ಬೆಳಗಾವಿ: ಗುರುವಾರ ನಡೆದ ಕಾಂಗ್ರೆಸ್ ಟ್ರಾಕ್ಟರ್ ಪ್ರತಿಭಟನೆಗೆ ತಡೆ ಹಿಡಿದ ಪೊಲೀಸರ ಅಧಿಕಾರಿಗಳ ವಿರುದ್ದ ವಿಧಾನ ಪರಿಷತ್ ನಲ್ಲಿಂದ ಹಕ್ಕುಚ್ಯುತಿ ಮಂಡನೆ ಮಾಡಲಾಯಿತು. ವಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಹಕ್ಕುಚ್ಯುತಿ ಮಂಡನೆ ಮಾಡಿದರು. ಹಕ್ಕುಚ್ಯುತಿ ಪ್ರಸ್ತಾಪಕ್ಕೆ ಒಪ್ಪಿದ ಸಭಾಪತಿ ಹೊರಟ್ಟಿ ವಿಚಾರಣೆಗೆ ಹಕ್ಕುಚ್ಯುತಿ ಸಮಿತಿಗೆ ಪ್ರಕರಣ ವಹಿಸಿದರು.
ಹಕ್ಕುಚ್ಯುತಿ ವಿಷಯ ಪ್ರಸ್ತಾಪದ ವೇಳೆ ಮಾತನಾಡಿದ ವಿಪಕ್ಷ ನಾಯಕ ಎಸ್.ಆರ್. ಪಾಟೀಲ್, ನಿನ್ನೆ ಅಧಿವೇಶನಕ್ಕೆ ಬರೋವಾಗ ನಮ್ಮನ್ನ ಪೊಲೀಸ್ ಅಧಿಕಾರಿಗಳು ಒಳಗೆ ಬಿಡಲಿಲ್ಲ. ಈ ಅಧಿಕಾರ ಅವರಿಗೆ ಯಾರು ಕೊಟ್ಟರು? 3 ಗಂಟೆ ನಮ್ಮನ್ನ ನಿನ್ನೆ ರಸ್ತೆಯಲ್ಲಿ ತಡೆ ಹಿಡಿದಿದ್ದಾರೆ. ಗೇಟ್ ಬೀಗ ಹಾಕಿ ನಮ್ಮನ್ನ ತಡೆದಿದ್ದಾರೆ. ನನ್ನ ರಾಜಕೀಯ ಜೀವನದಲ್ಲಿ ಇಂತಹ ಉದ್ದಟತನ ನಾನು ನೋಡಿಲ್ಲ. ಇದು ಸದಸ್ಯರ ಹಕ್ಕುಚ್ಯುತಿ. ಸಭಾಪತಿಗಳಿಗೆ ಮಾಡಿದ ಅಪಮಾನ. ಅಧಿವೇಶನದ ವೇಳೆ ಪೊಲೀಸರು ನಮ್ಮನ್ನ ಟಚ್ ಮಾಡಬೇಕಾದ್ರೆ ಸಭಾಪತಿಗಳ ಅನುಮತಿ ಪಡೆಯಬೇಕು. ಐಪಿಎಸ್ ಅಧಿಕಾರಿಗಳಿಗೆ ಇದರ ಬಗ್ಗೆ ಗೊತ್ತಿಲ್ಲವಾ? ಹೀಗಾಗಿ ಅಧಿಕಾರಿಗಳಾದ ತ್ಯಾಗರಾಜನ್ ಮತ್ತು ಸತೀಸ್ ಕುಮಾರ್ ಇಬ್ಬರಿಗೆ ಶಿಕ್ಷೆ ಆಗಬೇಕು ಅಂತ ಒತ್ತಾಯ ಮಾಡಿದರು. ಇದನ್ನೂ ಓದಿ: ಲಂಚ ಆರೋಪ – ಹೈಕೋರ್ಟ್ ನಿವೃತ್ತ ಜಡ್ಜ್ ವಿರುದ್ಧ ಚಾರ್ಜ್‍ಶೀಟ್ ಸಲ್ಲಿಕೆ
