ಬೆಳಗಾವಿ ಉದ್ಯಮಿ ಹತ್ಯೆ – ಪತ್ನಿ ಸೇರಿ ಮೂವರು ಆರೋಪಿಗಳು ಹಿಂಡಲಗಾ ಜೈಲಿಗೆ ಶಿಫ್ಟ್‌

Public TV
1 Min Read
Belagavi Santosh Padmannavar Murder Case wife and two friends arrested

ಬೆಳಗಾವಿ: ಉದ್ಯಮಿ ಸಂತೋಷ ‌ಪದ್ಮನ್ನವರ (Santosh Padmannavar) ಕೊಲೆ ಪ್ರಕರಣದ (Murder Case) ಮೂವರು ಆರೋಪಿಗಳನ್ನು ಬಂಧಿಸಿ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲಾಗಿದೆ.

ಬೆಳಗಾವಿಯಲ್ಲಿ (Belagavi) ಬಡ್ಡಿ ವ್ಯವಹಾರ, ರಿಯಲ್ ಎಸ್ಟೇಟ್ ಬಿಸಿನೆಸ್ ಮಾಡುತ್ತಿದ್ದ ಸಂತೋಷ ಪದ್ಮನ್ನವರ ಅಕ್ಟೋಬರ್ 9 ರಂದು ಮೃತಪಟ್ಟಿದ್ದರು. ತಂದೆಯ ಸಾವಿನ ಬಗ್ಗೆ ಪುತ್ರಿ ಸಂಜನಾ ಪದ್ಮನ್ನವರ ಅನುಮಾನ ವ್ಯಕ್ತಪಡಿಸಿದ್ದರು. ಪ್ರಕರಣದಲ್ಲಿ ಭಾಗಿಯಾಗಿರುವ ಹಿನ್ನೆಲೆ ಪ್ರಕರಣದ ಮೂವರು ಆರೋಪಿಗಳಾದ ಸಂತೋಷ ‌ಪತ್ನಿ ಉಮಾ ಪದ್ಮನ್ನವರ, ಶೋಭಿತ್‌ಗೌಡ, ಪವನ್ ಹಿಂಡಲಗಾ ಜೈಲಿಗೆ ರವಾನೆ ಮಾಡಲಾಗಿದೆ.Belagavi Santosh Padmannavar Murder Case wife and two friends arrested 1

ಮಂಗಳೂರಲ್ಲಿ ತಲೆ ಮರೆಸಿಕೊಂಡಿದ್ದ ಶೋಭಿತ್‌ಗೌಡ, ಪವನ್ ವಶಕ್ಕೆ ಪಡೆದಿದ್ದ ಬೆಳಗಾವಿ ಮಾಳಮಾರುತಿ ಠಾಣೆ ಪೊಲೀಸರು ಇಡೀ ದಿನ ವಿಚಾರಣೆ ಆದ ಬಳಿಕ ಮೂವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಸದ್ಯ ಆರೋಪಿಗಳನ್ನು  14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್ ಆದೇಶ ನೀಡಿದ್ದು ಮೂವರನ್ನೂ ಹಿಂಡಲಗಾ ಜೈಲಿಗೆ ಮಾಳಮಾರುತಿ ಠಾಣೆ ಪೊಲೀಸರು ರವಾನಿಸಿದ್ದಾರೆ.

 

Share This Article