ರಾಯಚೂರು: ಗಡಿ ವಿವಾದವನ್ನ (Belagavi Controvarsy) ಯಾರೂ ದೊಡ್ಡದು ಮಾಡಬಾರದು, ಅಂತಹ ಸಮಯ ಬಂದ್ರೆ ಕನ್ನಡ ಸಿನಿಮಾ ರಂಗ (Kannada Film Industry) ಒಗ್ಗಟ್ಟಾಗಿ ಬರುತ್ತೆ. ಹೋರಾಟ ಅನ್ನೋದಾದ್ರೆ ಎಲ್ಲ ನಟರು ಬರುತ್ತಾರೆ ಎಂದು ನಟ ಶಿವರಾಜ್ ಕುಮಾರ್ (Shivaraj kumar) ಹೇಳಿದ್ದಾರೆ.
Advertisement
ಮಂತ್ರಾಲಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವರಾಜ್ ಕುಮಾರ್ (Shivaraj Kumar), ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದದ ಕುರಿತ ಆ ವಿಚಾರ ನನಗೆ ಅಷ್ಟಾಗಿ ಗೊತ್ತಿಲ್ಲ. ನಾವು ಎಲ್ಲಿದ್ದೇವೆ? ಯಾವ ಜಾಗದಲ್ಲಿದ್ದೇವೆ ಅದಕ್ಕೆ ಮೊದಲು ಎಲ್ಲರೂ ಗೌರವ ಕೊಡಬೇಕು. ಯಾರು ಏನೇ ಹೇಳಿದ್ರೂ ನಾವು ಒಗ್ಗಟ್ಟಾಗಿರಬೇಕು. ಯಾರೇ ಆದ್ರೂ ಎಲ್ಲರನ್ನೂ ವೆಲ್ ಕಂ ಮಾಡೋಣ. ಅಗತ್ಯ ಬಂದಾಗ ನಾವು ಸೋದರ ಮನೋಭಾವದಿಂದ ಇರಬೇಕು ಅಂತ ನಟ ಡಾ.ಶಿವರಾಜ್ ಕುಮಾರ್ ಸಲಹೆ ನೀಡಿದ್ದಾರೆ.
Advertisement
Advertisement
ನಿನ್ನೆಯಷ್ಟೇ ಗಡಿ ವಿವಾದಕ್ಕೆ ಪ್ರತಿಕ್ರಿಯೆ ನೀಡಿದ್ದ ಸಿಎಂ ಬೊಮ್ಮಾಯಿ (Basavaraj Bommai), ವಿಶ್ವದ ಹಾಗೂ ದೇಶದ ಯಾವುದೇ ಮೂಲೆಯಲ್ಲಿದ್ದರೂ ಕನ್ನಡಿಗರನ್ನು ರಕ್ಷಣೆ ಮಾಡುವುದು ಸರ್ಕಾರದ ಜವಾಬ್ದಾರಿ. ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನಲ್ಲಿ ಕರ್ನಾಟಕದ ನಿಲುವು ಸ್ಪಷ್ಟವಾಗಿದೆ ಎಂದು ಹೇಳಿದ್ದರು. ಇದನ್ನೂ ಓದಿ: ಗಡಿ ಜಿಲ್ಲೆಗಳ 1,800 ಗ್ರಾಪಂ ಅಭಿವೃದ್ಧಿಗೆ ವಿಶೇಷ ಯೋಜನೆ – ಬೊಮ್ಮಾಯಿ ಭರವಸೆ
Advertisement
ಅಲ್ಲದೇ ತಮಿಳುನಾಡು, ಕೇರಳ ಗಡಿ ಭಾಗದಲ್ಲಿರುವ ಜಿಲ್ಲೆಗಳ 1,800 ಗ್ರಾಮ ಪಂಚಾಯತಿ ಅಭಿವೃದ್ಧಿ, ಗಡಿ ಭಾಗದಲ್ಲಿ ಕನ್ನಡ ಅಭಿವೃದ್ಧಿ ಹಾಗೂ ಶಿಕ್ಷಣಕ್ಕೆ ಹಲವು ಮಹತ್ವದ ಯೋಜನೆಗಳನ್ನು ಘೋಷಿಸಿದ್ದರು. ಇದನ್ನೂ ಓದಿ: ಕೇಸರಿ ಶಲ್ಯ ಹಾಕಿಕೊಂಡು ಸಿ.ಟಿ ರವಿ ಮನೆಗೆ ಮುತ್ತಿಗೆಗೆ ಯತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರು