ಮುಂಬೈ: 2024ರ ಟಿ20 ವಿಶ್ವಕಪ್ (T20 World Cup 2024) ವಿಜೇತ ಭಾರತ ತಂಡಕ್ಕೆ ಬಿಸಿಸಿಐ ನೀಡಿದ್ದ 125 ಕೋಟಿ ರೂ. ನಗದು ಬಹುಮಾನ (BCCI Prize Money) ಹಂಚಿಕೆ ಮಾಡಲಾಗಿದೆ.
ಟಿ20 ವಿಶ್ವಕಪ್‌ಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದ 15 ಆಟಗಾರರು, ಮೀಸಲು ಆಟಗಾರರು, ಕೋಚ್ ಹಾಗೂ ಸಹಾಯಕ ಸಿಬ್ಬಂದಿ ಸೇರಿದಂತೆ ಒಟ್ಟು 42 ಸದಸ್ಯರಿಗೆ ಬಿಸಿಸಿಐ ನಗದು ಬಹುಮಾನ ಪಡೆಯಲಿದ್ದಾರೆ. ಮುಖ್ಯಕೋಚ್ ರಾಹುಲ್ ದ್ರಾವಿಡ್ (Rahul Dravid) ಸೇರಿದಂತೆ ಟೂರ್ನಿಯಲ್ಲಿ ಒಂದೇ ಒಂದು ಪಂದ್ಯ ಆಟದ ಆಟಗಾರರಿಗೂ ನಗದು ಬಹುಮಾನ ವಿತರಿಸಲಾಗುವುದು ಎಂದು ಮಾಧ್ಯಮವೊಂದು ವರದಿ ಮಾಡಿದೆ. ಇದನ್ನೂ ಓದಿ: ಹ್ಯಾಟ್ರಿಕ್ ಸಿಕ್ಸರ್ – ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದ ಅಭಿಷೇಕ್ ಶರ್ಮಾ!
ಮುಖ್ಯಕೋಚ್ ರಾಹುಲ್ ದ್ರಾವಿಡ್, ವಿಶ್ವಕಪ್ ತಂಡಕ್ಕೆ ಆಯ್ಕೆಯಾದ 15 ಆಟಗಾರರು ತಲಾ 5 ಕೋಟಿ ರೂ. ಬಹುಮಾನ ಸ್ವೀಕರಿಸಿದ್ದಾರೆ. ಈ ಪೈಕಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸಹ ಸೇರಿದ್ದಾರೆ. ಅಲ್ಲದೇ ಮೀಸಲು ಆಟಗಾರರಾಗಿ ಆಯ್ಕೆಯಾಗಿದ್ದ ರಿಂಕು ಸಿಂಗ್, ಶುಭಮನ್ ಗಿಲ್, ಅವೇಶ್ ಖಾನ್ ಹಾಗೂ ಖಲೀಲ್ ಅಹ್ಮದ್ ಅವರಿಗೂ ತಲಾ 1 ಕೋಟಿ ರೂ. ಬಹುಮಾನ ಸಿಗಲಿದೆ.
ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್, ಫೀಲ್ಡಿಂಗ್ ಕೋಚ್ ಟಿ.ದಿಲೀಪ್ ಕುಮಾರ್ ಹಾಗೂ ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಸೇರಿದಂತೆ ಕೋಚಿಂಗ್ ಸಿಂಬ್ಬಂದಿಗೆ ತಲಾ 2.5 ಕೋಟಿ ರೂ. ಬಹುಮಾನ ಸಿಗಲಿದೆ. ಇನ್ನೂ ಮುಖ್ಯಸ್ಥ ಅಜಿತ್ ಅಗರ್ಕರ್ ಸೇರಿದಂತೆ ಆಯ್ಕೆ ಸಮಿತಿಯ ಸದಸ್ಯರಿಗೆ ತಲಾ 1 ಕೋಟಿ ರೂ. ವಿತರಿಸಲಾಗುತ್ತದೆ. ಇದನ್ನೂ ಓದಿ: T20 ಏಷ್ಯಾಕಪ್ ಟೂರ್ನಿಗೆ ಭಾರತ ಮಹಿಳಾ ತಂಡ ಪ್ರಕಟ – ಕನ್ನಡತಿ ಶ್ರೇಯಾಂಕಾಗೆ ಸ್ಥಾನ!
ಟೀಂ ಇಂಡಿಯಾ ಫಿಸಿಯೋಥೆರಪಿಸ್ಟ್‌ಗಳಾದ ಕಮಲೇಶ್ ಜೈನ್, ಯೋಗೇಶ್ ಪರ್ಮಾರ್ ಮತ್ತು ತುಳಸಿ ರಾಮ್ ಯುವರಾಜ್ಗೆ ತಲಾ 2 ಕೋಟಿ ರೂ., ಭಾರತ ತಂಡ ಥ್ರೋಡೌನ್ ಸ್ಪೆಷಲಿಸ್ಟ್ಗಳಾದ ರಾಘವಿಂದ್ರ ದಿವಿಗಿ, ನುವಾನ್ ಉದೆನೆಕೆ ಮತ್ತು ದಯಾನಂದ್ ಗರಾನಿಗೆ ತಲಾ 2 ಕೋಟಿ ರೂ., ಟೀಂ ಇಂಡಿಯಾ ಮಸಾಜ್ ಥೆರಪಿಸ್ಟ್‌ಗಳಾದ ರಾಜೀವ್ ಕುಮಾರ್ ಮತ್ತು ಅರುಣ್ ಕಾನಡೆಗೆ ತಲಾ 2 ಕೋಟಿ ರೂ., ಭಾರತ ತಂಡದ ಸ್ಟ್ರೆಂಗ್ತ್ ಅ್ಯಂಡ್ ಕಂಡೀಷನಿಂಗ್ ಕೋಚ್ ಸೋಹಮ್ ದೇಸಾಯಿಗೆ 2 ಕೋಟಿ ರೂ. ನೀಡಲಾಗುತ್ತದೆ ಎಂದು ವರದಿಗಳು ಹೇಳಿವೆ.
ಭಾರತ ವಿಶ್ವ ಚಾಂಪಿಯನ್:
ಕಳೆದ ಜೂನ್ 29ರಂದು ನಡೆದ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಗೆಲುವು ಸಾಧಿಸಿ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿಯಿತು. 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಎತ್ತಿ ಹಿಡಿದ ಭಾರತ ತಂಡ 20 ಕೋಟಿ ರೂ. ಬಹುಮಾನವನ್ನೂ ಬಾಚಿಕೊಂಡಿತು. ಈ ಬೆನ್ನಲ್ಲೇ ಬಿಸಿಸಿಐ 125 ಕೋಟಿ ರೂ. ಬಹುಮಾನ ಘೋಷಣೆ ಮಾಡಿತ್ತು. ಜೊತೆಗೆ ತವರಿಗೆ ಮರಳಿದ ಬಳಿಕ ಟೀಂ ಇಂಡಿಯಾಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸರ್ಕಾರದ ವತಿಯಿಂದ 11 ಕೋಟಿ ರೂ. ಬಹುಮಾನ ಘೋಷಿಸಿದರು. ಇದನ್ನೂ ಓದಿ: ಅಂದು ಅವಮಾನ, ಇಂದು ಸನ್ಮಾನ – ಟೀಕಿಸಿದ್ದ ಜನರೇ ಜೈಕಾರ ಕೂಗಿದ್ರು; ಭಾವುಕನಾದ ಪಾಂಡ್ಯ