– ಚೈನ್, ರಿಂಗ್, ವಾಚ್, ಲಿಂಗದ ಕರಡಿಕೆ ಸುಲಿಗೆ
ಬೆಂಗಳೂರು: ಕೊಲೆಗೂ ಮುನ್ನ ಕಿಡ್ನ್ಯಾಪ್ ಮಾಡಿಕೊಂಡು ಬರುವ ಸಮಯದಲ್ಲಿ ರೇಣುಕಾಸ್ವಾಮಿಯನ್ನು ಡಿ-ಗ್ಯಾಂಗ್ ದರೋಡೆ (D-Gang Robbery) ಮಾಡಿದ್ದರು ಎಂಬ ಸ್ಫೋಟಕ ಸುದ್ದಿಯೊಂದು ಹೊರಬಿದ್ದಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್‌ಶೀಟ್ (Chargesheet) ಸಲ್ಲಿಸಿದ ಬೆನ್ನಲ್ಲೇ ಒಂದೊಂದಾಗಿ ಮಾಹಿತಿಗಳು ಹೊರ ಬೀಳುತ್ತಲೇ ಇವೆ. ಶೆಡ್‌ನಲ್ಲಿ ನಡೆದ ವಿಚಾರ, ಫೋಟೋಗಳು ಹೀಗೆ ಕಳೆದ ಎರಡು ದಿನಗಳಿಂದ ಸ್ಫೋಟಕ ಮಾಹಿತಿಗಳು ಲಭಿಸಿದ್ದವು.ಇದನ್ನೂ ಓದಿ: ಟಾಟಾ ಏಸ್ ಪಲ್ಟಿ – ಗಣಪತಿ ತರಲು ಹೋಗುತ್ತಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಸಾವು
- Advertisement
- Advertisement
ಇದೀಗ ಹತ್ಯೆಗೆ ಸಂಬಂಧಿಸಿದಂತೆ ಮತ್ತೊಂದು ಮಾಹಿತಿ ದೊರೆತಿದ್ದು, ರೇಣುಕಾಸ್ವಾಮಿ ಅಪಹರಣ (Renukaswamy Kidnap) ಮಾಡಿಕೊಂಡು ಬರುತ್ತಿರುವಾಗ ಡಿ ಗ್ಯಾಂಗ್ ದರೋಡೆ ಮಾಡಿತ್ತು ಎಂದು ತಿಳಿದು ಬಂದಿದೆ. ಮಾರ್ಗ ಮಧ್ಯೆ ಬರುವಾಗ ರೇಣುಕಾಸ್ವಾಮಿಯ ಬಳಿಯಿದ್ದ ಚೈನ್, ರಿಂಗ್, ವಾಚ್ ಹಾಗೂ ಲಿಂಗದ ಕರಡಿಕೆಯನ್ನು ಸುಲಿಗೆ ಮಾಡಿದ್ದಾರೆ.
ಅಲ್ಲಿಂದ ತುಮಕೂರು ಬಾರ್‌ಗೆ ತೆರಳಿ ಎ4, ಎ6, ಎ7 ಆರೋಪಿಗಳು ಮದ್ಯವನ್ನು ಖರೀದಿಸಿದ್ದಾರೆ. ಅದು ರೇಣುಕಾಸ್ವಾಮಿ ಹಣದಿಂದಲೇ ಖರೀದಿಸಿದ್ದಾರೆ. ಆನಂತರ ನೆಲಮಂಗಲ, ನೈಸ್ ರಸ್ತೆ ಮೂಲಕ ಎಂಟ್ರಿಯಾಗಿದ್ದಾರೆ. ಇದನ್ನೂ ಓದಿ: ಬಲಮುರಿ ಹಾಗೂ ಎಡಮುರಿ ಗಣಪತಿಗೆ ಇರುವ ವ್ಯತ್ಯಾಸವೇನು?