ಶೋಯೆಬ್‌ ಮಲಿಕ್‌ರಿಂದ ವಿಚ್ಛೇದನ ಪಡೆದಿದ್ದಾರೆ – ಡಿವೋರ್ಸ್ ವದಂತಿಗೆ ತೆರೆಎಳೆದ ಸಾನಿಯಾ ಕುಟುಂಬ

Public TV
2 Min Read
Sania Mirza

-ಶೋಯೆಬ್‌ ಮಲಿಕ್‌ ವಿರುದ್ಧವೇ ತಿರುಗಿಬಿದ್ದ ಪಾಕ್‌ ಫ್ಯಾನ್ಸ್‌!

ನವದೆಹಲಿ: ಭಾರತೀಯ ಮಾಜಿ ಟೆನ್ನಿಸ್‌ ತಾರೆ ಸಾನಿಯಾ ಮಿರ್ಜಾ (Sania Mirza) ಹಾಗೂ ಪಾಕ್‌ ಕ್ರಿಕೆಟಿಗ ಶೋಯೆಬ್‌ ಮಲಿಕ್‌ (Shoaib Malik) ಅವರು ವಿಚ್ಛೇದನ ಪಡೆದುಕೊಂಡಿದ್ದಾರೆ ಎಂದು ಸಾನಿಯಾ ಕುಟುಂಬ ಹೇಳಿದ್ದು, ಕೆಲ ವರ್ಷಗಳಿಂದ ಹರಿದಾಡುತ್ತಿದ್ದ ವದಂತಿಗಳಿಗೆ ತೆರೆ ಎಳೆದಿದ್ದಾರೆ.

 

View this post on Instagram

 

A post shared by Anam Mirza (@anammirzaaa)

ಶೋಯೆಬ್‌ ಮಲಿಕ್‌ ಅವರು ಪಾಕ್‌ ನಟಿ ಸನಾ ಜಾವೇದ್‌ (Sana Javed) ಅವರೊಂದಿಗೆ ವಿವಾಹವಾದ ಬಳಿಕ ಸುದ್ದಿ ಹೊರಬೀಳುತ್ತಿದ್ದಂತೆ ಸಾನಿಯಾ ಕುಟುಂಬ ಸ್ಫಷ್ಟನೆ ನೀಡಿದೆ. ಇದನ್ನೂ ಓದಿ: ಡಿವೋರ್ಸ್‌ ವದಂತಿ ಬೆನ್ನಲ್ಲೇ ಸಾನಿಯಾಗೆ ಕೈಕೊಟ್ಟ ಶೋಯೆಬ್‌ ಮಲಿಕ್‌ – ನಟಿ ಸನಾ ಜಾವೇದ್‌ ಕೈಹಿಡಿದ ಪಾಕ್‌ ಕ್ರಿಕೆಟಿಗ!

Shoaib Malik

ಸಾನಿಯಾ ಯಾವಾಗಲೋ ತನ್ನ ವೈಯಕ್ತಿಕ ಜೀವನವನ್ನು ಸಾರ್ವಜನಿಕರಿಂದ ದೂರವಿಟ್ಟಿದ್ದಾಳೆ. ಆದರೆ ಶೋಯೆಬ್‌ ರಿಂದ ವಿಚ್ಛೇದನ ಪಡೆದು ಕೆಲವು ತಿಂಗಳಾಗಿವೆ. ಈಗ ಅದರ ಬಗ್ಗೆ ಮಾತನಾಡುವ ಸಂದರ್ಭ ಬಂದಿದೆ ಎಂದು ಹೇಳಿದೆ. ಅಲ್ಲದೇ ಸಾನಿಯಾ ಸಹ ಶೋಯೆಬ್‌ ಮುಂದಿನ ಜೀವನಕ್ಕೆ ಶುಭಹಾರೈಸಿದ್ದಾಳೆ ಎಂಬುದಾಗಿ ಕುಟುಂಬ ತಿಳಿಸಿದೆ. ಇದನ್ನೂ ಓದಿ: ಶ್ರೀರಾಮನ ಪ್ರಾಣಪ್ರತಿಷ್ಠೆಗೆ ಮೋದಿ ಕಠಿಣ ವ್ರತ – ಪ್ರತಿದಿನ 1 ಗಂಟೆ ವಿಶೇಷ ಮಂತ್ರ ಪಠಣ

