ಮುಂಬೈ: ಐಪಿಎಲ್ ಟೂರ್ನಿಯಲ್ಲಿ ಬಳಕೆಯಾಗುತ್ತಿರುವ ಇಂಪ್ಯಾಕ್ಟ್ ಪ್ಲೇಯರ್ ನಿಮಯಕ್ಕೆ (Impact Player Rule) ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ (Rohit Sharma) ವಿರೋಧ ವ್ಯಕ್ತಪಡಿಸಿದ್ದರ ಕುರಿತು ಬಿಸಿಸಿಐ ಹಾಗೂ ಐಪಿಎಲ್ ಮಂಡಳಿ ಪ್ರತಿಕ್ರಿಯೆ ನೀಡಿದೆ.
ಇತ್ತೀಚೆಗಷ್ಟೇ ಪಾಡ್‌ಕಾಸ್ಟ್‌ವೊಂದರಲ್ಲಿ ಮಾತನಾಡಿದ್ದ ರೋಹಿತ್ ಶರ್ಮಾ, ಐಪಿಎಲ್‌ನಲ್ಲಿ (IPL 2024) ಬಳಸಲಾಗುತ್ತಿರುವ ಇಂಪ್ಯಾಕ್ಟ್ ಪ್ಲೇಯರ್ ನಿಯಮ ಅಂದ್ರೆ ಸಬ್‌ಸ್ಟಿಟ್ಯೂಷನ್ ಆಟಗಾರರನ್ನು ಕಣಕ್ಕಿಳಿಸುವ ನಿಯಮವು ಆಲ್‌ರೌಂಡರ್‌ಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಕ್ರಿಕೆಟ್ 11 ಆಟಗಾರರ ಕ್ರೀಡೆ, ಹಾಗಾಗಿ ಈ ನಿಯಮ ಜಾರಿಗೆ ತಂದಿರುವುದು ಒಳ್ಳೆಯದಲ್ಲ ಎಂದು ಅಸಮಾಧಾನ ಹೊರಹಾಕಿದ್ದರು. ಇದನ್ನೂ ಓದಿ: ಟಿ20 ವಿಶ್ವಕಪ್: ಐರ್ಲೆಂಡ್, ಸ್ಕಾಟ್ಲೆಂಡ್ ತಂಡಗಳಿಗೆ ಕರ್ನಾಟಕದ ‘ನಂದಿನಿ’ ಪ್ರಯೋಜಕತ್ವ
Advertisement
Advertisement
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅಧ್ಯಕ್ಷ ಅರುಣ್ ಧುಮಾಲ್ (Arun Dhumal), ರೋಹಿತ್ ಶರ್ಮಾ ಈ ಹಿಂದೆಯೂ ಇಂಪ್ಯಾಕ್ಟ್ ಪ್ಲೇಯರ್ ನಿಯಮದ ನ್ಯೂನತೆಗಳನ್ನ ತೋರಿಸಿದ್ದಾರೆ. ಪ್ರತಿಯೊಂದು ನಿಯಮಕ್ಕೂ ಅದರ ಸಾಧಕ ಬಾಧಕಗಳಿವೆ. ಪ್ರಸ್ತುತ ಐಪಿಎಲ್ ಸೀಸನ್ ಮುಗಿದ ಬಳಿಕ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಈ ನಿಯಮದ ಕುರಿತು ಪರಿಶೀಲಿಸಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರನ್ ಹೊಳೆಯಲ್ಲಿ ತೇಲಾಡಿದ ಸನ್ ರೈಸರ್ಸ್ – ಒಂದೇ ಇನ್ನಿಂಗ್ಸ್‌ನಲ್ಲಿ 4 ದಾಖಲೆ ಉಡೀಸ್!
Advertisement
Advertisement
ಏನಿದು ಇಂಪ್ಯಾಕ್ಟ್ ಪ್ಲೇಯರ್ ನಿಯಮ?
