ಮುಂಬೈ: ಬಿಸಿಸಿಐ ಸಂಸ್ಥೆಗೆ ಸುಪ್ರೀಂ ಕೋರ್ಟ್ ನೇಮಿಸಿರುವ ಆಡಳಿತ ಸಮಿತಿ(ಸಿಒಎ)ಯು ಬುಧವಾರ ಆಟಗಾರರ ಗುತ್ತಿಗೆ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಗುತ್ತಿಗೆಯ ವಾರ್ಷಿಕ ಒಪ್ಪಂದದ ಅನ್ವಯ ಬಿಸಿಸಿಐ ನೀಡುತ್ತಿರುವ ವೇತನದಲ್ಲಿ ಭಾರೀ ಏರಿಕೆಯಾಗಿದ್ದು ಧೋನಿಗಿಂತಲೂ ಭುವಿ ಹೆಚ್ಚಿನ ವೇತನವನ್ನು ಪಡೆಯಲಿದ್ದಾರೆ.
Advertisement
ಸಿಒಎ ಸಮಿತಿ ನೀಡಿರುವ ಪಟ್ಟಿಯ ಅನ್ವಯ ಹೊಸದಾಗಿ `ಎ ಪ್ಲಸ್’ ಶ್ರೇಣಿ ಯನ್ನು ಹೊಸದಾಗಿ ಪಟ್ಟಿಯಲ್ಲಿ ನೀಡಲಾಗಿದೆ. ಒಪ್ಪಂದವು 2017 ಅಕ್ಟೋಬರ್ ನಿಂದ 2018 ಸೆಪ್ಟೆಂಬರ್ ವರೆಗೆ ಅನ್ವಯವಾಗಲಿದೆ. ವಿಶೇಷವಾಗಿ ಹಿರಿಯ ಮಹಿಳೆಯರ ವಿಭಾಗ ತಂಡದಲ್ಲಿ ‘ಸಿ ಗ್ರೇಡ್’ ಪರಿಚಯ ಮಾಡಲಾಗಿದೆ.
Advertisement
`ಎ’ ಪ್ಲಸ್ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಆಟಗಾರರು ವಾರ್ಷಿಕವಾಗಿ 7 ಕೋಟಿ ರೂ. ಪಡೆಯಲಿದ್ದಾರೆ. ನಂತರದ ಸ್ಥಾನ ಎ, ಬಿ, ಸಿ, ಪಟ್ಟಿಯಲ್ಲಿ ಆಟಗಾರರಿಗೆ ಕ್ರಮವಾಗಿ 5, 3, 1 ಕೋಟಿ ಯನ್ನು ಪಡೆಯಲಿದ್ದಾರೆ.
Advertisement
ಪರಿಷ್ಕೃತ ಮೊತ್ತ ಪಟ್ಟಿ:
ಹಿರಿಯ ಪುರುಷರ ತಂಡ
‘ಎ ಪ್ಲಸ್’ ಶ್ರೇಣಿ: 7 ಕೋಟಿ ರೂ.
‘ಎ’ ಶ್ರೇಣಿ: 5 ಕೋಟಿ ರೂ.
‘ಬಿ’ ಶ್ರೇಣಿ: 3 ಕೋಟಿ ರೂ.
‘ಸಿ’ ಶ್ರೇಣಿ: 1 ಕೋಟಿ ರೂ.
Advertisement
ಹಿರಿಯ ಮಹಿಳಾ ತಂಡ
‘ಎ’ ಶ್ರೇಣಿ: 50 ಲಕ್ಷ ರೂ.
‘ಬಿ’ ಶ್ರೇಣಿ: 30 ಲಕ್ಷ ರೂ.
‘ಸಿ’ ಶ್ರೇಣಿ: 10 ಲಕ್ಷ ರೂ.
ಯಾವ ಆಟಗಾರರು ಯಾವ ಪಟ್ಟಿಯಲ್ಲಿದ್ದಾರೆ?