ಪಾಕ್‌ ಅಭಿಮಾನಿಗಳಿಂದಲೂ ಸಾನಿಯಾಗೆ ಬೆಂಬಲ:
ಪಾಕಿಸ್ತಾನ ತಂಡದ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್, ಪಾಕ್‌ನ ನಟಿ ಸನಾ ಜಾವೇರದ್ ಅವರನ್ನು ಮದುವೆಯಾದ ಸುದ್ದಿ ಹೊರ ಬೀಳುತ್ತಿದ್ದಂತೆ, ಪಾಕಿಸ್ತಾನದಲ್ಲಿರುವ ಸಾನಿಯಾ ಮಿರ್ಜಾ ಅಭಿಮಾನಿಗಳು ಸಾನಿಯಾ ಬೆಂಬಲಿಸಿ ಎಕ್ಸ್‌ ಖಾತೆಯಲ್ಲಿ ಸಂದೇಶ ಹಂಚಿಕೊಂಡಿದ್ದಾರೆ.‌ ಪ್ರೇಮ ವಿವಾಹದಲ್ಲಿ ದೀರ್ಘಕಾಲದ ನಂಬಿಕೆ ಇರುವುದಿಲ್ಲ. ಅಲ್ಲಾಹು ನಿಮಗೆ ಒಳ್ಳೆಯದು ಮಾಡಲಿ, ಇವರಿಗಿಂತಲೂ ಹೆಚ್ಚಿನದ್ದನ್ನು ಕೊಡಲಿ ಎಂದಷ್ಟೇ ಈಗ ನಾವು ಕೇಳಿಕೊಳ್ಳಬಹುದು ಎಂದರೆ, ಇನ್ನೂ ಕೆಲವರು ಶೋಯೆಬ್‌-ಸನಾ ವಿವಾಹಕ್ಕೆ ಅಭಿನಂದನೆಗಳು ಆದ್ರೆ ಸಾನಿಯಾ ಅವರ ಹೃದಯವನ್ನು ನುಚ್ಚುನೂರು ಮಾಡಿದ್ದು ನೋವಿನ ಸಂಗತಿ ಎಂದು ಬರೆದುಕೊಂಡಿದ್ದಾರೆ.

Shoaib Malik 2

ಪಾಕ್‌ ನಟಿ ವರಿಸಿದ ಶೋಯೆಬ್‌ ಮಲಿಕ್‌:
ಪಾಕಿಸ್ತಾನ ತಂಡದ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್, ಪಾಕ್‌ನ ನಟಿ ಸನಾ ಜಾವೇರದ್ ಅವರನ್ನು ವಿವಾಹವಾಗಿದ್ದು, ನಟಿ ಸನಾ ಜಾವೇದ್ ಅವರೊಂದಿಗೆ ವಿವಾಹವಾಗಿರುವ ಫೋಟೋಗಳನ್ನು ಸ್ವತಃ ಮಲಿಕ್ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದಕ್ಕೂ ಮುನ್ನ ಶೋಯೆಬ್‌, ಸಾನಿಯಾರಿಂದ ವಿಚ್ಛೇದನ ಪಡೆದಿದ್ದಾರೆ ಎಂಬ ವದಂತಿ ಹರಿದಾಡುತ್ತಿತ್ತು. ಸಾನಿಯಾ ಹಾಗೂ ಶೋಯೆಬ್ 2010ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಸಾನಿಯಾ ಭಾರತೀಯಳಾಗಿದ್ದು, ಶೋಯೇಬ್ ಪಾಕಿಸ್ತಾನಿ ಎಂಬ ವಿಚಾರಕ್ಕೆ ವಿವಾದವೂ ಉಂಟಾಗಿತ್ತು. ಇದನ್ನೂ ಓದಿ: ಸತತ ಹೀನಾಯ ಸೋಲಿನಿಂದ ಬೇಸರ – PCB ಅಧ್ಯಕ್ಷ ಸ್ಥಾನಕ್ಕೆ ಝಾಕಾ ಅಶ್ರಫ್ ಗುಡ್‌ಬೈ

ಶೋಯೆಬ್‌ಗೆ 3ನೇ, ಸನಾಗೆ 2ನೇ ಮದುವೆ:
ಇದೀಗ ಶೋಯೆಬ್ ಮದುವೆಯಾದ ನಟಿ ಸನಾ ಜಾವೇದ್ ಸಹ ವಿಚ್ಛೇದನ ಪಡೆದವರಾಗಿದ್ದಾರೆ ಎನ್ನಲಾಗಿದೆ. ಪಾಕಿಸ್ತಾನದ ಖ್ಯಾತ ನಟಿಯರಲ್ಲಿ ಒಬ್ಬರಾದ ಸನಾ ಜಾವೇದ್ ಅವರು 2020 ರಲ್ಲಿ ಖ್ಯಾತ ಗೀತರಚನಾಕಾರ ಉಮೈರ್ ಜಸ್ವಾಲ್ ಎಂಬವರನ್ನ ವಿವಾಹವಾಗಿದ್ದರು. ಆದರೆ 2023ರಲ್ಲಿ ದಂಪತಿ ವಿಚ್ಛೇದನ ಪಡೆದಿದ್ದಾರೆ. ಬಳಿಕ ಶೋಯೆಬ್‌ರನ್ನ ಮದುವೆಯಾಗಿದ್ದಾರೆ. ಶೋಯೆಬ್ ಸಾನಿಯಾ ಮಿರ್ಜಾ ಬಿಟ್ಟು ಮೂರನೇ ಮದುವೆಯಾಗಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

Share This Article