ಬೆಳಗಾವಿ: ವಿಧಾನಸಭೆ ಮತ್ತು ಪರಿಷತ್ ಕಲಾಪದಲ್ಲೂ ಕಾಂಗ್ರೆಸ್ ಶಾಸಕರು (Congress MLA’s) ಅಂಬೇಡ್ಕರ್ (Ambedkar) ಭಾವಚಿತ್ರ ಪ್ರದರ್ಶಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ವಿರುದ್ಧ ಧಿಕ್ಕಾರ ಕೂಗಿದ್ದಾರೆ.
ಇಂದು ವಿಧಾನಸಭೆಯ ಕಲಾಪ ಆರಂಭವಾಗುತ್ತಿದ್ದಂತೆ ಅಮಿತ್ ಶಾ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿ ಚರ್ಚೆಗೆ ಆಗ್ರಹಿಸಿದರು. ಸದನದಲ್ಲಿ ನಿರ್ಣಯ ಕೈಗೊಳಲು ಒತ್ತಾಯಿಸಿದರು. ಇದನ್ನೂ ಓದಿ: ಸಂಸತ್ ಭವನ ಆವರಣದಲ್ಲಿ ಹೈಡ್ರಾಮಾ – ರಾಹುಲ್ ತಳ್ಳಿದ್ರಿಂದ ನಾನು ಬಿದ್ದೆ ಎಂದ ಬಿಜೆಪಿ ಸಂಸದ
Advertisement
Advertisement
ಸದನದಲ್ಲಿ ಒಟ್ಟಾಗಿ ನಿಂತು ಅಂಬೇಡ್ಕರ್ ಫೊಟೋ ಹಿಡಿದು ಕಾಂಗ್ರೆಸ್ ಸದಸ್ಯರು ಧಿಕ್ಕಾರ ಕೂಗಿದರು. ಈ ಸಂದರ್ಭದಲ್ಲಿ ಬಿಜೆಪಿಯವರು ಕಾಂಗ್ರೆಸ್‌ನಿಂದಲೇ ಅಂಬೇಡ್ಕರ್ ಅವರಿಗೆ ಅನ್ಯಾಯವಾಗಿದೆ ಎಂದು ಹೇಳಿ ಪ್ರತಿಭಟಿಸಿದರು. ಇದನ್ನೂ ಓದಿ: ಸಂಸತ್ತಿನೊಳಗೆ ಹೋಗಲು ಬಿಡದೆ ನನ್ನನ್ನೇ ತಳ್ಳಿದ್ರು, ಬೆದರಿಕೆ ಹಾಕಿದ್ರು – ರಾಗಾ ಪ್ರತ್ಯಾರೋಪ
Advertisement
ಈ ವೇಳೆ ಕಾಂಗ್ರೆಸ್ ಸದಸ್ಯರು ಸದನದಲ್ಲಿ ಪ್ರದರ್ಶಿಸಿದ ಅಂಬೇಡ್ಕರ್ ಭಾವಚಿತ್ರವನ್ನೇ ತೆಗೆದುಕೊಂಡು ಕಾಂಗ್ರೆಸ್ ವಿರುದ್ಧವೇ ಬಿಜೆಪಿ ಶಾಸಕ ಗುರುರಾಜ್ ಗಂಟಿಹೊಳೆ ಪ್ರದರ್ಶಿಸಿದರು.
Advertisement
ಗದ್ದಲ, ಕೋಲಾಹಲ ಜೋರಾಗುತ್ತಿದ್ದಂತೆ ಸ್ಪೀಕರ್ ಹತ್ತು ನಿಮಿಷ ಕಲಾಪವನ್ನು ಮುಂದೂಡಿದರು.