1 ಸಾವಿರ ಕಿ.ಮೀ. ದೂರದಿಂದ ದಾಳಿ – ಕಾರಿನಲ್ಲಿ ಹೋಗುತ್ತಿದ್ದಾಗಲೇ ಇರಾನ್‌ ಟಾಪ್‌ ಸೇನಾ ನಾಯಕ ಹತ್ಯೆ

Public TV
1 Min Read
Behnam Shahriyari commander of the Quds Forces Weapons Transfer Unit in the IRGC was eliminated in a precise IDF strike

ಟೆಲ್‌ ಅವಿವ್‌ : ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಒಳಗಡೆಯೇ ಇದ್ದ ಪ್ಯಾಲೆಸ್ಟೈನ್ ಕಾರ್ಪ್ಸ್‌ನ ಕಮಾಂಡರ್, ಇರಾನ್ ಮತ್ತು ಹಮಾಸ್ (Hamas) ನಡುವಿನ ಪ್ರಮುಖ ಕೊಂಡಿಯಾಗಿದ್ದ ಬೆಹ್ನಮ್ ಶಹರಿಯಾರಿಯನ್ನು (Behnam Shahriyari) ಶನಿವಾರ ಇಸ್ರೇಲ್‌ (Israel) ಹತ್ಯೆ ಮಾಡಿದೆ.

ಪಶ್ಚಿಮ ಇರಾನ್‌ನಲ್ಲಿ ಬೆಹ್ನಮ್ ಶಹರಿಯಾರಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ಸಂದರ್ಭದಲ್ಲೇ ಖಚಿತ ಗುಪ್ತಚರ ಮಾಹಿತಿಯನ್ನು ಆಧಾರಿಸಿ ಇಸ್ರೇಲ್‌ ಡ್ರೋನ್‌ ಹಾರಿಸಿ ಹತ್ಯೆ ಮಾಡಿದೆ.

ಇಸ್ರೇಲ್‌ನಿಂದ 1,000 ಕಿ.ಮೀ ದೂರದಲ್ಲಿದ್ದ ಪ್ರದೇಶದ ಮೇಲೆ ನಿಖರವಾಗಿ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ ಎಂದು ಐಡಿಎಫ್‌ (IDF) ಹೇಳಿಕೊಂಡಿದೆ. ಅಷ್ಟೇ ಅಲ್ಲದೇ ಕಾರಿನ ಮೇಲೆ ದಾಳಿ ಮಾಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್‌ ಮಾಡಿದೆ. ಇದನ್ನೂ ಓದಿ: ಇರಾನ್‌ ಪರ ನಿಲ್ಲಿ: ಕೇಂದ್ರ ಸರ್ಕಾರಕ್ಕೆ ಸಿದ್ದರಾಮಯ್ಯ ಒತ್ತಾಯ

 

ಅಕ್ಟೋಬರ್ 7, 2023 ರಲ್ಲಿ ಹಮಾಸ್‌ ಉಗ್ರರು ಇಸ್ರೇಲ್‌ ಒಳಗಡೆ ನುಗ್ಗಿ ದಾಳಿ ನಡೆಸಿ ಹತ್ಯಾಕಾಂಡ ಮಾಡಿದ್ದರು. ಹಮಾಸ್‌ ನಡೆಸಿದ ನರಮೇಧಕ್ಕೆ ಹಣಕಾಸು ಮತ್ತು ಶಸ್ತ್ರಾಸ್ತ್ರ ಸಹಾಯವನ್ನು ಶಹರಿಯಾರಿ ಮಾಡಿದ್ದಾರೆ ಎಂದು ವರದಿಯಾಗಿದೆ.

ಗಾಜಾ ಮತ್ತು ಪಶ್ಚಿಮ ದಂಡೆಯಲ್ಲಿ ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ, ಉಗ್ರರಿಗೆ ಹಣಕಾಸಿನ ಸಹಾಯ, ಭಯೋತ್ಪಾದಕ ಗುಂಪುಗಳಿಗೆ ತರಬೇತಿ ನೀಡುವ ಕಾರ್ಯಕ್ರಮಗಳು ಶಹರಿಯಾರಿ ಮೂಲಕವೇ ನಡೆಯುತ್ತಿತ್ತು ಎಂದು ಇಸ್ರೇಲ್‌ ಹೇಳಿದೆ.  ಇದನ್ನೂ ಓದಿ: ಹೆಣ್ಣು ಹೂವಿನಂತೆ – ಇರಾನ್‌ ಸುಪ್ರೀಂ ನಾಯಕನ ಹಳೆಯ ಪೋಸ್ಟ್‌ ವೈರಲ್‌

 

Share This Article