Advertisement
Advertisement
ಹಕ್ಕುಚ್ಯುತಿ ಮಂಡನೆ ವೇಳೆ ಸಚಿವ ನಾರಾಯಣಗೌಡ ಮತ್ತು ಕಾಂಗ್ರೆಸ್ ಸದಸ್ಯ ನಡುವೆ ಮಾತಿನ ಗದ್ದಲ ನಡೀತು. ಪರಸ್ಪರ ಏಕವಚನದಲ್ಲಿ ಸದಸ್ಯರು ಬೈದುಕೊಂಡು ಗಲಾಟೆ ಮಾಡಿದರು. ಸಚಿವ ನಾರಾಯಣಗೌಡ ಕ್ಷಮೆ ಕೇಳಬೇಕು ಅಂತ ಕಾಂಗ್ರೆಸ್ ಪ್ರತಿಭಟನೆ ಕೂಡಾ ನಡೆಸಿತು. ಇದನ್ನೂ ಓದಿ: ಹೆಣ್ಣು ಕುಲಕ್ಕೆ ಕ್ಷಮೆ ಕೇಳಿದ ರಮೇಶ್ ಕುಮಾರ್ – ಮುಂದುವರಿಸೋದು ಬೇಡ ಎಂದ ಸ್ಪೀಕರ್ ಕಾಗೇರಿ
Advertisement
ಏನಿದು ಪ್ರಕರಣ?
ಹಕ್ಕುಚ್ಯುತಿ ಮಂಡನೆ ವೇಳೆ ಟ್ರಾಕ್ಟರ್ ನಲ್ಲಿ ಬರಬೇಡ ಅಂತ ಪೊಲೀಸರು ಹೇಳ್ತಾರೆ. ಟ್ರಾಕ್ಟರ್ ರೈತರ ವಾಹನ ಇದರಲ್ಲಿ ಬರಬಾರದು ಅಂದ್ರೆ ಹೇಗೆ ಎಂದು ಎಸ್.ಆರ್.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಎದ್ದ ಸಚಿವ ನಾರಾಯಣಗೌಡ, ನಿತ್ಯವೂ ಟ್ರಾಕ್ಟರ್ ನಲ್ಲಿ ಬರ್ತೀರಾ ನೀವು. ನಿತ್ಯ ಟ್ರಾಕ್ಟರ್ ನಲ್ಲಿ ಬನ್ನಿ ಅಂತ ಪ್ರಶ್ನೆ ಮಾಡಿದ್ರು. ನಾರಾಯಣಗೌಡ ಮಾತಿಗೆ ಕಾಂಗ್ರೆಸ್ ಸದಸ್ಯರ ವಿರೋಧ ವ್ಯಕ್ತಪಡಿಸಿದರು.ನಮಗೆ ಇಷ್ಟ ಬಂದ ಗಾಡಿಯಲ್ಲಿ ಬರ್ತೀವಿ.ಅದನ್ನ ಕೇಳೋಕೆ ನೀವು ಯಾರು ಎಂದು ಕಾಂಗ್ರೆಸ್ ಸದಸ್ಯರು ತಿರುಗಿ ಬಿದ್ದರು. ಮತ್ತೆ ಎದ್ದ ಸಚಿವ ನಾರಾಯಣಗೌಡ ಬೆಂಗಳೂರಿನಲ್ಲಿ ಎತ್ತಿನ ಗಾಡಿಯಲ್ಲಿ ಬಂದಿದ್ರಿ. ನಿಮ್ಮ ಮನೆಯಲ್ಲಿ ಎತ್ತು ಇವೆಯಾ? ನೀವು ಎತ್ತು ಸಾಕಿದ್ದೀರಾ ಅಂತ ಪ್ರಶ್ನೆ ಮಾಡಿದ್ರು.
