Connect with us

ಬಾಹುಬಲಿಯನ್ನು ಕೊಂದಿದ್ದು ಯಾಕೆ: ಕೊನೆಗೂ ಉತ್ತರ ಹೇಳಿದ ಕಟ್ಟಪ್ಪ!

ಬಾಹುಬಲಿಯನ್ನು ಕೊಂದಿದ್ದು ಯಾಕೆ: ಕೊನೆಗೂ ಉತ್ತರ ಹೇಳಿದ ಕಟ್ಟಪ್ಪ!

ಹೈದರಾಬಾದ್: ಬಾಹುಬಲಿಯನ್ನು ಕಟ್ಟಪ್ಪ ಕೊಂದಿದ್ದು ಯಾಕೆ ಎನ್ನುವ ಪ್ರೇಕ್ಷಕರ ಮಿಲಿಯನ್ ಡಾಲರ್ ಪ್ರಶ್ನೆಗೆ ಕಟ್ಟಪ್ಪ ಪಾತ್ರ ನಿರ್ವಹಿಸಿದ ಸತ್ಯರಾಜ್ ಈಗ ಉತ್ತರಿಸಿದ್ದಾರೆ.

ಕೆಲ ದಿನಗಳ ಹಿಂದೆ ಸತ್ಯರಾಜ್ ಅವರಿಗೆ ಈ ಪ್ರಶ್ನೆಯನ್ನು ವಿಡಿಯೋ ಮೂಲಕ ಕೇಳಲಾಗಿತ್ತು. ಈ ಪ್ರಶ್ನೆಗೆ, “ನಾನು ಎಲ್ಲೇ ಹೋದರೂ ಅಭಿಮಾನಿಗಳು ಈ ಪ್ರಶ್ನೆಯನ್ನು ಕೇಳುತ್ತಾರೆ. ಈ ಪ್ರಶ್ನೆಗೆ ನಾನು ಬೇಸರ ಮಾಡಿಕೊಂಡಿಲ್ಲ. ಅಷ್ಟೇ ಅಲ್ಲದೇ ನನ್ನ ಕುಟುಂಬದವರಿಗೂ ಈ ಪ್ರಶ್ನೆಗೆ ನಾನು ಉತ್ತರಿಸಿಲ್ಲ. ಆದರೆ ಈಗ ನಾನು ಹೇಳುತ್ತೇನೆ. ನಿರ್ದೇಶಕ ರಾಜಮೌಳಿ ಆದೇಶ ಮೇರೆಗೆ ನಾನು ಬಾಹುಬಲಿಯನ್ನು ಕೊಂದಿದ್ದೇನೆ” ಎಂದು ಹಾಸ್ಯದ ಉತ್ತರ ನೀಡಿದ್ದಾರೆ.

ಇದೇ ಪ್ರಶ್ನೆಯನ್ನು ಬಾಹುಬಲಿ ಭಾಗ ಒಂದು ರಿಲೀಸ್ ಆದಾಗ ರಾಜಮೌಳಿ ಅವರಿಗೆ ಕೇಳಲಾಗಿತ್ತು. ಇದಕ್ಕೆ, “ಕಟ್ಟಪ್ಪ ನನ್ನ ಮಾತನ್ನು ಮಾತ್ರ ಕೇಳುತ್ತಾನೆ. ಬಾಹುಬಲಿಯನ್ನು ಕೊಲ್ಲಲು ನಾನು ಹೇಳಿದ್ದಕ್ಕೆ ಕಟ್ಟಪ್ಪ ಕೊಂದಿದ್ದಾನೆ” ಎಂದು ಫನ್ನಿ ಉತ್ತರ ನೀಡಿದ್ದರು.

ಇದನ್ನೂ ಓದಿ: ಮೋದಿ ಜೊತೆ ಬಾಹುಬಲಿ ಚಿತ್ರವನ್ನು ನೋಡಲಿದ್ದಾರಾ ಇಂಗ್ಲೆಂಡಿನ ರಾಣಿ?

ಮಹಾಶಿವರಾತ್ರಿ ಪ್ರಯುಕ್ತ ಬಾಹುಬಲಿ ಕನ್ ಕ್ಲೂಷನ್ ಟೀಸರ್ ಬಿಡುಗಡೆಯಾಗಿತ್ತು. `ಬಲಿ ಬಲಿ ಬಲಿ ರಾ ಬಲಿ ಸಾಹೋರೆ ಬಾಹುಬಲಿ’ ಅನ್ನೋ ಹಾಡಿನ ತುಣುಕಿನ ಪ್ರಭಾಸ್ ಆನೆಯ ಮೇಲೆ ನಿಂತುಕೊಂಡಿರುವ ದೃಶ್ಯವಿರುವ ಟೀಸರ್ ವಿಡಿಯೋವನ್ನು ರಾಜಮೌಳಿ ಟ್ವೀಟ್ ಮಾಡಿದ್ದರು.

ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಬರೆದ ಕಥೆಯಾಧರಿತ ಬಾಹುಬಲಿ ಭಾಗ 2 ಚಿತ್ರದಲ್ಲಿ ಪ್ರಭಾಸ್, ರಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ಸತ್ಯರಾಜ್, ತಮನ್ನಾ, ರಮ್ಯಕೃಷ್ಣ ಅಭಿನಯಿಸಿದ್ದಾರೆ. ತೆಲುಗು, ತಮಿಳು, ಮಲೆಯಾಳಂ, ಹಿಂದಿ ಭಾಷೆಯಲ್ಲಿರುವ ಬಾಹುಬಲಿ 2 ಏಪ್ರಿಲ್ 28ರಂದು ಬಿಡುಗಡೆಯಾಗಲಿದೆ.

ಬಾಹುಬಲಿ ದಿ ಬಿಗ್‍ನಿಂಗ್ ಚಿತ್ರ 2015ರ ಜುಲೈ 10ರಂದು ಬಿಡುಗಡೆಯಾಗಿತ್ತು. ಅಂದಾಜು 120 ಕೋಟಿ ಬಜೆಟ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ 650 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಾಹುಬಲಿ- 1 ಭಾರೀ ಸದ್ದು ಮಾಡಿ ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡಿತ್ತು.

https://www.youtube.com/watch?v=k-eOSxy98Mk

Advertisement
Advertisement