ಚಿಕ್ಕೋಡಿ(ಬೆಳಗಾವಿ): ಕೃಷ್ಣಾ ನದಿ ತೀರದಲ್ಲೊಂದು ವಿಸ್ಮಯವೊಂದು ನಡೆದಿದೆ. ರಣಭೀಕರ ಪ್ರವಾಹಕ್ಕೂ ಶಿವಲಿಂಗ ಹಾಗೂ ನಂದಿ ವಿಗ್ರಹ ನಲುಗದೆ ಜನರಲ್ಲಿ ಅಚ್ಚರಿ ಮೂಡಿಸಿವೆ.
Advertisement
ಹೌದು. ಕೃಷ್ಣಾ ನದಿ ತೀರ ಉಕ್ಕಿ ಹರಿದ ಪರಿಣಾಮ 2019 ಹಾಗೂ 2021ರಲ್ಲಿ ರಣ ಭೀಕರ ಪ್ರವಾಹ ಬಂದಿತ್ತು. ರಕ್ಕಸ ಪ್ರವಾಹಕ್ಕೆ ನದಿ ತೀರದ ಜನರ ಬದುಕು ಅಕ್ಷರಶಃ ನಲುಗಿ ಹೋಗುವುದರ ಜೊತೆಗೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಅಷ್ಟೇ ಅಲ್ಲದೇ ಪ್ರವಾಹಕ್ಕೆ ಸಿಲುಕಿ ಸೇತುವೆಗಳು, ಸಾವಿರಾರು ಮನೆಗಳು, ಕಲ್ಲು ಬಂಡೆಗಳು ಕೊಚ್ಚಿ ಹೋಗಿದ್ದವು. ಆದರೆ ವಿಸ್ಮಯ ಎನ್ನುವಂತೆ ಶಿವಲಿಂಗ ಹಾಗೂ ನಂದಿ ಮೂರ್ತಿಗಳು ಒಂದಿಂಚು ಅಲುಗಾಡದೇ ತಟಸ್ಥವಾಗಿ ಅಲ್ಲೆ ಉಳಿದಿರುವುದು ಅಚ್ಚರಿಗೆ ಕಾರಣವಾಗಿದೆ.
Advertisement
Advertisement
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ನದಿ ತೀರದಲ್ಲಿರುವ ಈ ಎರಡು ಮೂರ್ತಿಗಳು ಭೀಕರ ಪ್ರವಾಹಕ್ಕೂ ಕೊಚ್ಚಿ ಹೋಗಿಲ್ಲ. ಈ ಎರಡು ಮೂರ್ತಿಗಳು ಇರುವ ಪಕ್ಕದಲ್ಲೇ ಇರುವ ಸೇತುವೆ ಕೊಚ್ಚಿ ಹೋಗಿವೆ. ಆದರೆ ಈ ವಿಗ್ರಹಗಳು ಮಾತ್ರ ಇದ್ದಲ್ಲೆ ಇರುವುದನ್ನು ಕಂಡು ಸ್ಥಳೀಯರು ಇದೊಂದು ಚಮತ್ಕಾರ ಎನ್ನುತ್ತಿದ್ದಾರೆ. ಇದನ್ನೂ ಓದಿ: ಜೆಡಿಎಸ್ ಶಾಸಕನಿಗೆ ಹೆಚ್‍ಡಿಕೆ ಶಾಕ್ – ಕ್ಷೇತ್ರದಲ್ಲಿ ಹೊಸ ಅಭ್ಯರ್ಥಿ ಹಾಕಲು ತಂತ್ರ!