ಬೆಂಗಳೂರು: ಮನೆ, ಪ್ಲ್ಯಾಟ್ ಹಂಚಿಕೆಯ ನಿಬಂಧನೆಗಳಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(BDA) ಬದಲಾವಣೆ ಮಾಡಿದೆ. 10 ವರ್ಷ ಬೆಂಗಳೂರಿನಲ್ಲಿ (Bengaluru) ಕಡ್ಡಾಯವಾಗಿ ವಾಸ ಇರಬೇಕು ಎಂಬ ನಿಯಮವನ್ನು ಕೈ ಬಿಟ್ಟಿದ್ದು ಇನ್ನು ಮುಂದೆ ಹೊರ ರಾಜ್ಯದವರು ಬಿಡಿಎ ನಿವೇಶನ ಪಡೆಯಬಹುದು.
ಹೌದು. ಇಲ್ಲಿಯವರೆಗೆ ಬಿಡಿಎ ಮನೆ, ಸೈಟ್ ಪಡೆಯಲು ಬೆಂಗಳೂರಿನಲ್ಲಿ 10 ವರ್ಷ ವಾಸ ಇರಬೇಕು ಎಂಬ ನಿಯಮವನ್ನು ಬಿಡಿಎ ಹಾಕಿತ್ತು. ಆದರೆ ಈ ನಿಯಮವನ್ನು ಬಿಡಿಎ ಕೈ ಬಿಟ್ಟಿದೆ.
ಬಿಡಿಎ ನಿಬಂಧನೆಯನ್ನು ಕಳೆದ ಒಂದು ವರ್ಷದ ಹಿಂದೆ ಮಾಡಿದೆ. ಬಿಡಿಎ ನಿರ್ಮಿಸಿದ ಮನೆಗಳು ಮಾರಾಟವಾಗದ ಕಾರಣ ಮಾರಾಟ ಮಾಡುವ ಉದ್ದೇಶದಿಂದ ನಿಯಮ ಬದಲಾವಣೆ ಮಾಡಲಾಗಿದೆ ಎಂಬ ಸ್ಪಷ್ಟನೆ ಸಿಕ್ಕಿದೆ. ಇದನ್ನೂ ಓದಿ: ಕೋಲಾರ | ರಾಸಾಯನಿಕ ಬಳಸಿ ನಕಲಿ ಹಾಲು ತಯಾರಿಕೆ – ಐವರು ಅರೆಸ್ಟ್
ಬಿಡಿಎ ನಿಯಮ ಏನು ಹೇಳುತ್ತೆ?
ಬೆಂಗಳೂರಿನಲ್ಲಿ ವಿಳಾಸ ಇರಬೇಕು.
ಎರಡು ವರ್ಷ ಬೆಂಗಳೂರು ನಿವಾಸಿಯಾಗಿರಬೇಕು
ಆಧಾರ್ ಕಾರ್ಡ್‌ನಲ್ಲಿ ಬೆಂಗಳೂರಿನ ವಿಳಾಸ ಇರಬೇಕು
ಹೊರ ರಾಜ್ಯದವರು ಅರ್ಜಿ ಸಲ್ಲಿಕೆ ಮಾಡಿದರೆ ಮನೆ ಇಲ್ಲ.
ಹೊರ ರಾಜ್ಯದವರು ಆಗಿದ್ದು ಬೆಂಗಳೂರಿನಲ್ಲಿ 2 ವರ್ಷ ವಾಸ ಕಡ್ಡಾಯ.
ಈ ಬದಲಾವಣೆಯಿಂದ ಹೊರ ರಾಜ್ಯದವರಿಗೆ ಅನುಕೂಲವಾಗಲಿದೆ ಎಂಬ ಪ್ರಶ್ನೆಗೆ ಬಿಡಿಎ ಆರ್ಥಿಕ ಸದಸ್ಯ ಲೋಕೇಶ್ ಪ್ರತಿಕ್ರಿಯಿಸಿ, ಮನೆ ಬೇಕು ಎಂದು ಸಲ್ಲಿಸಿದ್ದ ಅರ್ಜಿ ಪೈಕಿ ಯಾವುದೇ ಬಾಕಿ ಇಲ್ಲ. ಎಲ್ಲರಿಗೂ ಮನೆಯನ್ನು ಕೊಟ್ಟಿದ್ದೇವೆ. ಇನ್ನೂ 2,400 ಮನೆಗಳು ಇದ್ದು ಅರ್ಜಿ ಹಾಕಿದರೆ ಮನೆ ನೀಡುತ್ತೇವೆ. ಅರ್ಜಿ ಹಾಕಿ ಮನೆ ಹಂಚಿಕೆಯಾಗಿಲ್ಲ ಎನ್ನುವುದು ಸುಳ್ಳು. ಸೈಟ್ ಖರೀದಿಗೆ ಮಾತ್ರ ನಿಯಮಗಳು ಇವೆ ಯಾವುದೇ ನಿಯಮಗಳು ಬದಲಾವಣೆ ಆಗಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಕೊನೆಗೂ ಟ್ರಂಪ್‌ಗೆ ಸಿಕ್ತು ನೊಬೆಲ್ ಶಾಂತಿ ಪ್ರಶಸ್ತಿ!

