ದಾವಣಗೆರೆ: ಆಸ್ತಿ ವಿಚಾರವಾಗಿ ಪೊಲೀಸ್ (Police) ಸಿಬ್ಬಂದಿ ವಿರುದ್ಧ ಕಿರುಕುಳ ಆರೋಪ ಮಾಡಿ ಮಹಿಳೆಯೊಬ್ಬಳು ಎಸ್ಪಿ ಕಚೇರಿಯಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ದಾವಣಗೆರೆಯಲ್ಲಿ (Davanagere) ನಡೆದಿದೆ.
ಚನ್ನಗಿರಿಯ (Channagiri) ಶಿವಕುಳೆನೂರಿನ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾಗಿ ತಿಳಿದು ಬಂದಿದೆ. ಆಸ್ತಿ ವಿಚಾರದಲ್ಲಿ ಪೊಲೀಸ್ ಸಿಬ್ಬಂದಿ ವೆಂಕಟೇಶ್ ಎಂಬಾತ ಕಿರುಕುಳ ನೀಡುತ್ತಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ. ಮಹಿಳೆ ಸಾಗುವಳಿ ಮಾಡುತ್ತಿದ್ದ 5 ಎಕರೆ ಜಮೀನು ವಿಚಾರವಾಗಿ ಸಂಬಂಧಿಕರ ನಡುವೆ ಜಗಳವಾಗಿದೆ. ಸಂಬಂಧಿಕನೇ ಆದ ವೆಂಕಟೇಶ್ ತನ್ನ ಪ್ರಭಾವ ಬಳಸಿ ಬಿತ್ತನೆ ಮಾಡಲು ಬಿಡುತ್ತಿಲ್ಲ ಎಂದು ಮಹಿಳೆ ಆರೋಪಿಸಿದ್ದಾಳೆ. ಇದನ್ನೂ ಓದಿ: ದೆಹಲಿ ಪ್ರವಾಹಕ್ಕೆ ಬಿಜೆಪಿಯೇ ಕಾರಣ – AAP ಆರೋಪ
Advertisement
Advertisement
ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಲು ಎಸ್ಪಿ ಕಚೇರಿಗೆ ಮಹಿಳೆ ಬಂದಿದ್ದಳು. ಈ ವೇಳೆ ಮಹಿಳೆ ವಿಷ ಸೇವಿಸಿದ್ದಾಳೆ. ವಿಷ ಸೇವಿಸಿದ್ದ ಮಹಿಳೆಯನ್ನು ಕೂಡಲೇ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
Advertisement
ಪ್ರಕರಣದ ಬಗ್ಗೆ ಮಾಹಿತಿ ಪಡೆದ ಎಸ್ಪಿ ಡಾ.ಕೆ ಅರುಣ್ ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ. ಗಾಂಧಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಎರಡು ದಿನಗಳ ಫ್ರಾನ್ಸ್ ಪ್ರವಾಸ ಮುಗಿಸಿ UAEಯತ್ತ ಹೊರಟ ಮೋದಿ
Web Stories