ನವದೆಹಲಿ: ಗಡಿಯಲ್ಲಿ ಗುಂಡಿನ ದಾಳಿ ನಡೆಸುತ್ತಿರುವ ಪಾಕಿಸ್ತಾನಕ್ಕೆ ಭಾರತ ತಿರುಗೇಟು ನೀಡಿದ್ದು, ಗುಂಡಿನ ಮಳೆಯನ್ನು ಸುರಿಸಿದೆ. ಪರಿಣಾಮ 12 ಮಂದಿ ಪಾಕ್ ಸೈನಿಕರು ಮೃತಪಟ್ಟಿದ್ದಾರೆ.
ಜಮ್ಮು-ಕಾಶ್ಮೀರದ ಸುಂದರ್‍ಬನಿ ವಲಯದಲ್ಲಿ ಗುರುವಾರ ಗುಂಡಿನ ದಾಳಿ ನಡೆಸಿದೆ. ಇದಕ್ಕೆ ಪ್ರತ್ಯುತ್ತರ ನೀಡಿದ ಭಾರತೀಯ ಯೋಧರು ಪಾಕ್‍ನ ಇಬ್ಬರು ಸೇನಾ ಅಧಿಕಾರಿಗಳು ಸೇರಿದಂತೆ 12 ಸೈನಿಕರಿಗೆ ಗುಂಡಿಕ್ಕಿ ಹತ್ಯೆ ಮಾಡಿದೆ. ಜೊತೆಗೆ ಈ ದಾಳಿಯಲ್ಲಿ 22 ಜನ ಪಾಕ್ ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
Advertisement
ಪಾಕ್ ಸೇನೆ ಸೈನಿಕರ ಮೃತದೇಹವನ್ನು ಮಿ-17 ಹೆಲಿಕಾಪ್ಟರ್ ಮೂಲಕ ಸುಂದರ್‍ಬನಿ ವಲಯದಿಂದ ರಾವಲ್ಪಿಂಡಿಗೆ ಸಾಗಿಸಿದೆ.
Advertisement
Advertisement
ಆಗಿದ್ದೇನು?:
ಜಮ್ಮು-ಕಾಶ್ಮೀರದ ಜಿಲ್ಲೆಗಳ ಗಡಿ ಭಾಗದಲ್ಲಿ ಪಾಕ್ ಸೇನೆ ಕದನ ವಿರಾಮ ಉಲ್ಲಂಘಿಸಿತ್ತು. ಪಾಕ್ ಸೇನೆ ಜಮ್ಮ-ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ ಏಕಾಏಕಿ ಗುಂಡಿನ ದಾಳಿ ಆರಂಭಿಸಿತ್ತು. ಮಧ್ಯಾಹ್ನ 2:45ರ ವರೆಗೂ ಗುಂಡಿನ ದಾಳಿ ನಡೆಸಿತ್ತು. ಇದನ್ನು ಭಾರತೀಯ ಸೇನೆಯು ಸಮರ್ಥವಾಗಿ ಎದುರಿಸಿತ್ತು. ಆದರೆ ಈ ದಾಳಿಯಲ್ಲಿ ಓರ್ವ ಭಾರತೀಯ ಯೋಧ ಹುತಾತ್ಮರಾಗಿ, ಮೂವರು ನಾಗರಿಕರು ಗಾಯಗೊಂಡಿದ್ದರು.
Advertisement
ಈ ದಾಳಿಗೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿತ್ತು. ಪರಿಣಾಮ ಪಾಕ್‍ನ 12 ಜನ ಸೈನಿಕರು ಭಾರತೀಯ ಯೋಧರ ಗುಂಡಿಗೆ ಬಲಿಯಾಗಿದ್ದಾರೆ.