ಬೆಳಗಾವಿ(ಚಿಕ್ಕೋಡಿ): ಎಲ್ಲೆಡೆ ಆತಂಕ ಸೃಷ್ಟಿಸಿರುವ ಕೊರೊನಾ ವೈರಸ್‍ನಿಂದ ಕುಕ್ಕುಟೋದ್ಯಮಕ್ಕೆ ಭಾರಿ ನಷ್ಟವಾಗಿದ್ದು, ಕೊರೊನಾದಿಂದ ನಷ್ಟ ಅನುಭವಿಸುತ್ತಿರುವ ಜಿಲ್ಲೆಯ ಕೋಳಿ ಫಾರಂ ಮಾಲೀಕರು 15 ಸಾವಿರಕ್ಕೂ ಹೆಚ್ಚು ಕೋಳಿಗಳನ್ನು ಜೀವಂತ ಸಮಾಧಿ ಮಾಡಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮಸರಗುಪ್ಪಿ ಮತ್ತು ಗೋಕಾಕ್ ತಾಲೂಕಿನ ಲಕ್ಷ್ಮೇಶ್ವರ ಗ್ರಾಮದಲ್ಲಿ ಹೀಗೆ ಕೋಳಿಗಳ ಮಾರಣಹೋಮ ನಡೆದಿದೆ. ಲಕ್ಷ್ಮೇಶ್ವರ ಗ್ರಾಮದಲ್ಲಿ 8 ಸಾವಿರ ಕೋಳಿಗಳು, ಮಸರಗುಪ್ಪಿ ಗ್ರಾಮದಲ್ಲಿ 7 ಸಾವಿರಕ್ಕೂ ಹೆಚ್ಚು ಕೋಳಿಗಳನ್ನು ಫಾರಂ ಮಾಲೀಕ ಗುಂಡಿ ತೋಡಿ ಜೀವಂತವಾಗಿ ಹೂತು ಹಾಕಿದ್ದಾರೆ.
Advertisement
Advertisement
ಕೋಳಿ ಫಾರಂ ಮಾಲೀಕರಾದ ಲಕ್ಷ್ಮೇಶ್ವರ ಗ್ರಾಮ ಸುಲೇಮಾನ್ ಲಾಡಖಾನ್, ಮಸರಗುಪ್ಪಿ ಗ್ರಾಮದ ರಫೀಕ್ ಇನಾಮ್ದಾರ್ ತಮ್ಮ ಫಾರಂನಲ್ಲಿದ್ದ ಕೋಳಿಗಳನ್ನು ಜೀವಂತ ಹೂತಿದ್ದಾರೆ. ಕೊರೊನಾ ಭೀತಿ ಹಿನ್ನೆಲೆ ಕೋಳಿ ವ್ಯಾಪಾರ ನೆಲಕಚ್ಚಿದೆ. ಬೇಡಿಕೆ ಇಲ್ಲದೇ ಬೆಲೆ ಕಡಿಮೆಯಾಗಿ ಕೋಳಿ ಫಾರಂ ಮಾಲೀಕರು ಚಿಕನ್ ವ್ಯಾಪಾರಸ್ಥರು ನಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಕೋಳಿ ಸಾಕಾಣಿಕೆ ಮಾಡಿ ಇನ್ನಷ್ಟು ನಷ್ಟ ಅನುಭವಿಸುವುದು ಬೇಡವೆಂದು ಕೋಳಿಗಳನ್ನು ಮಣ್ಣು ಮಾಡಲು ಮಾಲೀಕರು ನಿರ್ಧರಿಸಿದರು. ಆದ್ದರಿಂದ ರಾತೋರಾತ್ರಿ ಬೃಹತ್ ಗುಂಡಿಗಳನ್ನು ತೋಡಿ ಕೋಳಿಗಳನ್ನು ಇಬ್ಬರೂ ಕೋಳಿ ಫಾರಂ ಮಾಲೀಕರು ಜೀವಂತವಾಗಿ ಹೂತಿದ್ದಾರೆ.
Advertisement
Advertisement
ಈ ಹಿಂದೆ ಶಿವಮೊಗ್ಗದ ಸಂತೆಕಡೂರು ಗ್ರಾಮದ ಶ್ರೀನಿವಾಸ್ ಕೋಳಿ ಫಾರಂನಲ್ಲಿದ್ದ 22 ದಿನಗಳ ಸುಮಾರು 4 ಸಾವಿರ ಕೋಳಿ ಮರಿಗಳನ್ನು ಗುಂಡಿ ತೆಗೆದು ಜೀವಂತವಾಗಿ ಹೂಳಲಾಗಿತ್ತು. ಕಳೆದ ನಾಲ್ಕು ದಿನಗಳಿಂದ ಕೋಳಿ ಮಾಂಸ ಮಾರಾಟಗಾರರು ಕೋಳಿ ಖರೀದಿಗೆ ಹಿಂದೇಟು ಹಾಕಿದ್ದು, ಸುಮಾರು 170 ರೂ. ಇದ್ದ ಕೋಳಿ ಮಾಂಸದ ಬೆಲೆ ಕೇವಲ 70 ರೂ. ಗೆ ಇಳಿದಿದೆ. ಇದರಿಂದಾಗಿ ಭಾರೀ ನಷ್ಟವುಂಟಾಗಿದೆ. ಹೀಗಾಗಿ ಕೋಳಿ ಸಾಕಾಣಿಕೆದಾರರು ಕೂಡ ನಷ್ಟದ ಹಾದಿಯಲ್ಲಿದ್ದು, ತಾವು ಫಾರಂನಲ್ಲಿ ಬೆಳೆಸಲಾಗುತ್ತಿರುವ ಕೋಳಿಗಳಿಗೆ ಬೆಲೆ ಇಲ್ಲದಂತಾಗಿ ನಷ್ಟ ಅನುಭವಿಸುವ ಬದಲು ಜೀವಂತವಾಗಿ ಹೂತರೆ ಇನ್ನಷ್ಟು ನಷ್ಟವುಂಟಾಗುವುದು ತಪ್ಪುತ್ತದೆ ಎಂದು ಮಾಲೀಕರು ಕೋಳಿ ಮರಿಗಳನ್ನು ಜೀವಂತವಾಗಿ ಹೂತಿದ್ದರು.