ಬೆಂಗಳೂರು: ನಗರದ ಪೊಲೀಸ್ ಪೇದೆಗೆ ಕೊರೊನಾ ಪಾಸಿಟಿವ್ ಬಂದಿದ್ದು, ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಬೆಚ್ಚಿ ಬಿದ್ದಿದೆ.
ಚೆಕ್ ಪೋಸ್ಟ್ ಗಳಲ್ಲಿ ಕೆಲಸ ಮಾಡುತ್ತಿದ್ದ ಪೊಲೀಸ್ ಸಿಬ್ಬಂದಿ ಸೇರಿದಂತೆ 50 ವರ್ಷ ಮೇಲ್ಪಟ್ಟ ಸಿಬ್ಬಂದಿಯನ್ನು ರ್‍ಯಾಂಡಮ್ ಆಗಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪರೀಕ್ಷೆಯಲ್ಲಿ ಬೇಗೂರಿನ ಪೇದೆಗೆ ಪಾಸಿಟಿವ್ ಬಂದಿದೆ.
Advertisement
ಈ ಹೆಡ್ ಕಾನ್ ಸ್ಟೇಬಲ್ ಕೊರೊನಾ ಆರಂಭದ 15 ದಿನ ಚೆಕ್ ಪೋಸ್ಟ್ ಗಳಲ್ಲಿ ಕೆಲಸ ಮಾಡಿದ್ದಾರೆ. 15 ದಿನ ಹಿಂದೆ ಮಳವಳ್ಳಿಗೆ ಹೋಗಿದ್ದಾಗ ಅಪಘಾತವಾಗಿದ್ದು ತಲೆಗೆ ಮತ್ತು ಕಾಲಿಗೆ ಪೆಟ್ಟು ಬಿದ್ದಿದೆ. ಅಪಘಾತವಾದ ಬಳಿಕ ಪೇದೆ ರಜೆಯಲ್ಲಿದ್ದರು.
Advertisement
Advertisement
ರಜಾ ಅವಧಿಯಲ್ಲಿ ಪೇದೆ ಮಳವಳ್ಳಿಗೆ ತೆರಳಿದ್ದರಿಂದ ಕೊರೊನಾ ಬಂದಿರಬಹುದೇ? ಕೋವಿಡ್ ಆಸ್ಪತ್ರೆಯಲ್ಲಿ ಅಣ್ಣನ ಪತ್ನಿ ನರ್ಸ್ ಆಗಿರುವ ಕಾರಣ ಆಕೆಯ ಕಡೆಯಿಂದ ಬಂದಿರಬಹುದೇ? ಆರಂಭದ ದಿನದಲ್ಲಿ ಚೆಕ್ ಪೋಸ್ಟ್ ಡ್ಯೂಟಿ ಮಾಡಿದಾಗ ತಗುಲಿರಬಹುದೇ ಈ ಎಲ್ಲ ಕೋನದಿಂದ ಈಗ ಮೂಲವನ್ನು ಪತ್ತೆ ಹಚ್ಚುವ ಕಾರ್ಯ ಆರಂಭವಾಗಿದೆ.
Advertisement
ಪೇದೆಗೆ ಇಬ್ಬರು ಅಣ್ಣಂದಿರಿದ್ದು ಎಲ್ಲರೂ ಒಂದೇ ಮನೆಯಲ್ಲಿ ವಾಸವಾಗಿದ್ದಾರೆ. ಮೊದಲೇ ಅಣ್ಣ ವೈದ್ಯರಾಗಿದ್ದು, ಅಣ್ಣನ ಪತ್ನಿ ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಎರಡನೇ ಅಣ್ಣ ಪ್ರಸಿದ್ಧ ಫಾರ್ಮಾ ಕಂಪನಿಯಲ್ಲಿ ಉದ್ಯೋಗದಲ್ಲಿದ್ದು, ಪತ್ನಿ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ.
ಪೇದೆಯ ಪತ್ನಿಯೂ ನರ್ಸ್ ಆಗಿ ಉದ್ಯೋಗ ಮಾಡಿಕೊಂಡಿದ್ದಾರೆ. ಈಗ ಎಲ್ಲರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಇವರ ಫಲಿತಾಂಶ ಬರಬೇಕಿದೆ. 9 ಮಂದಿ ಪ್ರಾಥಮಿಕ ಸಂಪರ್ಕ, 45 ಮಂದಿ ದ್ವಿತೀಯ ಸಂಪರ್ಕಕ್ಕೆ ಬಂದಿದ್ದು ಅವರನೆಲ್ಲ ಕ್ವಾರಂಟೈನ್ ಮಾಡಲಾಗಿದೆ.