ಮುಂಬೈ: ಅಕ್ಟೋಬರ್ 16 ರಿಂದ ಆರಂಭವಾಗಲಿರುವ ಟೀಂ ಇಂಡಿಯಾಕ್ಕೆ (Team India) ಹೊಸ ಜೆರ್ಸಿ ಸಿದ್ಧವಾಗಿದ್ದು, ಇಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅನಾವರಣಗೊಳಿಸಿದೆ.
ಮುಂಬರುವ ಟಿ20 ವಿಶ್ವಕಪ್‌ನಲ್ಲಿ (T20 World Cup) ಟೀಂ ಇಂಡಿಯಾ ಆಟಗಾರರು ಹೊಸ ಲುಕ್‌ನಲ್ಲಿ (New Look) ಕಾಣಿಸಿಕೊಳ್ಳಲಿದ್ದಾರೆ. ಕಿಟ್ ಪ್ರಾಯೋಜಕತ್ವ ಹೊರತಂದಿರುವ ಎಂಪಿಎಲ್ ಸ್ಪೋರ್ಟ್ಸ್ (Sports) ಸಹಯೋಗದಲ್ಲಿ ಬಿಸಿಸಿಐ, ಭಾರತ ಪುರುಷ ಹಾಗೂ ಮಹಿಳಾ ಕ್ರಿಕೆಟ್ ತಂಡದ ಜೆರ್ಸಿ ( Indian Womens Cricket Team) ಅನಾವರಣಗೊಳಿಸಿದೆ.
Advertisement
To every cricket fan out there, this one’s for you.
Presenting the all new T20 Jersey – One Blue Jersey by @mpl_sport. #HarFanKiJersey#TeamIndia #MPLSports #CricketFandom pic.twitter.com/3VVro2TgTT
— BCCI (@BCCI) September 18, 2022
Advertisement
ಇದಕ್ಕೆ `ಒನ್ ಬ್ಲೂ ಜೆರ್ಸಿ’ ಎಂದು ಹೆಸರಿಟ್ಟಿದೆ. ಇದು ನೀಲಿ ಹಾಗೂ ರಾಯಲ್ ಬ್ಲೂ (ಕಡು ನೀಲಿ) ಬಣ್ಣದ ಮಿಶ್ರಣದಿಂದ ಕೂಡಿದೆ. ಐಸಿಸಿ ಟ್ವೆಂಟಿ-20 ವಿಶ್ವಕಪ್‌ಗೆ ಆಸ್ಟ್ರೇಲಿಯಾ ಯಾ ಆತಿಥ್ಯ ವಹಿಸುತ್ತಿದ್ದು, ಅಕ್ಟೋಬರ್ 16ರಿಂದ ನವೆಂಬರ್ 13ರ ವರೆಗೆ ಸಾಗಲಿದೆ.
Advertisement
Advertisement
ಇದಕ್ಕೂ ಮುನ್ನ ಭಾರತ ತಂಡವು ತವರಿನಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಯಲ್ಲಿ ಶಕ್ತಿ ಪ್ರದರ್ಶನ ನಡೆಸಲಿದೆ. ಸೆಪ್ಟೆಂಬರ್ 20 ರಿಂದ ಆಸ್ಟ್ರೇಲಿಯಾ ಹಾಗೂ ಸೆಪ್ಟಂಬರ್ 28 ರಿಂದ ದಕ್ಷಿಣ ಆಫ್ರಿಕಾದೊಂದಿಗೆ ಟಿ20 ಸರಣಿ ನಡೆಯಲಿದೆ.