ಎ ಪ್ಲಸ್ ಶ್ರೇಣಿ: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್, ಜಸ್‍ಪ್ರೀತ್ ಬೂಮ್ರಾ ಮತ್ತು ಭುವನೇಶ್ವರ್ ಕುಮಾರ್.
`ಎ’ ಶ್ರೇಣಿ: ಮಹೇಂದ್ರ ಸಿಂಗ್ ಧೋನಿ, ಆರ್.ಅಶ್ವಿನ್, ರವೀಂದ್ರ ಜಡೇಜ, ವೃದ್ಧಿಮಾನ್ ಸಹಾ, ಮುರಳಿ ವಿಜಯ್, ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ.
`ಬಿ’ ಶ್ರೇಣಿ: ಉಮೇಶ್ ಯಾದವ್, ಕೆ.ಎಲ್.ರಾಹುಲ್, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ಹಾರ್ದಿಕ್ ಪಾಂಡ್ಯ, ಇಶಾಂತ್ ಶರ್ಮಾ ಮತ್ತು ದಿನೇಶ್ ಕಾರ್ತಿಕ್.
`ಸಿ’ ಶ್ರೇಣಿ: ಸುರೇಶ್ ರೈನಾ, ಕೇದಾರ್ ಜಾಧವ್, ಮನೀಷ್ ಪಾಂಡೆ, ಅಕ್ಷರ್ ಪಟೇಲ್, ಕರುಣ್ ನಾಯರ್, ಪಾರ್ಥಿವ್ ಪಟೇಲ್ ಮತ್ತು ಜಯಂತ್ ಯಾದವ್.
ಮಹಿಳಾ ಆಟಗಾರರ ಶ್ರೇಣಿ ಪಟ್ಟಿ:
`ಎ’ ಶ್ರೇಣಿ: ಮಿಥಾಲಿ ರಾಜ್, ಜೂಲನ್ ಗೋಸ್ವಾಮಿ, ಹರ್ಮನ್‍ಪ್ರೀತ್ ಕೌರ್ ಮತ್ತು ಸ್ಮೃತಿ ಮಂದಣ್ಣ
`ಬಿ’ ಶ್ರೇಣಿ: ಪೂನಮ್ ಯಾದವ್, ವೇದಾ ಕೃಷ್ಣಮೂರ್ತಿ, ರಾಜೇಶ್ವರಿ ಗಾಯಕವಾಡ್, ಏಕ್ತಾ ಬಿಷ್ಠ್, ಶಿಖಾ ಪಾಂಡೆ ಮತ್ತು ದೀಪ್ತಿ ಶರ್ಮಾ.
`ಸಿ’ ಶ್ರೇಣಿ: ಮಾನಸಿ ಜೋಶಿ, ಅನುಜಾ ಪಾಟೀಲ್, ಮೋನಾ ಮೆಷ್ರಮ್, ನುಜಾತ್ ಪರ್ವೀನ್, ಸುಷ್ಮಾ ವರ್ಮಾ, ಪೂನಮ್ ರೌತ್, ಜೆಮಿಮಾ ರಾಡ್ರಿಗಸ್, ಪೂಜಾ ವಸ್ತ್ರಾಕರ್ ಮತ್ತು ತಾನಿಯಾ ಭಾಟಿಯಾ.
ಸಮಿತಿಯ ನಿರ್ಣಾಯದ ಪಟ್ಟಿಯಲ್ಲಿ ದೇಶೀಯ ಆಟಗಾರ ವೇತನದಲ್ಲಿ ಶೇ. 200ರಷ್ಟು ಹೆಚ್ಚಳವಾಗಿದೆ. ಅಲ್ಲದೇ ವಯಸ್ಸಿನ ಆಧಾರದ ಮೇಲೆ ವಿಂಗಡಿಸಿರುವ ಸಮಿತಿ ಅಂಡರ್ 23 ತಂಡದ ಆಟಗಾರರು 17,500ರೂ. ಹಾಗೂ ಹೆಚ್ಚವರಿ ಆಟಗಾರರು 8,750 ರೂ. ವೇತನ ಪಡೆಯಲಿದ್ದಾರೆ.
