ಚಿಕ್ಕಮಗಳೂರು: ಜೋಡೆತ್ತಿನ ಗಾಡಿ ಸ್ಪರ್ಧೆಯಲ್ಲಿ ಇಡೀ ರಾಜ್ಯಕ್ಕೆ ಖ್ಯಾತಿಯಾಗಿ ಜೋಡೆತ್ತಿನ ಗಾಡಿ ಸ್ಪರ್ಧೆಯ ವಿಲನ್ ಎಂದೇ ಖ್ಯಾತಿಯಾಗಿದ್ದ ಎತ್ತು ಅನಾರೋಗ್ಯ ಕಾರಣದಿಂದ ಸಾವನ್ನಪ್ಪಿದೆ.
ಮಲ್ಲೇನಹಳ್ಳಿ ಸಮೀಪಿದ ನಿಂಗೇನಹಳ್ಳಿ ಗ್ರಾಮದ ನಿಂಗೇಗೌಡರ ಎತ್ತು ‘ವಿಲನ್’ ಅನಾರೋಗ್ಯದಿಂದ ಸಾವನ್ನಪ್ಪಿದೆ. ರಾಸುವಿನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ, ಅವರು ಸೂಕ್ತ ಸಮಯದಲ್ಲಿ ಸೂಕ್ತ ಚಿಕಿತ್ಸೆ ನೀಡಲಿಲ್ಲ ಎಂದು ರಾಸುವಿನ ಮಾಲೀಕ ಆರೋಪಿಸಿದ್ದಾರೆ. ಇದನ್ನೂ ಓದಿ: ಹಿಂದೂ ಧರ್ಮದ ವಿರುದ್ಧ ಒಂದು ಧರ್ಮ ಪ್ರಾರಂಭವಾಗಿದ್ದು, ಅದಕ್ಕೆ ಸಿದ್ದು, ಡಿಕೆಶಿ, ಹೆಚ್‍ಡಿಕೆ ನಾಯಕರು: ಪ್ರಶಾಂತ್ ಸಂಬರಗಿ
Advertisement
Advertisement
ಚಿಕ್ಕಮಗಳೂರು, ಮೈಸೂರು, ತುಮಕೂರು, ಹಾಸನ, ಅಜ್ಜಂಪುರ, ಕಡೂರು ಹಾಗೂ ತರೀಕೆರೆ ಸೇರಿದಂತೆ ರಾಜ್ಯದ್ಯಾಂತ ಜೋಡೆತ್ತಿನ ಗಾಡಿ ಸ್ಪರ್ಧೆಗಳಲ್ಲಿ ಸಾಕಷ್ಟು ಘಟಾನುಘಟಿ ಹೋರಿಗಳಿಗೆ ಸೋಲಿನ ರುಚಿ ತೋರಿಸಿದ್ದ ವಿಲನ್ ಇಂದು ಸಾವನ್ನಪ್ಪಿದೆ. ಎತ್ತಿನ ಮಾಲೀಕ ನಿಂಗೇಗೌಡ ಕಳೆದ ಎರಡ್ಮೂರು ವರ್ಷಗಳಿಂದ ಎತ್ತಿನ ಹಾರೈಕೆಯಲ್ಲಿ ನಿರತರಾಗಿದ್ದರು. ಈ ಎತ್ತನ್ನು ಸ್ಪರ್ಧೆಗೆ ಬಿಟ್ಟು ಬೇರೆ ಕೆಲಸಕ್ಕೆ ಬಳಸುತ್ತಿರಲಿಲ್ಲ.
Advertisement
Advertisement
ಸುಮಾರು ನಾಲ್ಕುವರೆ ಲಕ್ಷ ಬೆಲೆ ಬಾಳುವ ಈ ಎತ್ತಿಗೆ ಕಳೆದ 2 ವಾರಗಳ ಹಿಂದಷ್ಟೆ ರಾಜ್ಯದ ಬೇರೆ-ಬೇರೆ ಹೋರಿ ಮಾಲೀಕರು 4 ಲಕ್ಷಗಳಷ್ಟು ಬೆಲೆಗೆ ಕೇಳಿದ್ದರು. ಸದೃಢ ಮೈಕಟ್ಟು ಹಾಗೂ ಸಾಕಷ್ಟು ಎತ್ತರವಿದ್ದ ವಿಲನ್ ಅಖಾಡದಲ್ಲಿ ತನ್ನದೇ ಆದ ಹೆಸರು ಗಳಿಸಿತ್ತು. ಕಳೆದೊಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಈ ಹೋರಿಯನ್ನ ಉಳಿಸಿಕೊಳ್ಳಲಾಗದೆ ಮಾಲೀಕ ನಿಂಗೇಗೌಡನ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.
ಮಲ್ಲೇನಹಳ್ಳಿಯ ಪಶು ವೈದ್ಯಕೀಯ ಚಿಕಿತ್ಸಾಲಯದಲ್ಲಿ ಮಹಿಳಾ ವೈದ್ಯರು ನೇಮಕಗೊಂಡಿದ್ದಾರೆ. ಈ ವೈದ್ಯರು ಹಾಗೂ ಕಾಂಪೌಂಡರ್ ಎಲ್ಲ ಸಮಯದಲ್ಲೂ ಆಸ್ಪತ್ರೆಯಲ್ಲಿ ಲಭ್ಯವಿರುವುದಿಲ್ಲ. ಗ್ರಾಮದ ದನಕರುಗಳ ಪೋಷಣೆ ಹಾಗೂ ಚಿಕಿತ್ಸೆಯಲ್ಲಿ ನಿಗಾವಹಿಸದ ವೈದ್ಯಾಧಿಕಾರಿಗಳನ್ನು ವಜಾಗೊಳಿಸುವಂತೆ ಸ್ಥಳೀಯರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಇದನ್ನೂ ಓದಿ:ಸೌದಿ ಮಿನಿಸ್ಟರ್ ಜೊತೆ ಔತಣ ಸವಿದ ಶಾರೂಖ್, ಸಲ್ಮಾನ್, ಅಕ್ಷಯ್ – ಅಸಲಿ ಕಾರಣವೇನು
ಮೇಲಾಧಿಕಾರಿಗಳು ಇತ್ತ ಗಮನ ಹರಿಸಿ ಉತ್ತಮವಾಗಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳನ್ನ ನೇಮಕ ಮಾಡಿಕೊಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ವೈದ್ಯಾಧಿಕಾರಿಗಳ ನಿರ್ಲಕ್ಷ್ಯದಿಂದ ಲಕ್ಷಾಂತರ ಮೌಲ್ಯದ ರಾಸುವನ್ನು ಕಳೆದುಕೊಂಡ ರೈತ, ಸರ್ಕಾರದ ನೆರವನ್ನು ಎದುರು ನೋಡುತ್ತಿದ್ದಾರೆ.