ಚಿಕ್ಕಬಳ್ಳಾಪುರ: ನಾನು ಧರ್ಮಸ್ಥಳದ ಶ್ರೀ ಮಂಜುನಾಥ ದೇವಸ್ಥಾನಕ್ಕೆ ಹೋದಾಗ ಮೀನು ತಿಂದಿದ್ದು ನಿಜ, ಕೋಳಿ ತಿಂದಿದ್ದೂ ನಿಜ. ಮಾಂಸ ತಿಂದು ಹೋದ್ರೆ ದೇವರು ಅಪವಿತ್ರ ಆಗ್ಬಿಡ್ತಾನಾ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾನು ಅವತ್ತು ಮಂಗಳೂರಿನಲ್ಲಿ ಮೀನು ತಿಂದಿರೋದು ನಿಜ, ಕೋಳಿ ತಿಂದಿರೋದು ನಿಜ. ಅಂದೇ ಧರ್ಮಸ್ಥಳಕ್ಕೆ ಕಾರ್ಯಕ್ರಮ ನಿಮಿತ್ತ ಹೋಗಿದ್ದೆ. ವೀರೇಂದ್ರ ಹೆಗ್ಗಡೆಯವರು ದರ್ಶನ ಮುಗಿಸಿಕೊಂಡು ಹೋಗಿ ಎಂದು ಹೇಳಿದ್ರು. ವೀರೇಂದ್ರ ಹೆಗ್ಗಡೆಯವರ ಒತ್ತಾಯಕ್ಕೆ ಮಣಿದು ದೇವಸ್ಥಾನಕ್ಕೆ ತೆರಳಿದ್ದೆ. ಆದ್ರೆ ನಾನು ಗರ್ಭಗುಡಿಯನ್ನು ಪ್ರವೇಶ ಮಾಡಿಲ್ಲ. ಹೊರಗಡೆಯೇ ನಿಂತು ನಮಸ್ಕಾರ ಮಾಡಿಕೊಂಡು ಬಂದೆ ಎಂದು ಹೇಳಿದರು.
Advertisement
ಒಂದು ವೇಳೆ ನಾನು ದೇವಸ್ಥಾನದ ಒಳಗಡೆ ಹೋಗಿ ನಮಸ್ಕಾರ ಮಾಡಿದ್ದೇ ಆದ್ರೆ ದೇವರಿಗೆ ಅಪವಿತ್ರ ಆಗಿಬಿಡುತ್ತಾ ಎಂದು ಪ್ರಶ್ನೆ ಮಾಡಿದ್ರು. ಚಿಕ್ಕಬಳ್ಳಾಪುರ ತಾಲೂಕಿನ ಮಂಚನಬಲೆ ಗ್ರಾಮದಲ್ಲಿ ನಿರ್ಮಾಣ ಮಾಡಲಾಗಿದ್ದ ನೂತನ ಬೀರೇಶ್ವರ ದೇಗುಲದ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ಆಗಮಿಸಿದ್ರು. ಈ ವೇಳೆ ಜನರನ್ನ ಉದ್ದೇಶಿಸಿ ಮಾತನಾಡುತ್ತಾ ಮೀನು ಹಾಗೂ ಕೋಳಿಯೂಟದ ವಿಚಾರವನ್ನು ಸಿಎಂ ಹೇಳಿದರು.
Advertisement
Advertisement
ಮೋದಿಗೆ ನನ್ನ ಕಂಡರೆ ಭಯ ಅಂದ್ರು ಸಿಎಂ ಸಿದ್ದರಾಮಯ್ಯ! https://t.co/CX8HUykCF3#BJP #Modi #Siddaramaiah #ModiInKarnataka #Congress pic.twitter.com/Hxxyjcqx7z
— PublicTV (@publictvnews) October 30, 2017
Advertisement
ಮಾಡಬಾರದ್ದನ್ನೆಲ್ಲ ಮಾಡಿ ಗಂಧದ ಕಡ್ಡಿ ಹಚ್ಚಿ, ತೆಂಗಿನ ಕಾಯಿಒಡೆದರೂ ದೇವರು ಮೆಚ್ಚುವುದಿಲ್ಲ.ಶುದ್ಧ ಮನಸ್ಸಿನಿಂದ ಪೂಜೆ ಮಾಡುವವರನ್ನು ಮಾತ್ರ ದೇವರು ಮೆಚ್ಚುತ್ತಾನೆ
— Siddaramaiah (@siddaramaiah) October 30, 2017
ಮೀನು ತಿಂದು ಧರ್ಮಸ್ಥಳಕ್ಕೆ ಹೋಗಿದ್ದು ನಿಜ. ಆದರೆ ಗರ್ಭಗುಡಿಗೆ ಹೋಗಿಲ್ಲ. ಒಳಗೆ ಹೋಗಿ ದರ್ಶನ ಮಾಡಿದ್ದರೂ ದೇವರಿಗೆ ಅಪವಿತ್ರ ಆಗುತ್ತಿತ್ತೇ ?
— Siddaramaiah (@siddaramaiah) October 30, 2017
ಎಲ್ಲರಲ್ಲಿಯೂ ದೇವರು ಇದ್ದಾನೆ ಅಲ್ಲವೇ? ಹಾಗಾದರೆ ಮಾಂಸ ತಿನ್ನುವವರು ಏನು ಮಾಡಬೇಕು. ಮಾಂಸ ತಿನ್ನುವುದನ್ನು ಬಿಡಬೇಕೇ? ವಿರೋಧಿಸುವವರಿಗೆ ದೇವರ ಬಗ್ಗೆ ತಿಳುವಳಿಕೆ ಇಲ್ಲ.
— Siddaramaiah (@siddaramaiah) October 30, 2017
ಮನುಷ್ಯ, ಮನುಷ್ಯರ ನಡುವೆ ಯಾರು ಬೆಂಕಿ ಇಡುತ್ತಾರೋ ಅವರು ಮನುಷ್ಯರಾಗುವುದಿಲ್ಲ. ಅಂಥವರಿಂದ ದೇವಾಲಯ ಪವಿತ್ರ ಆಗಲು ಸಾಧ್ಯವಿಲ್ಲ. ಅಂಥವರನ್ನು ದೇವರೇ ದೂರ ಇಡುತ್ತಾನೆ.
— Siddaramaiah (@siddaramaiah) October 30, 2017