚಿಕಿತ್ಸೆ

Public TV
Last updated: September 29, 2018 8:10 pm
Public TV
Share
2 Min Read
Belaku Bng 1
SHARE

ಬೆಂಗಳೂರು: 25 ವರ್ಷದ ಯುವಕನಿಗೆ ಬದುಕಿನಲ್ಲಿ ಏನಾನದರೂ ಸಾಧಿಸಬೇಕು, ತಾಯಿ-ತಂಗಿಯನ್ನ ಚೆನ್ನಾಗಿ ನೋಡಿಕೊಳ್ಳಬೇಕು ಅಂತ ಡಿಗ್ರಿ ಮಾಡುತ್ತಿದ್ದನು. ಅದರೆ ವಿಧಿಯಾಟವೇ ಬೇರೆಯಾಗಿತ್ತು. ವಾಂತಿ, ಭೇದಿ ಅಂತಾ ಆಸ್ಪತ್ರೆ ಸೇರಿದ್ದ ಯುವಕ ಕಳೆದ 6 ವರ್ಷದಿಂದ ಕಾಲುಗಳ ಸ್ವಾಧೀನ ಕಳೆದುಕೊಂಡು ಮನೆಗೆ ಆಸರೆಯಾಗಬೇಕಿದ್ದವ ತಾಯಿ ತಂಗಿಯ ಆರೈಕೆಯಲ್ಲಿ ಜೀವನ ಸಾಗಿಸುತ್ತಿದ್ದಾನೆ.

ಹೌದು. ಯುವಕ ಅಭಿಷೇಕ್ ಇದೀಗ ಅಮ್ಮ ಮತ್ತು ತಂಗಿಯ ಆರೈಕೆಯಲ್ಲಿ ಜೀವನ ಸಾಗಿಸುತ್ತಿದ್ದಾನೆ. ಬೆಂಗಳೂರಿನ ನಾಗರಬಾವಿ ಸಮೀಪ ಕೆಂಗೆಂಟೆ ನಿವಾಸಿಯಾಗಿರೋ ಈತ ತಾಯಿ ಮಂಗಳ, ತಂಗಿ ಲಕ್ಷ್ಮೀಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾನೆ. ಮಕ್ಕಳು ಸಣ್ಣವರಾಗಿದ್ದಾಗಲೇ ತಂದೆ ಕುಡಿತದ ಚಟಕ್ಕೆ ಬಿದ್ದು ಹೆಂಡತಿ ಮಕ್ಕಳನ್ನು ಬಿಟ್ಟು ಹೋಗಿದ್ದಾರೆ. ಕುಟುಂಬದ ಜವಾಬ್ದಾರಿಯನ್ನು ಹೊತ್ತ ತಾಯಿ ತನ್ನ ಇಬ್ಬರು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿ ಚೆನ್ನಾಗಿ ನೋಡಿಕೊಂಡಿದ್ದಾರೆ.

Belaku Bng 2

6 ವರ್ಷಗಳ ಹಿಂದೆ ತಾಯಿಯ ಕಷ್ಟವನ್ನ ಅರಿತಿದ್ದ ಮಗ ಅಭಿಷೇಕ್, ಬಿಕಾಂ ವಿದ್ಯಾಭ್ಯಾಸ ಮಾಡುತ್ತಿದ್ದ. ಇನ್ನೇನು ತಾಯಿ ಮತ್ತು ತಂಗಿಯನ್ನು ಸುಖವಾಗಿ ನೋಡಿಕೊಳ್ಳಲು ಉದ್ಯೋಗ ಮಾಡಬೇಕೆಂಬ ಖುಷಿಯಲ್ಲಿದ್ದನು. ಆದ್ರೆ ಅಭಿಷೇಕ್‍ಗೆ ವಾಂತಿ-ಭೇದಿ ಶುರುವಾಗಿ ಮೂರ್ಛೆ ರೋಗ ಆವರಿಸಿತ್ತು. ಮಗನ ಅವಸ್ಥೆಯನ್ನು ಕಂಡು ತಾಯಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ವೈದ್ಯರ ಎಡವಟ್ಟೋ ಏನೋ ಡಾಕ್ಟರ್ ನೀಡಿದ ಮಾತ್ರೆ ಸೇವಿಸಿದ ಬಳಿಕ ಹಂತ ಹಂತವಾಗಿ ಎರಡೂ ಕಾಲುಗಳ ಶಕ್ತಿ ಕುಂಠಿತಗೊಂಡಿದ್ದು, ಮಾತನಾಡಲು, ಓಡಾಡಲು ಹಾಗೂ ತನ್ನ ಕೆಲಸವನ್ನೂ ಕೂಡ ಮಾಡಿಕೊಳ್ಳಲು ಸಾಧ್ಯವಿಲ್ಲದಂತಾಗಿದೆ. ಕಾಲುಗಳು ಸ್ವಾಧೀನತೆ ಇಲ್ಲದೇ ಅಭಿಷೇಕ್ ಹಾಸಿಗೆ ಹಿಡಿದಿದ್ದಾನೆ.

ಮಗನಿಗೆ ಊಟ ತಿನ್ನಿಸುವುದರಿಂದ ಹಿಡಿದು ದಿನನಿತ್ಯ ಕರ್ಮಾದಿಗಳಿಗೆ ತಾಯಿ ಮತ್ತು ತಂಗಿ ಆರೈಕೆ ಮಾಡುತ್ತಿದ್ದಾರೆ. ಈತನನ್ನು ನೋಡಿಕೊಳ್ಳಲು ಒಬ್ಬರಾದರೂ ಮನೆಯಲ್ಲಿ ಇರಲೇಬೇಕು. ತಂಗಿ ಓದು ಮುಗಿಸಿ ಮನೇಲಿದ್ರೆ ತಾಯಿ ಖಾಸಗಿ ಶಾಲೆಯಲ್ಲಿ ಆಯಾ ಕೆಲಸ ಮಾಡುತ್ತಿದ್ದಾರೆ. ಬರುವ ಹಣದಿಂದ ಮಗನ ಔಷಧಿ, ಬಾಡಿಗೆಗೆ ಸಾಕಾಗುತ್ತಿದೆ.

ಗಂಡು ದಿಕ್ಕಿಲ್ಲದ ಮನೆಗೆ ಆಸರೆಯಾಗಬೇಕಿದ್ದ ಮಗ ಹಾಸಿಗೆ ಹಿಡಿದಿದ್ದು ಜೀವನ ಸಾಗಿಸಲು ಕಷ್ಟಕರವಾಗಿದೆ. ಕಷ್ಟಪಟ್ಟು ಮಾತನಾಡಲು ಯತ್ನಿಸಿದ ಅಭಿಷೇಕ್, ನನಗೆ ಸಹಾಯ ಮಾಡಿ, ನನ್ನ ಜೀವನಕ್ಕೆ ಆಧಾರವಾಗಿ ಎಂದು ಕೇಳಿಕೊಳ್ಳುತ್ತಿದ್ದಾನೆ. ಇತ್ತ ಮಗ ದುಡಿದು ಅವನ ಕಾಲ ಮೇಲೆ ನಿಂತು ಜೀವನ ಮಾಡಲು ಚಿಕಿತ್ಸೆ ಕೊಡಿಸಿ, ಪಿಂಚಣಿ ಸೌಲಭ್ಯ ಕೊಡಿಸಿ ಎಂದು ತಾಯಿ ಮತ್ತು ತಂಗಿ ಬೆಳಕು ಕಾರ್ಯಕ್ರಮದ ಮೂಲಕ ಸಹಾಯ ಬಯಸುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

https://www.youtube.com/watch?v=b2g_gWGZ4iQ

TAGGED:belakubengaluruhealingmotherPublic TVsisteryouthಚಿಕಿತ್ಸೆತಂಗಿತಾಯಿಪಬ್ಲಿಕ್ ಟಿವಿಬೆಂಗಳೂರುಬೆಳಕುಯುವಕ
Share This Article
Facebook Whatsapp Whatsapp Telegram

Cinema news

Daali Dhananjaya
ಮೊದಲ ಮಗುವಿನ ನಿರೀಕ್ಷೆಯಲ್ಲಿ ಡಾಲಿ ಧನಂಜಯ್‌ ದಂಪತಿ
Cinema Latest Main Post Sandalwood
Darshan
ಜಾಮೀನಿಗಾಗಿ ಎರಡನೇ ಬಾರಿ ಸುಪ್ರೀಂ ಕದ ತಟ್ಟಿದ ದರ್ಶನ್‌
Cinema Court Latest Main Post Sandalwood
yash toxic
ಜಾಗತಿಕ ಮಟ್ಟದಲ್ಲಿ ಅಬ್ಬರಿಸಲು ಸಜ್ಜಾದ ಯಶ್ – ಟಾಕ್ಸಿಕ್ ಬಿಡುಗಡೆ ದಿನಾಂಕ ಮತ್ತೆ ಮುಂದಕ್ಕೆ
Cinema Latest Main Post
Pooja Hegde Udupi
ಉಡುಪಿಯಲ್ಲಿ ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟಿ ಪೂಜಾ ಹೆಗ್ಡೆ
Cinema Districts Karnataka Latest Top Stories Udupi

You Might Also Like

Siddaramaiah 4
Latest

ಬೌರಿಂಗ್‌ ಆಸ್ಪತ್ರೆಯ ಗೋಡೆ ಕುಸಿದು 7 ಮಂದಿ ಸಾವು – ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ

Public TV
By Public TV
49 seconds ago
TVK Vijay
Latest

Axis my India Exit Poll Results | ತನ್ನ ಚೊಚ್ಚಲ ಚುನಾವಣೆಯಲ್ಲೇ ವಿಜಯ್‌ ಮ್ಯಾಜಿಕ್ – ದಳಪತಿಗೆ ಪಟ್ಟ!

Public TV
By Public TV
11 minutes ago
exit polls
Latest

Exit Polls 2026 Live: ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ‌

Public TV
By Public TV
12 minutes ago
NDA To Get Second Straight Term In Puducherry With 16 20 Of 30 Seats Exit Poll
Latest

Exit Polls – ಪುದುಚೇರಿಯಲ್ಲಿ ಮತ್ತೆ ಎನ್‌ಡಿಎ ಅಧಿಕಾರಕ್ಕೆ

Public TV
By Public TV
17 minutes ago
pm modi 5
Latest

Exit Poll| ಪಶ್ಚಿಮ ಬಂಗಾಳದಲ್ಲಿ ಫಸ್ಟ್‌ ಟೈಂ ಬಿಜೆಪಿ ಅಧಿಕಾರಕ್ಕೆ

Public TV
By Public TV
1 hour ago
MK Stalin Vijay
Latest

Exit Poll Results 2026 | ತಮಿಳುನಾಡಿನಲ್ಲಿ ಮತ್ತೆ ಡಿಎಂಕೆಗೆ ಪಟ್ಟಾಭಿಷೇಕ – ದಳಪತಿಯ ಟಿವಿಕೆಗೆ ಹೀನಾಯ ಸೋಲು

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?