ಸದನದಲ್ಲಿ ವಿಪಕ್ಷಗಳನ್ನು ಕಟ್ಟಿ ಹಾಕಲು ಚರ್ಚೆ: ಸಿಎಲ್‌ಪಿ ಸಭೆಯಲ್ಲಿ ಏನು ಚರ್ಚೆ ನಡೆದಿದೆ?

Public TV
1 Min Read
Belagavi Session Congress Legislature Party meeting CM Siddaramaiah DK Shivakumar CBI Case 1

ಬೆಳಗಾವಿ:  ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ (CLP Meeting) ಬೆಳಗಾವಿ ನಗರದ ಹೊರವಲಯದಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ರಾತ್ರಿ ನಡೆಯಿತು.

ಈ ಸಭೆಯಲ್ಲಿ ಸಭೆಯಲ್ಲಿ ಸದನದಲ್ಲಿ ವಿಪಕ್ಷಗಳನ್ನು ಕಟ್ಟಿಹಾಕುವ ತಂತ್ರಗಾರಿಕೆ ಬಗ್ಗೆ ಚರ್ಚೆ ನಡೆಸಲಾಗಿದೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ಒಂದೇ ಪೋಸ್ಟ್‌ಗೆ ಇಬ್ಬರ ನೇಮಕ- ಅಧಿಕಾರಿಗಳ ವರ್ಗಾವಣೆ ವೇಳೆ BMTC ಎಡವಟ್ಟು

Belagavi Session Congress Legislature Party meeting CM Siddaramaiah DK Shivakumar CBI Case 2

ಏನೇನು ಚರ್ಚೆ ನಡೆದಿದೆ?
ಡಿಕೆಶಿ ಸಿಬಿಐ ಕೇಸ್‌ (DK Shivakumar CBI Case) ವಾಪಸ್‌, ಸಿದ್ದರಾಮಯ್ಯ ಮುಸ್ಲಿಂ ಸಮಾವೇಶದ ಹೇಳಿಕೆ ವಿಚಾರ ಸೇರಿದಂತೆ 4-5 ವಿಚಾರಗಳಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷಗಳು ಪ್ರಯತ್ನಿಸಬಹುದು. ಅದಕ್ಕೆ ತಕ್ಕಂತೆ ನಮ್ಮ ಕಡೆಯಿಂದಲು ಸಿದ್ದತೆ ಮಾಡಿಕೊಳ್ಳಬೇಕು. ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಸದನದಲ್ಲಿ ಇದ್ದು ಬೆಂಬಲಿಸಬೇಕು. ಸೋಮವಾರದಿಂದ ಜಟಾಪಟಿ ಜೋರಾಗಬಹುದು ಎಲ್ಲರೂ ಕಡ್ಡಾಯವಾಗಿ ಹಾಜರಿರುವಂತೆ ಸಭೆಯಲ್ಲಿ ಸೂಚನೆ ನೀಡಲಾಗಿದೆ. ಇದನ್ನೂ ಓದಿ: ಮಾವುತನೇ ಅನುಮಾನ ವ್ಯಕ್ತಪಡಿಸಿದರೂ ವಿಸ್ತೃತ ಮರಣೋತ್ತರ ಪರೀಕ್ಷೆ ನಡೆಸಲಿಲ್ಲ ಯಾಕೆ? – ಅರ್ಜುನ ಸಾವಿನ ಸುತ್ತ ಎದ್ದಿವೆ ಹಲವು ಪ್ರಶ್ನೆಗಳು

ಸಭೆಯಲ್ಲಿ ಶಾಸಕ ಬಸವರಾಜ ರಾಯರೆಡ್ಡಿ (Basavaraj Rayareddy) ವರ್ತನೆ ಬಗ್ಗೆ ಕೆಲವು ಶಾಸಕರ ಅಸಮಾಧಾನ ಹೊರಹಾಕಿದ್ದಾರೆ. ಹಿರಿಯ ಶಾಸಕರಾದರೂ ಸರ್ಕಾರಕ್ಕೆ ಮುಜುಗರ ಆಗುವ ರೀತಿಯಲ್ಲಿ ನಡೆದುಕೊಳ್ಳುತ್ತಾರೆ. ಈ ವರ್ತನೆ ಸರಿಯಲ್ಲ ಎಂದು ಹೇಳಿದ್ದಾರೆ. ಇದಕ್ಕೆ ರಾಯರೆಡ್ಡಿ ಹತ್ತಿರ ನಾನು ಮಾತನಾಡುತ್ತೇನೆ ಎಂದು ಸಿಎಂ ಸಮಾಧಾನ ಮಾಡಿದ್ದಾರೆ. ಶಾಸಕ ಬಿ.ಆರ್.ಪಾಟೀಲ್ (BR Patel) ರಾಜೀನಾಮೆ ನೀಡುವ ಪತ್ರದ ಬಗ್ಗೆಯೂ ಚರ್ಚೆ ನಡೆದಿದೆ.

 

ಕರ್ನಾಟಕದಿಂದ ರಾಜ್ಯಸಭೆಗೆ (Rajya Sabha) ಸೋನಿಯಾ ಗಾಂಧಿ (Sonia Gandhi) ಅವರನ್ನು ಕರೆತರುವ ವಿಚಾರದ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ಸೋನಿಯಾರನ್ನು ಕರ್ನಾಟಕದಿಂದಲೇ (Karnataka) ರಾಜ್ಯ ಸಭೆಗೆ ಕಳುಹಿಸೋಣ. ಇದರಿಂದ ಪಕ್ಷಕ್ಕೂ ಅನುಕೂಲ ಎಂದು ಶಾಸಕರು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 

Share This Article