ಮಂಡ್ಯ: ಮಳೆ (Rain) ಬಂದ್ರೆ ಸಾಕು ಸಕ್ಕರೆ ನಾಡಿನ ಇಡೀ ಕಾಲೋನಿಯೇ ಮುಳುಗಡೆ ಆಗುತ್ತೆ. ನಮ್ಮ ಸಮಸ್ಯೆಗೊಂದು ಶಾಶ್ವತ ಪರಿಹಾರ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಜನ ಜಿಲ್ಲಾಧಿಕಾರಿ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿದ್ರು.
Advertisement
ಈ ಮಳೆಯ ಅವಾಂತರ ಒಂದೆರಡಲ್ಲ. ವರುಣನ ಕಾಟಕ್ಕೆ ಜನ ಹೈರಾಣಾಗಿ ಹೋಗಿದ್ದಾರೆ. ಮಂಡ್ಯದಲ್ಲಿ ನಿನ್ನೆ ಸುರಿದ ಮಳೆಗೆ ಇಡೀ ಬೀಡಿ ಕಾಲೋನಿ (Beedi Colony) ಯೇ ಜಲಾವೃತವಾಗಿತ್ತು. ಆದರೆ ಇಲ್ಲಿನ ನಿವಾಸಿಗಳದ್ದು ನಿನ್ನೆ ಒಂದು ದಿನದ ಗೋಳಲ್ಲ, ಪ್ರತಿ ಬಾರಿ ಮಳೆ ಬಂದಾಗಲೂ ಇಲ್ಲಿನ ನಿವಾಸಿಗಳದ್ದು ಇದೇ ಪರಿಸ್ಥಿತಿ. ಹೀಗಾಗಿ ಶಾಶ್ವತ ಪರಿಹಾರಕ್ಕಾಗಿ ಆಗ್ರಹಿಸಿ ಇಂದು ಜನ ಬೀದಿಗಿಳಿದಿದ್ದರು. ಇದನ್ನೂ ಓದಿ: ಹಕ್ಕಿಪಿಕ್ಕಿ ಕ್ಯಾಂಪ್ ತೆರವು ವೇಳೆ ಹೈಡ್ರಾಮಾ – ಸೀಮೆಎಣ್ಣೆ ಸುರಿದುಕೊಂಡು ಆಕ್ರೋಶ
Advertisement
Advertisement
ಮಂಡ್ಯ ನಗರದ ಕೆರೆಯಂಗಳದಲ್ಲಿರುವ ಬೀಡಿ ಕಾಲೋನಿ ಭಾರಿ ಮಳೆಗೆ ಮುಳುಗಿತ್ತು. ಇವತ್ತು ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಡಿಸಿ ಕಚೇರಿ (DC Office) ಗೇಟ್ ಮುರಿದು ಜನ ಒಳನುಗ್ಗಿದ್ದರು. ಪೊಲೀಸರು ತಡೆದ್ರೂ ಬಗ್ಗದೇ ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಿ ಪ್ರತಿಭಟನೆ ನಡೆಸಿದ್ರು. ಕೆಲಕಾಲ ತಳ್ಳಾಟ ನೂಕಾಟ ಉಂಟಾಯ್ತು. ಸ್ಥಳಕ್ಕೆ ಡಿಸಿ ಬರುವಂತೆ ಪಟ್ಟು ಹಿಡಿದಿದ್ರು.