ಬೆಳಗಾವಿ: ಭಾರತದ ಸಂವಿಧಾನ ಪಾಲನೆ ಮಾಡದವರಿಗೆ ಈ ದೇಶದಲ್ಲಿರುವ ಹಕ್ಕು ಇಲ್ಲ ಎಂದು ಬೆಳಗಾವಿ ದಕ್ಷಿಣ ಶಾಸಕ ಅಭಯ್ ಪಾಟೀಲ್ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಇರಬೇಕು ಅಂದರೆ ಸಂವಿಧಾನ ಪಾಲನೆ ಮಾಡಬೇಕು. ಆದ್ರೆ, ಸಂವಿಧಾನ ಪಾಲನೆ ಮಾಡಲ್ಲ ಅನ್ನೋರು ಬೇರೆ ದೇಶಕ್ಕೆ ಹೋಗಬೇಕು. ಯಾವ ದೇಶದ ಸಂವಿಧಾನ ಪಾಲನೆ ಮಾಡುತ್ತಾರೆ ಆ ದೇಶಕ್ಕೆ ಹೋಗಲಿ ಎಂದರು.
Advertisement
Advertisement
ಹಿಜಬ್ ವಿಚಾರವಾಗಿ ಕೋರ್ಟ್ ಆದೇಶ ವಿರುದ್ಧ ಮುಸ್ಲಿಂ ಸಂಘಟನೆಗಳ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರ ಸಂದೇಶ ಇಷ್ಟೇ, ಅಂದರೆ ನಾವು ಈ ದೇಶದಲ್ಲಿ ಇರಲು ಅರ್ಹರಲ್ಲ. ನೀವೇ ಕಳುಹಿಸಿ ಎನ್ನುವ ವಾತಾವರಣ ತಯಾರು ಮಾಡುತ್ತಿದ್ದಾರೆ. ಯಾವ ಇಲಾಖೆಯಿಂದ ಯಾವ ನಿರ್ಣಯ ಆಗಿದೆ ಅಂತಾ ನನಗಂತೂ ಗೊತ್ತಿಲ್ಲ. ನ್ಯಾಯಾಲಯದ ನಿರ್ಣಯ ಒಪ್ಪದೇ ನಾವು ಹಿಜಬ್ ಹಾಕಿಕೊಂಡು ಬರುತ್ತೇವೆ ಎನ್ನುತ್ತಾರೆ. ನ್ಯಾಯಾಲಯ ನಿರ್ಣಯ ಮಾನ್ಯ ಮಾಡದೇ ಮಸೀದಿಗಳ ಮೇಲೆ ಬೆಳಗ್ಗೆ 4 ಗಂಟೆಗೆ ಸ್ಪೀಕರ್ ಹಾಕುತ್ತೇವೆ ಅಂತಾರೆ. ಇದು ನ್ಯಾಯಾಲಯದ ಮೇಲೆ ಅಪಮಾನ ಅಲ್ಲದೇ ಮತ್ತೇನು? ನ್ಯಾಯಾಲಯ ನ್ಯಾಯ ಕಾಪಾಡುವ ಜವಾಬ್ದಾರಿ ಭಾರತದಲ್ಲಿರುವ ಎಲ್ಲರ ಮೇಲಿದೆ. ಅದನ್ನ ಕಾಪಾಡುವಂತದ್ದನ್ನು ಮೊದಲು ಅವರು ಮಾಡಬೇಕು ಎಂದು ವಾಗ್ದಾಳಿ ನಡೆಸಿದರು.
Advertisement
Advertisement
ಮುಸ್ಲಿಂ ವರ್ತಕರಿಗೆ ಆರ್ಥಿಕ ನಿರ್ಬಂಧದ ಬಗ್ಗೆ ಮಾತನಾಡಿದ ಅವರು, ಆರ್ಥಿಕ ನಿರ್ಬಂಧ ಯಾಕೆ ಹಾಕುತ್ತಿದ್ದಾರೆ ಅವಲೋಕನ ಮಾಡಬೇಕು. ಪ್ರತಿರೋಧ ಯಾವಾಗ ಆಗುತ್ತದೆ ಎನ್ನುವುದರ ಬಗ್ಗೆ ಚಿಂತನೆ ಆಗಬೇಕು. ಆರ್ಥಿಕ ನಿರ್ಬಂಧ ಮಾಡುವರು ಸ್ಥಳೀಯವಾಗಿ ಏನ್ ಸಮಸ್ಯೆ ಆಗಿತ್ತು ಚಿಂತನೆ ಮಾಡಬೇಕು ಎಂದು ಸಲಹೆ ನೀಡಿದರು. ಇದನ್ನೂ ಓದಿ: ದೇಶದ ವೈವಿಧ್ಯತೆಯನ್ನು ಗುರುತಿಸುವುದು ಸಂಘ ಪರಿವಾರದ ಅಜೆಂಡಾವಲ್ಲ : ಪಿಣರಾಯಿ
ಇದೇ ವೇಳೆ ಹೆಚ್‍ಡಿಕೆ ಬಗ್ಗೆ ಕಿಡಿಕಾರಿದ ಅವರು, ಆರ್‌ಎಸ್‍ಎಸ್ ಬಗ್ಗೆ ಒಂದ್ ಪರ್ಸೆಂಟೂ ಕುಮಾರಸ್ವಾಮಿಗೆ ಗೊತ್ತಿಲ್ಲ. ಒಂದು ಪರ್ಸೆಂಟ್ ಗೊತ್ತಿದ್ದರೂ ಅವರು ಈ ರೀತಿ ಟೀಕೆ ಮಾಡ್ತಿರಲಿಲ್ಲ. ಆದರೆ ಯಾರ‍್ಯಾರು ಹೋದಾಗ ಕುಮಾರಸ್ವಾಮಿಗೆ ಏನೇನ್ ಪ್ರೇರಣೆ ಆಗುತ್ತೋ ದೇವರೇ ಬಲ್ಲ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: 48 ಗಂಟೆಗಳಲ್ಲಿ 3ನೇ ಸರ್ಕಾರಿ ಟ್ವಿಟ್ಟರ್ ಖಾತೆ ಹ್ಯಾಕ್
ಸಿ.ಎಂ.ಇಬ್ರಾಹಿಂ ಮಾಧ್ಯಮಗಳಲ್ಲಿ ದೇವೇಗೌಡರ ಕುರಿತು ಊಟದ ಬಗ್ಗೆ ಹೇಳಿಕೆ ಕೊಟ್ಟಿದ್ದರು. ನಾನು ಅದನ್ನ ಇಲ್ಲಿ ಹೇಳೋಕೆ ಹೋಗಲ್ಲ. ಅವರಿಗೆ ಯಾವ ಊಟ ರುಚಿ ಹತ್ತುತ್ತೆ ಅಂತಾ ಹೇಳಿದ್ದರು. ಅವರು ಹೇಳಿದ್ದು ಮದುವೆ ಊಟ ಅಲ್ವಂತೆ ಮುಂದಿನದ್ದು ನೀವೆ ತಿಳಿದುಕೊಳ್ಳಿ. ಅಂತಾ ವ್ಯಕ್ತಿ ಮತ್ತೆ ಅಲ್ಲಿ ಹೋಗಿ ಇವರಿಗೆ ಪ್ರೇರಣೆ ಮಾಡುವಂತಹದ್ದು ಎಂದು ಟೀಕಿಸಿದರು.