ಬೆಳಗಾವಿ: ಹಿಜಬ್ ತೆಗೆದು ರೀಲ್ಸ್, ಟಿಕ್ ಟಾಕ್ ಮಾಡುತ್ತಾರೆ ಆದರೆ ಈಗ ಹಿಜಬ್ ತೆಗೆದು ತರಗತಿಗೆ ಬರಲು ಆಗುವುದಿಲ್ವಾ ಎಂದು ವಿಜಯ್ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಮಧ್ಯೆ ಜಟಾಪಟಿ ನಡೆದಿದೆ.
Advertisement
ತರಗತಿ ಮುಗಿಸಿ ಕಾಲೇಜಿನಿಂದ ಹೊರಬಂದ ಕೆಲ ವಿದ್ಯಾರ್ಥಿನಿಯರು ಹಿಜಬ್ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರಿಗೆ ಶಿಕ್ಷಣ ಮುಖ್ಯವಲ್ಲ, ಶಿಕ್ಷಣ ಮುಖ್ಯ ಆಗಿದ್ದರೆ ಹಿಜಬ್ ತೆಗೆದು ತರಗತಿಗೆ ಬರುತ್ತಿದ್ದರು. ಇನ್‍ಸ್ಟಾಗ್ರಾಮ್‍ನಲ್ಲಿ ಹಿಜಬ್ ತೆಗೆದು ರೀಲ್ಸ್ ಹಾಕುತ್ತಾರೆ. ಈಗ ಹಿಜಬ್ ತೆಗೆದು ತರಗತಿಗೆ ಬರೀದಕ್ಕೆ ಆಗೋಲ್ವಾ? ಹಿಜಬ್ ಬುರ್ಖಾ ತೆಗೆಯಲು ಪ್ರತ್ಯೇಕ ಕೊಠಡಿ ಕೊಡುತ್ತೇವೆ ಅಂದರೂ ಕೇಳುತ್ತಿಲ್ಲ. ಅವರಿಂದ ನಮಗೆ ತೊಂದರೆ ಆಗುತ್ತಿದೆ ಎಂದು ಆರೋಪಿಸಿದ್ದಾರೆ.
Advertisement
Advertisement
ಈ ವೇಳೆ ಹಿಜಬ್ ಧರಿಸಿದ್ದ ವಿದ್ಯಾರ್ಥಿನಿಯರು ನಾವು ತರಗತಿಗೆ ಹಾಜರಾಗಿಲ್ಲ ಹೇಗೆ ತೊಂದರೆ ಆಗುತ್ತದೆ? ಇವರಿಗೂ ವಿದ್ಯಾರ್ಥಿನಿಯರು ಅದು ನಮ್ಮ ಸಂಪ್ರದಾಯ ತಗೆಯಲ್ಲ ಎಂದ ಖಡಕ್ ಆಗಿ ಉತ್ತರಿಸಿದ್ದಾರೆ. ಇದನ್ನೂ ಓದಿ: ಸೈನ್ ಭಾಷೆ ಅರ್ಥಮಾಡಿಕೊಳ್ಳುವ ಎಐ ಮಾದರಿಯನ್ನು ರಚಿಸಿದ 20 ವರ್ಷದ ಯುವತಿ
Advertisement
ಬೆಳಗಾವಿಯ ವಿಜಯ್ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ನಾವು ಕಾಲೇಜು ಬಿಡುತ್ತೇವೆ. ಆದರೆ ಹಿಜಬ್ ಬಿಡಲ್ಲ . ಡಿಪ್ಲೊಮಾ, ಡಿಗ್ರಿ ಕಾಲೇಜಿಗೆ ಹೈಕೋರ್ಟ್ ಮಧ್ಯಂತರ ಆದೇಶ ಅನ್ವಯಿಸಲ್ಲ ಎಂದು ಹಿಜಬ್, ಬುರ್ಖಾಗಾಗಿ ವಿದ್ಯಾರ್ಥಿನಿಯರು ಪಟ್ಟುಹಿಡಿದಿದ್ದಾರೆ. ನಿನ್ನೆ ನಮಗೆ ಸೋಮವಾರವರೆಗೆ ರಜೆ ಇದೆ ಅಂತ ಹೇಳಿದ್ದರು. ಆದರೆ ಬೇರೆ ವಿದ್ಯಾರ್ಥಿಗಳಿಗೆ ತರಗತಿ ತೆಗೆದುಕೊಳ್ಳುತ್ತಿದ್ದಾರೆ. 26ನೇ ತಾರೀಖು ನಮ್ಮ ಪರೀಕ್ಷೆ ಇದೆ. ಹಿಜಬ್ ಧರಿಸಿ ಬಂದರೆ ತರಗತಿಗೆ ಪ್ರವೇಶ ನೀಡಲ್ಲ ಅಂತಿದ್ದಾರೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಹಿಜಬ್ ಹೈಡ್ರಾಮಾ – ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ಆರು ಯುವಕರು ವಶ