20 ಗುಂಟೆ ಜಮೀನಿನಲ್ಲಿ ಟೊಮೆಟೋ ಬೆಳೆದು ಲಕ್ಷ ಲಕ್ಷ ಸಂಪಾದಿಸಿದ ಯುವ ರೈತ

Public TV
2 Min Read
Farmer

ಚಿಕ್ಕೋಡಿ: ಕಳೆದ ಒಂದು ತಿಂಗಳಿನಿಂದ ಈಚೆಗೆ ಟೊಮೆಟೋ ಬೆಳೆಗಾರರು ಬಂಗಾರದ ಬೆಳೆ ತೆಗೆದಿದ್ದಾರೆ. ಮಾರುಕಟ್ಟೆಯಲ್ಲಿ ಬೆಲೆ ಇಳಿಕೆ ಕಂಡಾಗ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬೀಳುತ್ತಿದ್ದ ಕೆಂಪು ಸುಂದರಿ ಟೊಮೆಟೋಗೆ (Tomato Crop) ಬೇಡಿಕೆಯೂ ಹೆಚ್ಚಾಗಿದ್ದು, ರೈತರು (Farmers) ಲಕ್ಷ ಲಕ್ಷ ಹಣ ಸಂಪಾದಿಸುತ್ತಿದ್ದಾರೆ. ಅದೇ ರೀತಿ ಬೆಳಗಾವಿಯ ಯುವ ರೈತ ಕೇವಲ 20 ಗುಂಟೆ ಜಮೀನಿನಲ್ಲಿ ಟೊಮೆಟೋ ಬೆಳೆದು ಲಕ್ಷ ಲಕ್ಷ ಹಣ ಸಂಪಾದಿಸಿದ್ದಾರೆ.

Farmers

ಹೌದು. ಬೆಳಗಾವಿ (Belagavi) ಜಿಲ್ಲೆಯ ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮದ ಯುವ ರೈತ ಮಹೇಶ್ ಹಿರೇಮಠ ಅವರು ಕಳೆದ 4 ವರ್ಷಗಳಿಂದ ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. 4 ಎಕರೆ ಜಮೀನು ಹೊಂದಿರುವ ಮಹೇಶ್‌ ಎರಡು ಎಕರೆಯಲ್ಲಿ ಕಬ್ಬು‌, ಉಳಿದ ಎರಡು ಎಕರೆ ಭೂಮಿಯಲ್ಲಿ ತರಕಾರಿ ಬೆಳೆ ಬೆಳೆದಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ಫ್ಲೈಓವರ್‌ನಲ್ಲೇ ಸ್ಕೂಟರ್ ಅಡ್ಡಗಟ್ಟಿ 1.70 ಕೋಟಿ ರೂ. ಮೌಲ್ಯದ ಚಿನ್ನ ದರೋಡೆ

Farmers 1

ಈ ಪೈಕಿ ಕೇವಲ 20 ಗುಂಟೆಯಲ್ಲಿ ಟೊಮೆಟೋ ಬೆಳೆದಿದ್ದಾರೆ. ಜಮೀನಿನಲ್ಲಿ 3,700 ಸಸಿ ನಾಟಿ ಮಾಡಿ ಕಳೆದ 45 ದಿನಗಳಿಂದ ಟೊಮೆಟೋ ಕೊಯ್ಲು ಆರಂಭಿಸಿದ್ದಾರೆ. 20 ಗುಂಟೆಯಲ್ಲಿ ಬರೋಬ್ಬರಿ 20 ಟನ್‌ 400 ಕೆಜಿಯಷ್ಟು ಟೊಮೆಟೋ ಇಳುವರಿ ತೆಗೆದು ಈವರೆಗೆ 11 ಲಕ್ಷ ರೂ. ಸಪಾಂದಿಸಿದ್ದಾರೆ. ಪ್ರತಿದಿನ 20 ಕೆಜಿ ತೂಕದ ಕ್ಯಾರಿಬ್ಯಾಗ್‌ನಲ್ಲಿ 120 ಬ್ಯಾಗ್‌ಗಳನ್ನು ಮಾರುಕಟ್ಟೆಗೆ ಸಾಗಿಸುತ್ತಿದ್ದ ಮಹೇಶ್‌ ಕೆಲವೇ ದಿನಗಳಲ್ಲಿ 11 ಲಕ್ಷ ರೂ. ಸಂಪಾದಿಸಿದ್ದಾರೆ. ಮಹೇಶ್‌ ಟೊಮೆಟೊ ಫಸಲು ತೆಗೆಯಲು 2 ಲಕ್ಷ ರೂ. ಖರ್ಚು ಮಾಡಿದ್ದು, ಬರೋಬ್ಬರಿ 9 ಲಕ್ಷ ರೂ. ಲಾಭ ಗಳಿಸಿದ್ದಾರೆ. ಇದನ್ನೂ ಓದಿ: ಪೊಲೀಸ್ ಸಿಬ್ಬಂದಿಯಿಂದ ಕಿರುಕುಳ ಆರೋಪ – ಎಸ್ಪಿ ಕಚೇರಿಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

ಈ ಸಂತಸವನ್ನ ʻಪಬ್ಲಿಕ್‌ ಟಿವಿʼ ಜೊತೆಗೆ ಹಂಚಿಕೊಂಡಿರುವ ಮಹೇಶ್‌, ಕಳೆದ ಮಾರ್ಚ್‌ ತಿಂಗಳಿನಲ್ಲಿ 20 ಗುಂಟೆ ಪ್ಲಾಂಟ್‌ನಲ್ಲಿ 3,700 ಟೊಮೆಟೊ ಸಸಿ ನಾಟಿ ಮಾಡಲಾಗಿತ್ತು. ನಾಟಿ ಮಾಡೋದಕ್ಕೂ ಮುನ್ನ ಪೂರ್ವಭಾವಿಯಾಗಿ ಮಣ್ಣು ಪರೀಕ್ಷೆ ಮಾಡಿ, ಅದಕ್ಕೆ ಬೇಕಾದಂತಹ ಗೊಬ್ಬರ ಹಾಗೂ ಕೀಟ ನಾಶಕ ಸಿಂಪಡಣೆ ಮಾಡಿದ್ವಿ. ಮುಂಚಿತವಾಗಿಯೇ ಸಸಿಗಳಿಗೆ ಬರಬಹುದಾದ ವಿವಿಧ ರೋಗಗಳ ಬಗ್ಗೆಯೂ ಕ್ರಮ ಕೈಗೊಂಡಿದ್ದೆವು. ಹಾಗಾಗಿ ಪ್ರತಿ ಗಿಡದಲ್ಲಿ 6 ರಿಂದ 7 ಕೆಜಿ ಇಳುವರಿ ಬಂದಿದೆ. ಈಗಾಗಲೇ 20 ಟನ್‌ಗೂ ಹೆಚ್ಚು ಟೊಮೆಟೊ ಕೊಯ್ಲು ಮಾಡಿದ್ದು, ಇನ್ನೂ 2 ಟನ್‌ ಇಳುವರಿ ಸಿಗುತ್ತೆ ಎಂದು ಹೇಳಿದ್ದಾರೆ.

ಟೊಮೆಟೋ ಬೆಳೆಗೆ ಎಲ್ಲ ಕಡೆಯಿಂದಲೂ ಬೇಡಿಕೆಯಿದ್ದು, ಯುವ ರೈತ ಮಹೇಶ್‌ ಇನ್ನೂ ಹೆಚ್ಚಿನ ಲಾಭದ ನಿರೀಕ್ಷೆಯಲ್ಲಿದ್ದಾರೆ.

Web Stories

Share This Article