ಭೋಪಾಲ್: ಭಿಕ್ಷೆ ಬೇಡಿದರೂ ಊಟ ಸಿಗಲಿಲ್ಲ, ಮನನೊಂದ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ರಿಂಕಿ (22) ಮೃತಳಾಗಿದ್ದಾಳೆ. ಸುಮಾರು ಎರಡೂವರೆ ವರ್ಷದ ಹಿಂದೆ ರಾಜ್‍ಕುಮಾರ್ ಎನ್ನುವನನ್ನು ಈಕೆ ವಿವಾಹವಾಗಿದ್ದರು. ದಂಪತಿಗೆ 17 ತಿಂಗಳ ಮಗು ಇದೆ. ಪತಿ ರಾಜ್‍ಕುಮಾರ್ ಗುರುವಾರ ಪಡಿತರ ತೆಗೆದುಕೊಂಡು ಬರಲು ಹೋಗಿದ್ದ ವೇಳೆ ರಿಂಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದನ್ನೂ ಓದಿ: ಶಾಕಿಂಗ್ ಡಿಆರ್‌ಎಸ್ ವಿಡಿಯೋಗೆ ಕೊಹ್ಲಿ ಕಿಡಿ – ರಿವ್ಯೂ ಸಕ್ಸಸ್ ಎಂದು ವಾಹಿನಿಯಿಂದ ಸಮರ್ಥನೆ
Advertisement
Advertisement
ನಡೆದಿದ್ದೇನು?: ಒಂದು ವಾರದಿಂದ ಕುಟುಂಬಕ್ಕೆ ಊಟಕ್ಕೆ ಸಮಸ್ಯೆಯಾಗುತ್ತಿತ್ತು. ಯಾರೂ ಕೆಲಸವನ್ನು ಕೊಡುತ್ತಿರಲಿಲ್ಲ. ಇದರಿಂದಾಗಿಯೇ ರಿಂಕಿ ಭಿಕ್ಷಾಟನೆಗೆ ತೆರಳುತ್ತಿದ್ದಳು. ಹಲವು ದಿನಗಳಿಂದ ಸರಿಯಾದ ಊಟ ಸಿಕ್ಕಿರಲಿಲ್ಲ. ಅರ್ಧ ರೊಟ್ಟಿಯನ್ನು ಹಂಚಿ ತಿನ್ನುತ್ತಿದ್ದೆವು. ಪಾರ್ದಿ ಸಮುದಾಯದವರಾಗಿರುವುದರಿಂದ ಬೇಟೆ ಮಾಡುವುದು ನಮ್ಮ ಕಸುಬಾಗಿದೆ. ಬಿದಿರು ಮುಂತಾದ ಮರಮುಟ್ಟುಗಳಿಂದ ಕೆಲವು ಸಾಮಗ್ರಿಗಳನ್ನು ತಯಾರಿಸಿ, ಮಾರಾಟ ಮಾಡಿ ಜೀವನ ನಡೆಸುತ್ತಿದ್ದೇವು ಎಂದು ಮೃತ ಮಹಿಳೆ ಪತಿ ರಾಜಕುಮಾರ್ ಹೇಳಿದ್ದಾರೆ. ಇದನ್ನೂ ಓದಿ: ಜನವರಿ 31ರಿಂದ ಕೇಂದ್ರ ಬಜೆಟ್ ಅಧಿವೇಶನ
Advertisement
Advertisement
ನಮ್ಮ ಕುಟುಂಬಕ್ಕೆ ರೇಷನ್ ಆಪ್ಕೆ ದ್ವಾರಾ ಯೋಜನೆಯ ಪಡಿತರ ಚೀಟಿಯೂ ಇತ್ತು. ಹಲವು ಬಾರಿ ಪಡಿತರ ಅಂಗಡಿಗೆ ತೆರಳಿದರೂ ನನಗೆ ಪಡಿತರ ಸಿಕ್ಕಿರಲಿಲ್ಲ. ಇದರಿಂದಾಗಿ ಕುಟುಂಬ ಉಪವಾಸ ಬೀಳುವಂತಾಗಿತ್ತು. ಪಡಿತರ ಅಂಗಡಿಗೆ ಹೋಗಿ ಬರುವಷ್ಟರಲ್ಲಿ ನನ್ನ ಪತ್ನಿ ಪ್ರಾಣ ಬಿಟ್ಟಿದ್ದಾಳೆ ಎಂದು ಹೇಳಿದ್ದಾರೆ.
ಮಹಿಳೆಯ ಸಾವಿಗೆ ನಿಖರ ಕಾರಣವೇನು ಎಂಬುದನ್ನು ತನಿಖೆ ನಡೆಸಲಾಗುತ್ತದೆ. ಮಹಿಳೆ ಮಾನಸಿಕ ಒತ್ತಡದಲ್ಲಿದ್ದಳು ಎಂದು ಎಸ್‍ಡಿಒಪಿ ನಿತೇಶ್ ಪಟೇಲ್ ಸ್ಪಷ್ಟಪಡಿಸಿದ್ದಾರೆ.