ಪುರುಷ ತಂಡದ ಆಟಗಾರರ ದೈನಂದಿನ ವೇತನ ಪಟ್ಟಿ:
ಈ ಪಟ್ಟಿಯಲ್ಲಿ ಎರಡು ವಿಭಾಗವಿದ್ದು ತಂಡಕ್ಕೆ ಆಯ್ಕೆಯಾಗಿ ಅಂತಿಮ 11ರ ಪಟ್ಟಿಯಲ್ಲಿ ಆಡದ ಆಟಗಾರರನ್ನು ಮೀಸಲು ಆಟಗಾರರು ಎಂದು ಗುರುತಿಸಲಾಗಿದ್ದು, ಅವರಿಗೆ ಆಟಗಾರರ ಸಂಬಳದ ಅರ್ಧ ಹಣವನ್ನು ನೀಡಲಾಗುತ್ತದೆ.
ಹಿರಿಯರು: 35,000 ರೂ. ಮೀಸಲು: 17,500 ರೂ.
ಅಂಡರ್ 23: 17,500 ರೂ. ಮೀಸಲು: 8,750 ರೂ.
ಅಂಡರ್ 19: 10,500 ರೂ. ಮೀಸಲು: 5,250 ರೂ.
ಅಂಡರ್ 16: 3,500 ರೂ. ಮೀಸಲು: 1,750 ರೂ.
ಗುತ್ತಿಗೆ ಪಟ್ಟಿಯಿಂದ ಮಹಮದ್ ಶಮಿ ಔಟ್:
ಟೀಂ ಇಂಡಿಯಾ ವೇಗದ ಬೌಲರ್ ಮಹಮ್ಮದ್ ಶಮಿ ಅವರನ್ನು ಬಿಸಿಸಿಐ ಗುತ್ತಿಗೆ ಪಟ್ಟಿಯಿಂದ ಕೈಬಿಡಲಾಗಿದೆ. ಶಮಿ ತಮ್ಮ ಪತ್ನಿ ಮೇಲೆ ಕೌಟುಂಬಿಕ ದೌರ್ಜನ್ಯ ನಡೆಸಿರುವ ಆರೋಪ ಎದುರಿಸುತ್ತಿದ್ದಾರೆ. ಪತಿಯ ದೌರ್ಜನ್ಯದ ಕುರಿತು ದೂರು ನೀಡಿರುವ ಜಹಾನ್, ಸಾಮಾಜಿಕ ಜಾಲತಾಣಗಳಲ್ಲೂ ಈ ಮಾಹಿತಿಯನ್ನು ಹರಿಯಬಿಟ್ಟಿದ್ದರು. ಅದ್ದರಿಂದ ಗುತ್ತಿಗೆ ಪಟ್ಟಿ ಸೇರ್ಪಡೆಗೆ ಶಮಿ ಅವರ ಹೆಸರಿಗೆ ತಡೆ ನೀಡಲಾಗಿದೆ. ಆದರೆ ಶಮಿ ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ. ಬಿಸಿಸಿಐ ಉಳಿದಂತೆ 26 ಆಟಗಾರ ಪಟ್ಟಿ ಬಿಡುಗಡೆ ಮಾಡಿದೆ.
ಇತ್ತೀಚೆಗೆ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾದ ಸರಣಿಯಲ್ಲಿ ಮಹಮಮ್ಮದ್ ಶಮಿ ಉತ್ತಮ ಪ್ರದರ್ಶನ ನೀಡಿದ್ದರು. ಶಮಿ ಪತ್ನಿ ಹಸೀನ್ ಜಹಾನ್ ಕೌಟುಂಬಿಕ ದೌರ್ಜನ್ಯ ದೂರು ನೀಡಿದ ಕಾರಣ ಶಮಿ ಅವರ ಗುತ್ತಿಗೆ ನವೀಕರಿಸಲು ಮಂಡಳಿ ಮುಂದಾಗಲಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.