ಬೆಳಗಾವಿ: ಜಿಲ್ಲೆಯ ಮಹಾರಾಷ್ಟ್ರ ಗಡಿ ಭಾಗದಲ್ಲಿ MES ಪುಂಡರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಕನ್ನಡ ರಾಜ್ಯೋತ್ಸವಕ್ಕೆ (Kannada Rajyotsava) ವಿರುದ್ಧವಾಗಿ ಕರಾಳ ದಿನಾಚರಣೆ ಮಾಡಿದ 18 ಮಂದಿ ಎಂಇಎಸ್ ಪುಂಡರ ವಿರುದ್ಧ ಕೇಸ್ ದಾಖಲಾಗಿದೆ.
ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ (Market Police Station) ಎಂಇಎಸ್ ಕಿಡಿಗೇಡಿಗಳ ವಿರುದ್ಧ FIR ದಾಖಲಾಗಿದೆ. ಕನ್ನಡ ರಾಜ್ಯೋತ್ಸವ ದಿನದಂದು ಕರಾಳ ದಿನ ಆಚರಿಸಿ ನಾಡದ್ರೋಹ ಘೋಷಣೆ ಕೂಗಿದ್ದ 18 ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: 5 ವರ್ಷ ಸಿಎಂ ಆಗಿ ಮುಂದುವರಿಯೋ ವಿಚಾರ ಗೊತ್ತಿರೋದು ಸಿದ್ದರಾಮಯ್ಯ, ಡಿಸಿಎಂಗೆ ಮಾತ್ರ: ಪರಂ
ಜಿಲ್ಲಾಡಳಿತದಿಂದ ಎಂಇಎಸ್ ಕರಾಳ ದಿನಾಚರಣೆಗೆ ಅನುಮತಿ ನಿರಾಕರಿಸಲಾಗಿತ್ತು. ಅನುಮತಿ ಇಲ್ಲದಿದ್ದರೂ ನಗರದಲ್ಲಿ ಕರಾಳ ದಿನಾಚರಣೆ ಹೆಸರಲ್ಲಿ ಮೆರವಣಿಗೆ ಮಾಡಿ ಬೆಳಗಾವಿ, ಬೀದರ್, ಭಾಲ್ಕಿ, ನಿಪ್ಪಾಣಿ, ಕಾರವಾರ ಸಂಯುಕ್ತ ಮಹಾರಾಷ್ಟ್ರ ಅಂತ ನಾಡದ್ರೋಹಿ ಘೋಷಣೆ ಕೂಗಿ ಮೊಂಡತನ ಪ್ರದರ್ಶನ ಮಾಡಿದ್ದರು. ಇದನ್ನೂ ಓದಿ: ಶಮಿ ಬೆಂಕಿ ಬೌಲಿಂಗ್‌ಗೆ ನೀಲಿ ತಾರೆ ಫಿದಾ – ಕೇಂದ್ರ ಲಸ್ಟ್ ರಿಯಾಕ್ಷನ್ ಸಿಕ್ಕಾಪಟ್ಟೆ ವೈರಲ್
ನಾಡದ್ರೋಹಿ ಘೋಷಣೆ ಕೂಗಿದ ಎಂಇಎಸ್‌ನ ಮಾಲೋಜಿರಾವ್ ಅಷ್ಟೇಕರ್, ಮನೋಹರ ಕಿಣೇಕರ, ರಂಜಿತ್ ಚವ್ಹಾಣ, ಸರಿತಾ ಪಾಟೀಲ, ಸಾರಿಕಾ ಪಾಟೀಲ, ಅಮರ, ಯಳ್ಳೂರಕರ್ ಪ್ರಕಾಶ ಮರಗಾಲಿ, ರವಿ ಸಾಳುಂಕೆ, ಅಂಕುಶ ಕೇಸರಕರ್ ಸೇರಿದಂತೆ 18 ಜನರ ವಿರುದ್ಧ ಕೇಸ್ ದಾಖಲಾಗಿದೆ. ಇದನ್ನೂ ಓದಿ: ಟೆಲಿವಿಷನ್ ಪ್ರೀಮಿಯರ್ ಲೀಗ್ ಸೀಸನ್-3: ಶುಭ ಕೋರಿದ ಬಸವರಾಜ ಹೊರಟ್ಟಿ
Web Stories