ಪಾಸ್ತಾ ಎಂದರೆ ಮಕ್ಕಳಿಗೆ ಪಂಚಪ್ರಾಣ. ಮನೆಯಲ್ಲೂ ಇದನ್ನು ಬೇರೆ ಬೇರೆ ರೀತಿಯಲ್ಲಿ ಮಾಡಬಹುದು. ವಿವಿಧ ತರಕಾರಿಗಳನ್ನು ಬಳಸಿ ಪಾಸ್ತಾವನ್ನು ಮಾಡಿದರೆ ಆರೋಗ್ಯಕರವೂ ಎನಿಸುತ್ತದೆ. ನಾವಿಂದು ಸ್ಪೈಸಿ, ಟ್ಯಾಂಗಿ ಟೇಸ್ಟ್‌ನ ಬೀಟ್ರೂಟ್ ಪಾಸ್ತಾ (Beetroot Pasta) ಮಾಡೋದು ಹೇಗೆಂದು ಹೇಳಿಕೊಡುತ್ತೇವೆ. ಈ ಸಿಂಪಲ್ ಪಾಸ್ತಾ ರೆಸಿಪಿಯನ್ನೊಮ್ಮೆ ನೀವೂ ಮಾಡಿ.
Advertisement
ಬೇಕಾಗುವ ಪದಾರ್ಥಗಳು:
ಪಾಸ್ತಾ – 2 ಕಪ್
ಟೊಮೆಟೊ – 4
ಬೆಳ್ಳುಳ್ಳಿ – 4-5
ಈರುಳ್ಳಿ – 1
ಕ್ಯಾಪ್ಸಿಕಮ್ – 1
ಬೀನ್ಸ್ – 2-3
ಕೆಚಪ್ – 3 ಟೀಸ್ಪೂನ್
ಬೀಟ್ರೂಟ್ – 1
ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
ಒರಿಗಾನೋ – 1 ಟೀಸ್ಪೂನ್
ಎಣ್ಣೆ – 2 ಟೀಸ್ಪೂನ್
ತುರಿದ ಚೀಸ್ – ಕಾಲು ಕಪ್
ಉಪ್ಪು – ರುಚಿಗೆ ತಕ್ಕಷ್ಟು
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಈರುಳ್ಳಿ, ಕ್ಯಾಪ್ಸಿಕಂ, ಬೀನ್ಸ್ ಹಾಗೂ ಬೆಳ್ಳುಳ್ಳಿಯನ್ನು ಕತ್ತರಿಸಿ ಬದಿಗಿಡಿ.
* ಟೊಮೆಟೊ ಹಾಗೂ ಬೀಟ್ರೂಟ್ ಅನ್ನು ಚೆನ್ನಾಗಿ ತೊಳೆದು, ಒಂದು ಪಾತ್ರೆಗೆ ಹಾಕಿ, ಮುಳುಗುವಷ್ಟು ನೀರು ಸೇರಿಸಿ, 5 ನಿಮಿಷ ಕುದಿಸಿಕೊಳ್ಳಿ.
* ಟೊಮೆಟೊ ಹಾಗೂ ಬೀಟ್ರೂಟ್ ತಣ್ಣಗಾದ ಬಳಿಕ ಸಿಪ್ಪೆ ಸುಲಿದು, ಮಿಕ್ಸರ್ ಜಾರ್‌ಗೆ ಹಾಕಿಕೊಂಡು ಪ್ಯೂರಿ ತಯಾರಿಸಿಡಿ.
* ಈಗ ಒಂದು ಪಾತ್ರೆಯಲ್ಲಿ 4 ಕಪ್ ನೀರು ಹಾಕಿ, ಪಾಸ್ತಾ ಸೇರಿಸಿ, 8-10 ನಿಮಿಷ ಕುದಿಸಿಕೊಳ್ಳಿ. ಬಳಿಕ ಬಿಸಿ ನೀರನ್ನು ಹರಿಸಿ, ಪಾಸ್ತಾ ಮೇಲೆ ತಣ್ಣಿರು ಸುರಿಯಿರಿ.
* ಈಗ ಒಂದು ಪ್ಯಾನ್ ಬಿಸಿ ಮಾಡಿ, ಅದರಲ್ಲಿ ಎಣ್ಣೆ, ಬೆಳ್ಳುಳ್ಳಿ, ಈರುಳ್ಳಿ ಹಾಕಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಹುರಿಯಿರಿ.
* ಕ್ಯಾಪ್ಸಿಕಮ್ ಮತ್ತು ಬೀನ್ಸ್ ಹಾಕಿ 5 ನಿಮಿಷ ಬೇಯಿಸಿ.
* ಬಳಿಕ ಟೊಮೆಟೊ ಬೀಟ್ರೂಟ್ ಪ್ಯೂರಿ ಸೇರಿಸಿ, 5 ನಿಮಿಷ ಬೇಯಿಸಿಕೊಳ್ಳಿ.
* ನಂತರ ಉಪ್ಪು, ಕೆಂಪು ಮೆಣಸಿನಪುಡಿ ಮತ್ತು ಒರಿಗಾನೋ, ಕೆಚಪ್ ಸೇರಿಸಿ, ಎಲ್ಲವನ್ನೂ ಮಿಶ್ರಣ ಮಾಡಿ.
* ಈಗ ಪಾಸ್ತಾವನ್ನು ಸಾಸ್‌ಗೆ ಹಾಕಿ, ಸರಿಯಾಗಿ ಮಿಶ್ರಣ ಮಾಡಿ.
* ಕೊನೆಯಲ್ಲಿ ಚೀಸ್ ಸೇರಿಸಿ, ಬಡಿಸಿ.
* ಬೀಟ್ರೂಟ್ ಪಾಸ್ತಾ ತಯಾರಾಗಿದ್ದು, ಇದನ್ನು ಸವಿಯಲು ಮಕ್ಕಳಿಗೆ ನೀಡಿ.