ತುಮಕೂರು: ಸಪೋಟ ಹಣ್ಣಿನ (Sapota Fruit) ಮರಕ್ಕೆ ಕಟ್ಟಿದ ತಂತಿಗೆ ಸಿಕ್ಕಿಕೊಂಡು ಗಾಯಗೊಂಡಿದ್ದ ಕರಡಿಯನ್ನು ಅರಣ್ಯಾಧಿಕಾರಿಗಳು ಅರವಳಿಕೆ ನೀಡಿ ರಕ್ಷಣೆ ಮಾಡಿದ್ದಾರೆ. ಈ ಘಟನೆ ತಾಲೂಕಿನ ಹುಲಿಯೂರುದುರ್ಗ ಹೋಬಳಿ ಕಾಡಬೋರನಹಳ್ಳಿ ಗ್ರಾಮದಲ್ಲಿ ನಡೆದಿದೆ.
Advertisement
ಮೂರು ವರ್ಷದ ಗಂಡು ಕರಡಿಯನ್ನು ಅರಣ್ಯ ಇಲಾಖೆ (Forest Department) ಅಧಿಕಾರಿಗಳು ಸಂರಕ್ಷಿಸಿದ್ದಾರೆ. ತಾಲೂಕಿನ ಕಾಡಬೋರನಹಳ್ಳಿ ಗ್ರಾಮದ ರಾಜಣ್ಣ ಅವರ ಜಮೀನಿನಲ್ಲಿ ಸಪೋಟ ಸೇರಿದಂತೆ ವಿವಿಧ ಹಣ್ಣಿನ ಮರಗಳು ಬೆಳೆದಿವೆ. ಹೀಗಾಗಿ ಮರಕ್ಕೆ ತಂತಿಯನ್ನು ಕಟ್ಟಲಾಗಿತ್ತು. ಈ ವೇಳೆ ಆಹಾರಕ್ಕಾಗಿ ಅರಸಿ ಬಂದ ಕರಡಿ (Bear) ಮರ ಹತ್ತುವ ವೇಳೆ ಮರಕ್ಕೆ ಕಟ್ಟಿದ ತಂತಿಗೆ ಸಿಕ್ಕಿ ಹಾಕಿಕೊಂಡು ಕೆಳಕ್ಕೆ ಇಳಿಯಲಾಗದೇ ಜೋತು ಬಿದ್ದಿತು. ಇದನ್ನೂ ಓದಿ: ಜೇಬು ಸುಡ್ತಿದೆ ಬೆಲೆ ಏರಿಕೆ – ದುಬಾರಿಯಾಯ್ತು ಮೊಟ್ಟೆ
Advertisement
Advertisement
ಈ ಸಂಬಂಧ ಗ್ರಾಮಸ್ಥರು ದೂರವಾಣಿ ಮೂಲಕ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮಾ, ವಲಯ ಅರಣ್ಯಾಧಿಕಾರಿ ಮಹಮದ್ ಮನ್ಸೂರ್, ಬನ್ನೇರುಘಟ್ಟ ವನ್ಯ ಜೀವಿ ವಿಭಾಗದ ಪಶು ವೈದ್ಯಾಧಿಕಾರಿ ಉಮಾಶಂಕರ್ ಕರಡಿಗೆ ಅರವಳಿಕೆ ನೀಡಿ ಅದನ್ನು ರಕ್ಷಿಸಿ, ಆರೋಗ್ಯ ತಪಾಸಣೆ ಮಾಡಿ ಸೂಕ್ತ ಜಾಗಕ್ಕೆ ಸ್ಥಳಾಂತರಿಸಿದ್ದಾರೆ.
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k