Sunday, 20th January 2019

ಚಿನ್ನಸ್ವಾಮಿ ಸ್ಟೇಡಿಯಂಗೆ ಐಪಿಎಲ್ ಮ್ಯಾಚ್ ನೋಡಲು ಹೋಗುವ ಮುನ್ನ ಎಚ್ಚರ!

ಬೆಂಗಳೂರು: ಐಪಿಎಲ್ ಪ್ರಿಯರಿಗೆ ಬೆಂಗಳೂರಿನಲ್ಲಿ ಬೈಕ್ ಕಳ್ಳರ ಕಾಟ ಶುರುವಾಗಿದ್ದು, ಚಿನ್ನಸ್ವಾಮಿ ಸ್ಟೇಡಿಯಂಗೆ ಮ್ಯಾಚ್ ನೋಡಲು ಬಂದ ಪ್ರೇಕ್ಷಕರ 15 ಬೈಕ್‍ಗಳನ್ನು ಕಳ್ಳರು ಕದ್ದು ಎಸ್ಕೇಪ್ ಆಗಿರೋ ಘಟನೆ ಕಬ್ಬನ್ ಪಾರ್ಕ್ ನಲ್ಲಿ ನಡೆದಿದೆ.

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಳೆದ 3 ಪಂದ್ಯಗಳ ವೇಳೆ ಈ ಘಟನೆ ನಡೆದಿದ್ದು, ಅಭಿಮಾನಿಗಳು ಕಬ್ಬನ್ ಪಾರ್ಕ್ ನಲ್ಲಿ ಬೈಕ್ ಪಾರ್ಕಿಂಗ್ ಮಾಡಿ ಆರ್‌ಸಿಬಿ ಹಾಗೂ ಚೆನ್ನೈ ಮ್ಯಾಚ್ ನೋಡಲು ಹೋಗಿದ್ದರು.

ಈ ವೇಳೆ ಬೈಕ್ ಕಳ್ಳರು ಕಬ್ಬನ್ ಪಾರ್ಕ್ ನಲ್ಲಿ ಪಾರ್ಕಿಂಗ್ ಮಾಡಿದ್ದ ಬೈಕ್ ಗಳನ್ನ ಕದ್ದು ಎಸ್ಕೇಪ್ ಆಗಿದ್ದಾರೆ. ಕಳೆದ 3 ಪಂದ್ಯಾವಳಿಗಳು ಸೇರಿ ಕಳ್ಳರು ಒಟ್ಟು 15 ಬೈಕ್ ಗಳನ್ನ ಕದ್ದು ಎಸ್ಕೇಪ್ ಆಗಿದ್ದಾರೆ. ಐಪಿಎಲ್ ನ್ನೇ ಬಂಡವಾಳ ಮಾಡಿಕೊಂಡ ಖರ್ತನಾಕ್ ಕಳ್ಳರು ಬೈಕ್ ಗಳನ್ನೇ ಕಳ್ಳತನ ಮಾಡುತ್ತಿದ್ದಾರೆ.

ಈ ಬಗ್ಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *