ಚಾಮರಾಜನಗರ: ನಾನು ಸಚಿವನಾಗುವ ಮೊದಲು ಬಿಜೆಪಿಯವರು ನನ್ನನ್ನು ಬಾ ಎಂದು ಕರೆಯುತ್ತಿದ್ದರು. ಆಗ ನಾನು ಅವರಿಗೆ ಬೈದಿದ್ದೆ. ಆ ಬಳಿಕದಿಂದ ಬಿಜೆಪಿಯವರು ನನ್ನ ತಂಟೆಗೆ ಬರೋದನ್ನ ಬಿಟ್ಟು ಬಿಟ್ಟಿದ್ದಾರೆ ಎಂದು ಸಚಿವ ಸಿ ಪುಟ್ಟರಂಗಶೆಟ್ಟಿ ಹೇಳಿದ್ದಾರೆ.
ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಈಗಾಗಲೇ ಬಿಜೆಪಿ ಅವರು ಮಾಡಿದ್ದ ಆಪರೇಷನ್ ಕಮಲದಿಂದ ಸಾಕಷ್ಟು ಶಾಸಕರು ಪಾಠ ಕಲಿತಿದ್ದಾರೆ. ಹೀಗಿರುವಾಗ ಮತ್ತೆ ಬಿಜೆಪಿ ಜೊತೆ ಯಾವೊಬ್ಬ ಶಾಸಕನೂ ಹೋಗಲ್ಲ. ವಿರೋಧ ಪಕ್ಷ ಇರುವುದೇ ಏನಾದ್ರು ಕೆದಕೋಕೆ ಹಾಗಾಗಿ ಕೆದಕುತ್ತಿದ್ದಾರೆ. ನಮ್ಮ ಈ ಸಮ್ಮಿಶ್ರ ಸರ್ಕಾರ ಯಾವುದೇ ಅಡೆತಡೆಗಳಿಲ್ಲದೇ ಐದು ವರ್ಷ ಸುಭದ್ರ ಸ್ಥಿತಿಯಲ್ಲಿ ಆಡಳಿತ ನಡೆಸುತ್ತದೆ ಎಂದು ತಿಳಿಸಿದರು.
Advertisement
ಜಾರಕಿಹೊಳಿ ಬ್ರದರ್ಸ್ ಕೂಡ ದೊಡ್ಡ ಮುಖಂಡರು, ಎಲ್ಲರಿಗೂ ಇದ್ದ ಹಾಗೆ ಅವರಿಗೂ ಅಧಿಕಾರದ ದಾಹ ಇದೆ. ಅವರು ಡಿಸಿಎಂ ಕೊಡಿ ಎಂದು ಕೂತಿದ್ದಾರೆ. ಅವರು ಹಾಗಂತ ಹೇಳಿದ ಮಾತ್ರಕ್ಕೆ ಕೂಡಲೇ ಕೊಡುವುದಕ್ಕೆ ಆಗುವುದಿಲ್ಲ. ನಮ್ಮಲ್ಲಿ ಸಮನ್ವಯ ಸಮಿತಿ ಇದೆ ಹೈಕಮಾಂಡ್ ಇದೆ ಅವರೆಲ್ಲರೂ ಇದರ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ. ನಮ್ಮ ದೋಸ್ತಿ ಸರ್ಕಾರದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ. ದಸರಾ ವಿಚಾರದಲ್ಲಿ ಇದ್ದ ಗೊಂದಲಗಳನ್ನು ಈಗಾಗಲೇ ಬಗೆಹರಿದಿದೆ. ಜಿಟಿ ದೇವೇಗೌಡ ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಸಚಿವ ಪುಟ್ಟರಂಗಶೆಟ್ಟಿ ಮಾತನಾಡಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv