ಬೆಳಗಾವಿ: ಹಾಸನದಲ್ಲಿ (Hassana) ಕೆಲ ಪೊಲೀಸರು (Police) ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಹಸು ಸಾಗಾಣಿಕೆಯಲ್ಲಿ ಪೊಲೀಸರೇ ಕಿಂಗ್ ಪಿನ್ ಆಗಿದ್ದಾರೆ ಅವರ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಎಂದು ಜೆಡಿಎಸ್ ಸದಸ್ಯ ಸೂರಜ್ ರೇವಣ್ಣ (Suraj Revanna) ಆಗ್ರಹ ಮಾಡಿದ್ದಾರೆ.
ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಸೂರಜ್ ರೇವಣ್ಣ ಮಾತನಾಡಿ, ಹಾಸನದಲ್ಲಿ ಕೆಲವು ಪೊಲಿಸರು ರಾಜಕಾರಣಿಗಳಾಗಿದ್ದಾರೆ. ಮರಳು ಗಣಿಗಾರಿಕೆ, ಗ್ಯಾಂಬ್ಲಿಂಗ್ ಸೇರಿದಂತೆ ಹಲವು ದಂಧೆಗಳಲ್ಲಿ ತೊಡಗಿದ್ದಾರೆ. ವಾರಕ್ಕೆ 20-30 ವಾಹನಗಳಲ್ಲಿ ಹಸು ಸಾಗಾಣಿಕೆ ಆಗುತ್ತಿದೆ. ಪೊಲೀಸರೇ ಇದರ ಕಿಂಗ್ ಪಿನ್ ಆಗಿದ್ದಾರೆ.15 ಸಾವಿರ ರೂ.ವರೆಗೆ ಪ್ರತಿ ಗಾಡಿಗೆ ಹಣ ವಸೂಲಿ ಮಾಡುತ್ತಿದ್ದಾರೆ. ಇವರ ವಿರುದ್ದ ಕ್ರಮ ತೆಗೆದುಕೊಳ್ಳಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ಮುಸ್ಲಿಮರಿಗೆ 10 ಸಾವಿರ ಕೋಟಿ ಹೇಳಿಕೆಗೆ ಸಿದ್ದರಾಮಯ್ಯ ವಿವರಣೆ ನೀಡಬೇಕು: ಶ್ರೀನಿವಾಸ ಪೂಜಾರಿ
Advertisement
Advertisement
ಗೃಹ ಸಚಿವ ಪರಮೇಶ್ವರ್ (G Parameshwar) ಉತ್ತರಿಸಿ, ದೂರು ಬಂದ ಬಳಿಕ ಜಯಪ್ರಕಾಶ್ ಎಂಬ ಪೊಲಿಸ್ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ಪೊಲಿಸರಿಗೆ ಸಂಬಂಧ ಇಲ್ಲದ ಕೆಲಸ ಮಾಡಿದ ಪೊಲಿಸರ ಮೇಲೆ ಕ್ರಮ ತೆಗೆದುಕೊಳ್ಳಲಾಗಿದೆ. ಜಯಪ್ರಕಾಶ್ ಮೇಲೆ ಮೂರು ಪ್ರಮುಖ ಆರೋಪಗಳಿವೆ. ಗೋ ಸಾಗಾಣಿಕೆ ಸೇರಿದಂತೆ ಹಲವು ಪ್ರಕರಣ ಇದೆ ಇಂತಹವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಕಾಂಗ್ರೆಸ್‌ಗೆ ಮತ ಹಾಕಿ ಎಂದು ಜಯಪ್ರಕಾಶ್ ಹೇಳಿದ್ದ, ಆದಾಗ್ಯೂ ಆತನ ಮೇಲೆ ಕ್ರಮ ಆಗಿದೆ ಎಂದು ಉತ್ತರಿಸಿದರು.
Advertisement