ಇಂಪ್ಯಾಕ್ಟ್ ಪ್ಲೇಯರ್ ಎಂದರೆ ಪಂದ್ಯದ ಪರಿಸ್ಥಿತಿಗೆ ಅನುಗುಣವಾಗಿ ಉಭಯ ತಂಡಗಳು ತಮ್ಮ ತಂಡದಲ್ಲಿನ ಒಬ್ಬ ಆಟಗಾರನನ್ನು ಬದಲಿಸುವ ಅವಕಾಶ ಪಡೆಯುವುದಾಗಿದೆ. ನಿಯಮದ ಪ್ರಕಾರ ತಂಡಗಳು ತಾವು ಘೋಷಿಸಿರುವ ತಂಡದಲ್ಲಿ ಒಬ್ಬ ಬೌಲರ್ ಬದಲಿಗೆ ಒಬ್ಬ ಬ್ಯಾಟ್ಸ್‌ಮನ್ ಅಥವಾ ಒಬ್ಬ ಬ್ಯಾಟ್ಸ್‌ಮನ್ ಬದಲಿಗೆ ಬೌಲರ್‌ಅನ್ನು ತಂಡಕ್ಕೆ ಸೇರಿಸಿಕೊಳ್ಳಬಹುದಾಗಿದೆ. ಇದರಿಂದ ಉಭಯ ತಂಡಗಳಿಗೆ ಒಬ್ಬ ಬ್ಯಾಟ್ಸ್‌ಮನ್ ಮತ್ತು ಬೌಲರ್ ಹೆಚ್ಚುವರಿ ಸಿಕ್ಕಂತೆ ಆಗುತ್ತದೆ. ಅಲ್ಲದೇ ಒಟ್ಟು ನಾಲ್ಕು ಜನ ಮೀಸಲು ಆಟಗಾರರು ಇರುವುದರಿಂದ ಪ್ಲೇಯಿಂಗ್-11 ನಲ್ಲಿರುವ ಆಟಗಾರರು ಗಾಯಕ್ಕೆ ತುತ್ತಾದಲ್ಲಿ ಮತ್ತೊಬ್ಬರನ್ನು ಫೀಲ್ಡಿಂಗ್‌ಗೆ ಬಳಸಿಕೊಳ್ಳುವ ಅವಕಾಶವೂ ಇದೆ.
ಇಂಪ್ಯಾಕ್ಟ್ ಪ್ಲೇಯರ್ ನಿಯಮ ಬಂದಿದ್ದು ಯಾವಾಗ?
ಆಸ್ಟ್ರೇಲಿಯಾದಲ್ಲಿ ಬಿಗ್‌ಬ್ಯಾಷ್ ಲೀಗ್‌ನಲ್ಲಿ ಮೊದಲು ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಪರಿಚಯಿಸಲಾಗಿತ್ತು. ಇದರಿಂದ ಸ್ಫೋರ್ತಿ ಪಡೆದ ಬಿಸಿಸಿಐ ಐಪಿಎಲ್ ಟೂರ್ನಿಯಲ್ಲಿ ಅಳವಡಿಸಲು ನಿರ್ಧರಿಸಿತು. ಆದ್ರೆ ಐಪಿಎಲ್‌ಗೂ ಮುನ್ನ 2022-23ರ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಮೊದಲ ಬಾರಿ ಈ ನಿಯಮವನ್ನು ಅಳವಡಿಸಿಕೊಂಡು ಪ್ರಯೋಗ ನಡೆಸಿತ್ತು. ಅದು ಸಕ್ಸಸ್ ಆದ ನಂತರ ಕಳೆದ ಎರಡು ಆವೃತ್ತಿಗಳಿಂದ ಐಪಿಎಲ್‌ನಲ್ಲಿ ಅನುಷ್ಠಾನಕ್ಕೆ ತರಲಾಯಿತು. ಇದನ್ನೂ ಓದಿ: ಏನಿದು ಕ್ರಿಕೆಟ್‌ನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಅಸ್ತ್ರ?
ರೋಹಿತ್ ಶರ್ಮಾ ಹೇಳಿದ್ದೇನು?
ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ನಾನು ಅಭಿಮಾನಿಯಲ್ಲ. ಜನರಿಗೆ ಸ್ವಲ್ಪ ಮನರಂಜನೆ ನೀಡುವ ಸಲುವಾಗಿ ಪಂದ್ಯದ ದೊಡ್ಡ ಭಾಗವನ್ನು ನೀವು ತೆಗೆದುಕೊಳ್ಳುತ್ತಿದ್ದೀರಿ. ಆದರೆ, ನೀವು ಕ್ರಿಕೆಟ್‌ನ ನಿಜವಾದ ಅಂಶವನ್ನು ನೋಡುವುದಾದರೆ, ನಾನು ಕೆಲವೊಂದು ಉದಾಹರಣೆಯನ್ನು ನೀಡುವುದಾದರೆ, ಭಾರತ ತಂಡಕ್ಕೆ ವಾಷಿಂಗ್ಟನ್ ಸುಂದರ್, ಶಿವಂ ದುಬೆ ಅವರಂಥ ಆಟಗಾರರು ಬೌಲ್ ಮಾಡುವುದೇ ಇಲ್ಲ. ಹಾಗಾಗಿ ಇದು ಒಳ್ಳೆಯ ಸಂಗತಿಯಲ್ಲ. ಈ ನಿಯಮದಿಂದ ನೀವು ಏನು ಸಾಧಿಸುತ್ತೀರೋ ನನಗೆ ಗೊತ್ತಿಲ್ಲ ಎಂದು ರೋಹಿತ್ ಶರ್ಮಾ ತಿಳಿಸಿದ್ದರು. ಇದನ್ನೂ ಓದಿ: IPL 2024: ರನ್ ಹೊಳೆ, ದಾಖಲೆಗಳ ಸುರಿಮಳೆ – ಐಪಿಎಲ್‌ನಲ್ಲಿ ಮತ್ತೊಂದು ಐತಿಹಾಸಿಕ ದಾಖಲೆ ಬರೆದ ಸನ್ ರೈಸರ್ಸ್