Advertisement
ಇದಕ್ಕೆ ಮತ್ತೆ ಕಾಂಗ್ರೆಸ್ ಸದಸ್ಯರ ವಿರೋಧ ವ್ಯಕ್ತಪಡಿಸಿದರು. ನೀನು ಮುಂಬೈ ನಲ್ಲಿ ಇರೋನು ನಿನಗೇನು ಗೊತ್ತು ಟ್ರಾಕ್ಟರ್, ಎತ್ತಿನಗಾಡಿಯ ಬಗ್ಗೆ ಅಂತ ನಾರಾಯಣಗೌಡ ವಿರುದ್ದ ಕಾಂಗ್ರೆಸ್ ಸದಸ್ಯ ಆಕ್ರೋಶ ಹೊರ ಹಾಕಿದರು.ಈ ವೇಳೆ ಪರಸ್ಪರ ಏಕ ವಚನದಲ್ಲಿ ಸದಸ್ಯರು ಮಾತಾಡಿಕೊಂಡರು.
ನೀನೊಬ್ಬ ಏಜೆಂಟ್ ಎಂದು ನಾರಾಯಣಗೌಡ ವಿರುದ್ದ ಕಾಂಗ್ರೆಸ್ ಸದಸ್ಯರು ಆಕ್ರೋಶ ಹೊರ ಹಾಕಿದರು. ಈ ವೇಳೆ ಆಕ್ರೋಶ ಗೊಂಡ ನಾರಾಯಣಗೌಡ ಕಾಂಗ್ರೆಸ್ ವಿರುದ್ದ ಕಿಡಿಕಾರಿದರು.ಈ ವೇಳೆ ಮತ್ತೆ ಸದನದಲ್ಲಿ ಏಕವಚನಗಳ ಬೈಗುಳದ ಮಾತು ನಡೀತು. ಮತ್ತೆ ಸದನದಲ್ಲಿ ಗದ್ದಲ ಗಲಾಟೆ ಆಯ್ತು. ಈ ಸಮಯದಲ್ಲಿ ಮಧ್ಯೆ ಪ್ರವೇಶ ಮಾಡಿದ ವಿಪಕ್ಷ ನಾಯಕ ಎಸ್.ಆರ್. ಪಾಟೀಲ್, ಇವನು ಅಯೋಗ್ಯ ಮಂತ್ರಿ, ನಿನ್ನಿಂದ ಸರ್ಕಾರಕ್ಕೆ ಕಪ್ಪು ಚುಕ್ಕೆ ಎಂದು ಆಕ್ರೋಶ ಹೊರ ಹಾಕಿದರು.ಕೂಡಲೇ ಸದನದ ಬಾವಿಗೆ ಇಳಿದ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ಸಚಿವ ನಾರಾಯಣಗೌಡ ಕ್ಷಮೆ ಕೇಳಬೇಕು ಅಂತ ಪ್ರತಿಭಟನೆ ಮಾಡಿದರು.
ಕೂಡಲೇ ಮಧ್ಯೆ ಪ್ರವೇಶ ಮಾಡಿದ ಸಭಾಪತಿಗಳು,ಸಚಿವ ನಾರಾಯಣಗೌಡ ಅನುಮತಿ ಇಲ್ಲದೆ ಮಾತಾಡಿದ್ದು ಸರಿಯಲ್ಲ. ಏನೇ ಮಾತಾಡಿದ್ರು ನನ್ನ ಅನುಮತಿ ಇರಬೇಕು. ನಾರಾಯಣಗೌಡ ಮಾತನ್ನ ಕಡತದಿಂದ ತೆಗೆಯುವಂತೆ ರೂಲಿಂಗ್ ಕೊಟ್ಟು ಪ್ರಕರಣ ಇತ್ಯರ್ಥ ಮಾಡಿದರು.
ಅಂತಿಮವಾಗಿ ಹಕ್ಕುಚ್ಯುತಿ ಮಂಡನೆಗೆ ಒಪ್ಪಿಗೆ ಕೊಟ್ಟ ಸಭಾಪತಿ ಗಳು ವಿಚಾರಣೆಗೆ ಹಕ್ಕುಚ್ಯುತಿ ಸಮಿತಿಗೆ ಪ್ರಕರಣ ಒಪ್ಪಿಸಿದರು.